ಯಾವುದೇ ಹೂಡಿಕೆ ಇಲ್ಲದೆ ಸರ್ಕಾರ ನೀಡುತ್ತದೆ ಮಾಸಿಕ 3 ಸಾವಿರ ರೂ ಪಿಂಚಣಿ !
ಕೆಲವರು ಎಷ್ಟೇ ಕಷ್ಟಪಟ್ಟು ದುಡಿದರೂ ವೃದ್ಧಾಪ್ಯಕ್ಕಾಗಿ ಒಂದು ರೂಪಾಯಿ ಕೂಡಾ ಉಳಿಸುವುದು ಸಾಧ್ಯವಾಗುವುದಿಲ್ಲ. ಅಂಥವರಿಗಾಗಿ ಸರ್ಕಾರ ವಿಶೇಷ ಯೋಜನೆ ಜಾರಿಗೆ ತಂದಿದೆ.
ಬೆಂಗಳೂರು : ನಿವೃತ್ತಿಯ ನಂತರ ಪಿಂಚಣಿ ಪಡೆಯುವುದು ಪ್ರತಿಯೊಬ್ಬರಿಗೂ ಬಹಳ ಮುಖ್ಯ. ಗಳಿಕೆಯಲ್ಲಿ ಉಳಿತಾಯ ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಕೆಲವರು ದುಡಿದ ಸಂಬಳ ದಿನ ಸಾಗಿಸಲೇ ಸಾಕಾಗುವುದಿಲ್ಲ. ಅಂಥವರು ಉಳಿತಾಯ ಮಾಡುವುದು ಸಾಧ್ಯವಾಗದ ಮಾತು. ಉಳಿತಾಯವೇ ಇಲ್ಲ ಎಂದಾದ ಮೇಲೆ ಪಿಂಚಣಿ ಕೂಡಾ ದೂರದ ಮಾತು. ಕಟ್ಟಡ ಕಾರ್ಮಿಕರು ಬದುಕುವುದೇ ಹೀಗೆ. ಜೀವನವಿಡೀ ಕಷ್ಟಪಟ್ಟು ದುಡಿದರೂ ವೃದ್ಧಾಪ್ಯಕ್ಕಾಗಿ ಒಂದು ರೂಪಾಯಿ ಕೂಡಾ ಅವರ ಬಳಿ ಉಳಿಯುವುದಿಲ್ಲ. ಆಗ ಸಂಕಷ್ಟ ಎದುರಿಸುವಂತಾಗುತ್ತದೆ. ಈ ಸಮಸ್ಯೆಗಳನ್ನು ಪರಿಹರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವು ಯೋಜನೆಗಳನ್ನು ಜಾರಿಗೆ ತರುತ್ತಿವೆ.
ಯೋಜನೆಯ ಸಂಪೂರ್ಣ ವಿವರಗಳು:
ಇಂಥ ಪರಿಸ್ಥಿತಿಯಲ್ಲಿ ಹರಿಯಾಣ ರಾಜ್ಯ ಸರ್ಕಾರವು ಪ್ರಸ್ತುತ ಜಾರಿಗೊಳಿಸುತ್ತಿರುವ ಒಂದು ಅದ್ಭುತ ಯೋಜನೆ ಇದೆ. ಈ ಯೋಜನೆಯ ಹೆಸರು “ನಿರ್ಮಾಣ ಕಾರ್ಮಿಕರ ಪಿಂಚಣಿ ಯೋಜನೆ ”. ಈ ಯೋಜನೆಯ ಪ್ರಕಾರ ಕಟ್ಟಡ ಕಾರ್ಮಿಕರಿಗೆ ಪಿಂಚಣಿಯಾಗಿ 3000 ರೂ. ನೀಡಲಾಗುತ್ತದೆ. 60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಕಟ್ಟಡ ಕಾರ್ಮಿಕರು ಈ ಯೋಜನೆಯ ಪ್ರಯೋಜನಗಳನ್ನು ಪಡೆಯಬಹುದು. ಈ ಯೋಜನೆ ಲಾಭ ಪಡೆಯಲು ಇಚ್ಚಿಸುವವರು ಸರ್ಕಾರಕ್ಕೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಆದರೆ, ಅರ್ಜಿದಾರರು ಕಾರ್ಮಿಕ ಮಂಡಳಿಯ ಸದಸ್ಯರಾಗಿರುವುದು ಕಡ್ಡಾಯವಾಗಿದೆ. ಇದನ್ನು ಹೊರತುಪಡಿಸಿ, ಅರ್ಜಿದಾರರು ಯಾವುದೇ ಇತರ ಇಲಾಖೆ/ನಿಗಮ/ಮಂಡಳಿ ಯೋಜನೆಯ ಫಲಾನುಭವಿಯಾಗಿರಬಾರದು.
ಇದನ್ನೂ ಓದಿ : Great Business Ideas: ಶೂನ್ಯ ಬಂಡವಾಳದಿಂದ ಈ ಬ್ಯುಸಿನೆಸ್ ಆರಂಭಿಸಿ ಕೈತುಂಬಾ ಗಳಿಸಿ
ಯೋಜನೆಯ ಪ್ರಯೋಜನ ಪಡೆಯುವುದು ಹೇಗೆ? :
ಈ ಯೋಜನೆಯ ಪ್ರಯೋಜನವನ್ನು ಪಡೆಯಬೇಕಾದರೆ ಪೋರ್ಟಲ್‌ಗೆ ಭೇಟಿ ನೀಡುವ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಇದಕ್ಕೆ ಕೆಲವು ದಾಖಲೆಗಳು ಬೇಕಾಗುತ್ತವೆ. ಹರಿಯಾಣ ನಿವಾಸಿಯಾಗಿರುವ ಪುರಾವೆ/ಶಾಶ್ವತ ಪ್ರಮಾಣಪತ್ರ, ಬ್ಯಾಂಕ್ ವಿವರಗಳು, ಆಧಾರ್ ಕಾರ್ಡ್, ವಯಸ್ಸಿನ ಪ್ರಮಾಣಪತ್ರ, ನಿರ್ಮಾಣ ಕಾರ್ಮಿಕ ಮಂಡಳಿಯ ನೋಂದಣಿ ಸಂಖ್ಯೆ, ಪಾಸ್‌ಪೋರ್ಟ್ ಗಾತ್ರದ ಫೋಟೋ, , ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಗಳನ್ನು ಹೊಂದಿರಬೇಕಾಗುತ್ತದೆ.
ಆನ್‌ಲೈನ್‌ನಲ್ಲಿ ನೋಂದಾಯಿಸುವುದು ಹೇಗೆ ? :
* ಹರಿಯಾಣ ಕಟ್ಟಡ ನಿರ್ಮಾಣ ಕಾರ್ಮಿಕರ ಪಿಂಚಣಿ ಯೋಜನೆಯ ಪ್ರಯೋಜನಗಳನ್ನು ಪಡೆಯಲು, ಅರ್ಜಿದಾರರು ಮೊದಲು https://saralharyana.gov.in/citizenRegistration.html ಗೆ ಭೇಟಿ ನೀಡುವ ಮೂಲಕ ನೋಂದಾಯಿಸಿಕೊಳ್ಳಬೇಕು .
* ನೋಂದಾಯಿಸಲು, ಈ ಕೆಳಗಿನ ವಿವರಗಳನ್ನು ಭರ್ತಿ ಮಾಡಿ:-
ಅರ್ಜಿದಾರರ ಹೆಸರು.
ಇಮೇಲ್ ವಿಳಾಸ.
ಆಧಾರ್ ಕಾರ್ಡ್.
ಮೊಬೈಲ್ ನಂಬರ.
ರಾಜ್ಯದ ಹೆಸರು
* ನೋಂದಣಿ ನಂತರ, ಮೊಬೈಲ್‌ನಲ್ಲಿ ಸ್ವೀಕರಿಸಿದ ಬಳಕೆದಾರ ಐಡಿ ಮತ್ತು ಪಾಸ್‌ವರ್ಡ್‌ನೊಂದಿಗೆ ಲಾಗಿನ್ ಮಾಡಬೇಕು.
ಇದನ್ನೂ ಓದಿ : ನಿರಂತರವಾಗಿ ಕುಸಿಯುತ್ತಲೇ ಇದೆ ಚಿನ್ನ ಬೆಳ್ಳಿ ಬೆಲೆ ! ಇಂದಿನ ಬೆಲೆ ತಿಳಿದುಕೊಳ್ಳಿ
* ಪೋರ್ಟಲ್‌ಗೆ ಲಾಗ್ ಇನ್ ಆದ ನಂತರ, ಯೋಜನೆಗಳ ಪಟ್ಟಿಯನ್ನು ಆಯ್ಕೆ ಮಾಡಬೇಕು.
* ಅರ್ಜಿಯ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿದ ನಂತರ, ಅಗತ್ಯವಿರುವ ದಾಖಲೆಗಳನ್ನು ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಬೇಕು.
* ಅರ್ಜಿಯನ್ನು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸುತ್ತಾರೆ.
* ಪರಿಶೀಲನೆಯ ನಂತರ, ಮಾಸಿಕ ಪಿಂಚಣಿಯಾಗಿ 3,000/- ಫಲಾನುಭವಿಯ ಬ್ಯಾಂಕ್ ಖಾತೆಗೆ ರವಾನೆಯಾಗುತ್ತದೆ.
* ಪೋರ್ಟಲ್‌ನಲ್ಲಿ ಲಭ್ಯವಿರುವ ಟ್ರ್ಯಾಕ್ ಅಪ್ಲಿಕೇಶನ್ ಮೂಲಕ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅಪ್ಲಿಕೇಶನ್ ಸ್ಥಿತಿಯನ್ನು ಟ್ರ್ಯಾಕ್ ಮಾಡಬಹುದು.
* ಅಲ್ಲದೆ, ಬಳಕೆದಾರರು ತಮ್ಮ ನೋಂದಾಯಿತ ಸಂಖ್ಯೆಯಿಂದ 9954699899 ಗೆ SARAL<Space>ಅಪ್ಲಿಕೇಶನ್ ಐಡಿಯನ್ನು SMS ಕಳುಹಿಸುವ ಮೂಲಕ ಅಪ್ಲಿಕೇಶನ್ ಸ್ಥಿತಿಯನ್ನು ಆಫ್‌ಲೈನ್‌ನಲ್ಲಿ ಪರಿಶೀಲಿಸಬಹುದು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.