Appraisal: ತನ್ನ ಆಪ್ರೇಸಲ್ ತಾನೇ ಮಾಡಿಕೊಂಡು 10 ಪಟ್ಟು ವೇತನ ಹೆಚ್ಚಿಸಿಕೊಂಡ ಮಹಿಳಾ ಬಾಸ್
Zilingo Salary Hike: 2017 ರಲ್ಲಿ ಅಂಕಿತಿ ಬೋಸ್ ಅವಳ ಸಂಬಳ 5500 ಸಿಂಗಾಪುರ್ ಡಾಲರ್ ಗಳಷ್ಟಾಗಿತ್ತು. ಭಾರತೀಯ ಕರೆನ್ಸಿಯಲ್ಲಿ ಇದು 3,37,137.24 ರೂ. ಗಳಷ್ಟಾಗುತ್ತದೆ. ಆದರೆ ಕೇವಲ ಎರಡು ವರ್ಷಗಳಲ್ಲಿ ಅಂದರೆ 2019 ರಲ್ಲಿ ಅಂಕಿತಿಯ ಸಂಬಳ 58,900 ಸಿಂಗಾಪುರ್ ಡಾಲರ್ ಗಳಷ್ಟಾಗಿದೆ ಅಂದರೆ 36,10,279.55 ರೂ. ಎಂದರ್ಥ. ಅಂದರೆ ನೇರ 10 ಪಟ್ಟು ಹೆಚ್ಚಳ.
Appraisal: ನೌಕರ ವರ್ಗದ ಜನರಿಗೆ ಆಪ್ರೇಸಲ್ ಲೆಟರ್ ಸಿಗುವ ದಿನಗಳು ಹತ್ತಿರವಾಗುತ್ತಿವೆ. ಯಾರ ಸಂಬಳ ಎಷ್ಟು ಹೆಚ್ಚಾಗಲಿದೆ ಎಂಬ ಚರ್ಚೆಗಳು ಎಲ್ಲಾ ಕಚೇರಿಗಳಲ್ಲಿ ಸಾಮಾನ್ಯವಾಗಿ ನಡೆಯಲಾರಂಭಿಸಿವೆ. ಆದರೆ ಎರಡು ವರ್ಷಗಳಲ್ಲಿ ತನ್ನ ವೇತನವನ್ನು 1-2 ಪಟ್ಟು ಅಲ್ಲ 10 ಪಟ್ಟು ಹೆಚ್ಚಿಸಿಕೊಂಡ ಮಹಿಳಾ ಬಾಸ್ ಬಗ್ಗೆ ಇಂದು ನಾವು ನಿಮಗೆ ಮಾಹಿತಿಯನ್ನು ನೀಡುತ್ತಿದ್ದೇವೆ.
ಇವರು ಜಿಲಿಂಗೊದ ಮಾಜಿ CEO ಮತ್ತು ಭಾರತೀಯ ಮೂಲದ ಅಂಕಿತಿ ಬೋಸ್. ಜಿಲಿಂಗೋ ಸಿಂಗಾಪುರದ ಫ್ಯಾಶನ್ ಟೆಕ್ ಸಂಸ್ಥೆಯಾಗಿದೆ. ಅಂಕಿತಿ ಬೋಸ್ ಕಳೆದ ವರ್ಷ ಸಾಕಷ್ಟು ಸುದ್ದಿ ಮಾಡಿದ್ದರು. ಖಾತೆಗಳಲ್ಲಿ ಅವ್ಯವಹಾರ ನಡೆದಿದ್ದರಿಂದ ಅವರನ್ನು ಕಂಪನಿಯಿಂದ ವಜಾಗೊಳಿಸಲಾಗಿತ್ತು. ಆಡಳಿತ ಮಂಡಳಿಯ ಅನುಮತಿ ಇಲ್ಲದೇ 10 ಪಟ್ಟು ವೇತನ ಹೆಚ್ಚಿಸಿಕೊಂಡಿದ್ದರು. ಅವರು ಈ ಕಂಪನಿಯ ಸಹ ಸಂಸ್ಥಾಪಕರೂ ಹೌದು.
ಈ ಆರೋಪಗಳು ಕೇಳಿಬಂದಿದ್ದವು
INC42 ರ ವರದಿಯ ಪ್ರಕಾರ, 2017 ರಲ್ಲಿ ಅಂಕಿತಿ ಬೋಸ್ ಅವರ ಸಂಬಳ 5500 ಸಿಂಗಾಪುರ್ ಡಾಲರ್ ಗಳಷ್ಟಾಗಿತ್ತು. ಭಾರತೀಯ ಕರೆನ್ಸಿಯಲ್ಲಿ ಇದು 3,37,137.24 ರೂ.ಗಲಾಗಿದೆ. ಆದರೆ ಕೇವಲ ಎರಡು ವರ್ಷಗಳಲ್ಲಿ ಅಂದರೆ 2019 ರಲ್ಲಿ ಅಂಕಿತಿಯ ಸಂಬಳ 58,900 ಸಿಂಗಾಪುರ್ ಡಾಲರ್ ಅಂದರೆ 36,10,279.55 ರೂ.ಗಳಿಗೆ ಹೆಚ್ಚಾಗಿದೆ. ಇದರರ್ಥ ನೇರ 10 ಪಟ್ಟು ಹೆಚ್ಚಳ ಎಂದಾಗುತ್ತದೆ. ಕಂಪನಿಯ ಮಂಡಳಿಯು 2022 ರಲ್ಲಿ ಹಣಕಾಸಿನ ಅಕ್ರಮಗಳ ಆರೋಪವನ್ನು ಅಂಕಿತಿಯ ಮೇಲೆ ಹೊರಸಿತ್ತು.
ಇದನ್ನೂ ಓದಿ-OMG! ತನ್ನ ನೌಕರನೊಬ್ಬನಿಗೆ 1500 ಕೋಟಿ ರೂ. ಮೌಲ್ಯದ ಬಂಗಲೆಯನ್ನು ಉಡುಗೊರೆಯಾಗಿ ನೀಡಿದ ಮುಕೇಶ್ ಅಂಬಾನಿ!
ಈ ಅಕ್ರಮಗಳು ಬಹಿರಂಗವಾದಾಗ, ಅಂಕಿತಿ ಬೋಸ್ ಅವರನ್ನು ಸಿಇಒ ಹುದ್ದೆಯಿಂದ ವಜಾಗೊಳಿಸಲಾಯಿತು. ಕಂಪನಿಯಿಂದ ವಜಾಗೊಳಿಸಿದ ನಂತರ ಸ್ಟಾರ್ಟಪ್‌ನಿಂದ ಅಕ್ರಮವಾಗಿ ಹಣ ಪಡೆದಿದ್ದಾರೆ ಎಂದು ಆರೋಪಿಸಿ ಹೂಡಿಕೆದಾರ ಮಹೇಶ್ ಮೂರ್ತಿ ವಿರುದ್ಧ ಅಂಕಿತಿ ಪ್ರಕರಣ ದಾಖಲಿಸಿರುವ ಸಮಯದಲ್ಲಿ ಅಂಕಿತಿ ಬಗ್ಗೆ ಈ ಮಾಹಿತಿಯು ಗಮನಕ್ಕೆ ಬಂದಿದೆ. ಅಂಕಿತಿ ಬೋಸ್ ಅವರು ಮಹೇಶ್ ಮೂರ್ತಿ ವಿರುದ್ಧ 100 ಮಿಲಿಯನ್ ಡಾಲರ್ ಅಂದರೆ 820 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ಇದನ್ನೂ ಓದಿ-RBI: ಮತ್ತೊಂದು ಬ್ಯಾಂಕಿನ ಲೈಸನ್ಸ್ ರದ್ದುಗೊಳಿಸಿದೆ ಆರ್ಬಿಐ
ಇವರ ವೇತನವೂ ಹೆಚ್ಚಾಗಿದೆ
2015 ರಲ್ಲಿ, ಧ್ರುವ ಕಪೂರ್ ಮತ್ತು ಅಂಕಿತಿ ಬೋಸ್ B2B ಸ್ಟಾರ್ಟ್ಅಪ್ ಜಿಲಿಂಗೋವನ್ನು ಆರಂಭಿಸಿದ್ದರು. 2022 ರಲ್ಲಿ, ಈ ಕಂಪನಿಯನ್ನು ಯುನಿಕಾರ್ನ್‌ನಲ್ಲಿ ಸೇರಿಸಲಾಯಿತು. ದೊಡ್ಡ ಪ್ರಮಾಣದಲ್ಲಿ ಆರ್ಡರ್‌ಗಳ ಪೂರೈಕೆಗೆ ಚಿಲ್ಲರೆ ಮಾರಾಟಗಾರರಿಗೆ ವೇದಿಕೆಯನ್ನು ಒದಗಿಸುವುದು ಇದರ ಕೆಲಸವಾಗಿತ್ತು. ಅಂಕಿತಿ ತನ್ನ ವೇತನವನ್ನು ಮಾತ್ರವಲ್ಲದೆ 2017-19 ರ ನಡುವೆ ಸಂಸ್ಥಾಪಕ ಧ್ರುವ ಕಪೂರ್ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆದಿ ವೈದ್ಯ ಅವರ ವೇತನವನ್ನು ಹೆಚ್ಚಿಸಿದ್ದಾರೆ ಎಂದು ತಿಳಿದು ಬಂದಿದೆ. ಆದಿ ವೈದ್ಯನ ವೇತನವನ್ನು 7 ಪಟ್ಟು ಹೆಚ್ಚಿಸಲಾಗಿದೆ ಮತ್ತು ಧ್ರುವನ ವೇತನ ಮೂರು ಪಟ್ಟು ಹೆಚ್ಚಿಸಲಾಗಿದೆ.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.