Women's Day 2024: ಇಂದು (ಮಾರ್ಚ್ 08) ಪ್ರಪಂಚದಾದ್ಯಂತ ಅಂತರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಕೆಲವರು ತಮ್ಮ ತಾಯಿ, ಸಹೋದರಿ, ಸಂಗಾತಿಗೆ ಹಲವು ರೀತಿಯ ಉಡುಗೊರೆಗಳನ್ನು ನೀಡುತ್ತಾರೆ. ನೀವು ಈ ಬಾರಿಯ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಯಾರಿಗಾದರೂ ಉಡುಗೊರೆ ನೀಡಲು ಬಯಸುತ್ತಿದ್ದರೆ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಕೂಡ ಉಡುಗೊರೆಯಾಗಿ ನೀಡಬಹುದು. ಈ ಲೇಖನದಲ್ಲಿ ನಾವು ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಅತ್ಯುತ್ತಮ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬಗ್ಗೆ ತಿಳಿಯೋಣ... 


COMMERCIAL BREAK
SCROLL TO CONTINUE READING

76000 ರೂ.ಗಳಿಂದ 1.29 ಲಕ್ಷ ರೂ. ನಡುವೆ ಲಭ್ಯವಿರುವ ಎಲೆಕ್ಟ್ರಿಕ್ ಸ್ಕೂಟರ್‌ಗಳು:
ಮಹಿಳೆಯರಿಗಾಗಿ ಕೆಲವು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಅತ್ಯುತ್ತಮ ಸ್ಕೂಟರ್‌ಗಳು ಎಂದು ಹೇಳಲಾಗುತ್ತದೆ. ವಿಶೇಷವೆಂದರೆ,  ಈ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬೆಲೆ 76000 ರೂ.ಗಳಿಂದ ಆರಂಭವಾಗಿ 1.29 ಲಕ್ಷ ರೂ. ವರೆಗೆ ಇರುತ್ತದೆ. ಅಂತಹ ಕೆಲವು ಆಯ್ಕೆಗಳೆಂದರೆ... 


ಒಡಿಸ್ಸೆ ರೇಸರ್ ಲೈಟ್ ವಿ2: 
ಒಡಿಸ್ಸೆ ರೇಸರ್ ಲೈಟ್ ವಿ2 ಎಲೆಕ್ಟ್ರಿಕ್ ಸ್ಕೂಟರ್ ಬೆಲೆ 76250 ರೂ.. ಶಕ್ತಿಯುತ ಮತ್ತು ಜಲನಿರೋಧಕ ಮೋಟಾರ್‌ನೊಂದಿಗೆ ಬರುವ ಈ ಸ್ಕೂಟರ್‌ನ ಲಿಥಿಯಂ ಐಯಾನ್ ಬ್ಯಾಟರಿಯು 3 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗುತ್ತದ. ಅಷ್ಟೇಯಲ್ಲ,ಈ ಎಲೆಕ್ಟ್ರಿಕ್ ಸ್ಕೂಟರ್ ಸಂಪೂರ್ಣ ಚಾರ್ಜ್‌ನಲ್ಲಿ 75 ಕಿಮೀ ವ್ಯಾಪ್ತಿಯನ್ನು ನೀಡುತ್ತದೆ.  ಒಡಿಸ್ಸೆ ರೇಸರ್ ಲೈಟ್ ವಿ2 ಸ್ಕೂಟರ್ ಎಲ್ಇಡಿ ದೀಪಗಳು ಮತ್ತು ದೊಡ್ಡ ಬೂಟ್ ಸ್ಪೇಸ್ ಹೊಂದಿದೆ. ಇದಲ್ಲದೆ, ಸ್ಕೂಟರ್‌ನಲ್ಲಿ ಆಂಟಿ ಥೆಫ್ಟ್ ಲಾಕ್ ಲಭ್ಯವಿದೆ. ಈ ಸ್ಕೂಟರ್ 5 ಬಣ್ಣದ ಆಯ್ಕೆಗಳೊಂದಿಗೆ ಲಭ್ಯವಿದೆ. 


ಇದನ್ನೂ ಓದಿ- Cards : ಕ್ರೆಡಿಟ್ ಕಾರ್ಡ್‌ಗಳಿಗೆ ಆರ್‌ಬಿಐ ರೂಪಿಸಿದೆ ಹೊಸ ನಿಯಮ !ಕ್ರೆಡಿಟ್ ಕಾರ್ಡ್‌ದರಾರು ತಿಳಿಯಬೇಕಾದ ವಿಚಾರ


ಆಂಪಿಯರ್ ಮ್ಯಾಗ್ನಸ್: 
ಆಂಪಿಯರ್ ಮ್ಯಾಗ್ನಸ್ ಎಲೆಕ್ಟ್ರಿಕ್ ಸ್ಕೂಟರ್‌ನ ಬೆಲೆ 93900 ರೂ. ಮತ್ತು ಈ ಸ್ಕೂಟರ್ ಯುಎಸ್‌ಬಿ ಪೋರ್ಟ್‌ನೊಂದಿಗೆ ಬರುತ್ತದೆ.  ಆಂಪಿಯರ್ ಮ್ಯಾಗ್ನಸ್ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಎಲ್‌ಸಿಡಿ ಸ್ಕ್ರೀನ್, ಕೀ ಲೆಸ್ ಎಂಟ್ರಿ, ಆ್ಯಂಟಿ ಥೆಫ್ಟ್ ಅಲಾರ್ಮ್ ಸೇರಿದಂತೆ ಹಲವು ಫೀಚರ್‌ಗಳು ಲಭ್ಯವಿದೆ. ಸ್ಕೂಟರ್ 1.2 kw ಮೋಟಾರ್ ಹೊಂದಿದ್ದು ಇದರ ಗರಿಷ್ಠ ವೇಗ ಗಂಟೆಗೆ 55 ಕಿಮೀ. ಬ್ಯಾಟರಿ ಸಾಮರ್ಥ್ಯವು 30 Ah ಆಗಿದೆ. ಇದು 6-7 ಗಂಟೆಗಳಲ್ಲಿ 0-100 ಪ್ರತಿಶತದಷ್ಟು ಚಾರ್ಜ್ ಆಗುತ್ತದೆ. ಈ ಸ್ಕೂಟರ್ ಒಂದೇ ಚಾರ್ಜ್‌ನಲ್ಲಿ 121 ಕಿಲೋಮೀಟರ್‌ಗಳ ವ್ಯಾಪ್ತಿಯನ್ನು ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. 


ಹೀರೋ ಎಲೆಕ್ಟ್ರಿಕ್ ಆಪ್ಟಿಮಾ ಸಿ‌ಎಕ್ಸ್: 
ಹೀರೋ ಎಲೆಕ್ಟ್ರಿಕ್ ಆಪ್ಟಿಮಾ ಸಿ‌ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ 1.06 ಲಕ್ಷ ರೂ. ಸ್ಕೂಟರ್ 550 ವ್ಯಾಟ್ ಮೋಟಾರ್ ಹೊಂದಿದ್ದು ಇದು ಗರಿಷ್ಠ 1.2 bhp ಶಕ್ತಿಯನ್ನು ಉತ್ಪಾದಿಸುತ್ತದೆ. ಈ ಎಲೆಕ್ಟ್ರಿಕ್ ಸ್ಕೂಟರ್ 4-5 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗುತ್ತದೆ. ಈ ಹೀರೋ ಎಲೆಕ್ಟ್ರಿಕ್ ಆಪ್ಟಿಮಾ ಸಿ‌ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಸಿಂಗಲ್ ಮತ್ತು ಡ್ಯುಯಲ್ ಬ್ಯಾಟರಿ ರೂಪಾಂತರಗಳಲ್ಲಿ ಲಭ್ಯವಿದೆ. ಸ್ಕೂಟರ್‌ನ ಡಬಲ್ ಬ್ಯಾಟರಿ ಆವೃತ್ತಿಯು 140 ಕಿಮೀ ವ್ಯಾಪ್ತಿಯನ್ನು ನೀಡುತ್ತದೆ ಮತ್ತು ಅದರ ಗರಿಷ್ಠ ವೇಗ ಗಂಟೆಗೆ 45 ಕಿಮೀ ಆಗಿರಲಿದೆ. 


ಇದನ್ನೂ ಓದಿ- Gratuity ಸಂಬಂಧಿಸಿದಂತೆ ಮೋದಿ ಸರ್ಕಾರದ ಮಹತ್ವದ ನಿರ್ಧಾರ, ಈಗ ಇಷ್ಟು ಲಕ್ಷದವರೆಗೆ ಇರಲ್ಲ ತೆರಿಗೆ


ಓಕಿನಾವಾ ರಿಡ್ಜ್ 100: 
ಓಕಿನಾವಾ ರಿಡ್ಜ್ 100 ಎಲೆಕ್ಟ್ರಿಕ್ ಸ್ಕೂಟರ್ ಬೆಲೆ 1,15,311 ರೂ. ಈ ಸ್ಕೂಟರ್ ಮೂರು ಬಣ್ಣ ರೂಪಾಂತರಗಳಲ್ಲಿ ಲಭ್ಯವಿದೆ. ಓಕಿನಾವಾ ರಿಡ್ಜ್ 100 ಎಲೆಕ್ಟ್ರಿಕ್ ಸ್ಕೂಟರ್ 800 ವ್ಯಾಟ್‌ಗಳ ಶಕ್ತಿಯುತ ಮೋಟಾರ್ ಮತ್ತು ಎಲೆಕ್ಟ್ರಿಕ್ ಅಸಿಸ್ಟ್ ಬ್ರೇಕಿಂಗ್ ವ್ಯವಸ್ಥೆಯನ್ನು ಹೊಂದಿದೆ. ಸ್ಕೂಟರ್‌ನ ಮುಂಭಾಗ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಲಭ್ಯವಿದ್ದು, ಈ ಸ್ಕೂಟರ್ 5-6 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗುತ್ತದೆ ಮತ್ತು ಪೂರ್ಣ ಚಾರ್ಜ್ ಮಾಡಿದರೆ 50 kmph ವೇಗವನ್ನು ನೀಡುತ್ತದೆ. ಈ ಸ್ಕೂಟರ್ ಒಂದು ಬಾರಿ ಫುಲ್ ಚಾರ್ಜ್ ಮಾಡಿದರೆ 149 ಕಿ.ಮೀ. ವ್ಯಾಪ್ತಿಯನ್ನು ನೀಡಬಲ್ಲದು. ಇದರಲ್ಲಿ ಸೆಂಟ್ರಲ್ ಲಾಕಿಂಗ್, ಆಂಟಿ-ಥೆಫ್ಟ್ ಸಿಸ್ಟಮ್, ಜಿಯೋ ಫೆನ್ಸಿಂಗ್, ಪಾರ್ಕಿಂಗ್ ನೆರವು, ಟ್ರ್ಯಾಕಿಂಗ್ ಮತ್ತು ಮಾನಿಟರಿಂಗ್‌ನಂತಹ ಅನೇಕ ಸುಧಾರಿತ ವೈಶಿಷ್ಟ್ಯಗಳು ಲಭ್ಯವಿದೆ. 


ಓಲಾ ಎಸ್1: 
ಮಹಿಳೆಯರಿಗಾಗಿ ಅತ್ಯುತ್ತಮವಾದ ಮತ್ತೊಂದು ಎಲೆಕ್ಟ್ರಿಕ್ ಸ್ಕೂಟರ್ ಎಂದರೆ ಓಲಾ ಎಸ್1 ಮತ್ತು ಅದರ ಎಕ್ಸ್ ಶೋ ರೂಂ ಬೆಲೆ 1,29,999 ರೂ. ಈ ಸ್ಕೂಟರ್ ಅನೇಕ ಸುಧಾರಿತ ವೈಶಿಷ್ಟ್ಯಗಳನ್ನು ಹೊಂದಿದೆ. ಓಲಾ ಎಸ್1 ಸ್ಕೂಟರ್ 8.5 kwh ಬ್ಯಾಟರಿ ಹೊಂದಿದೆ. ಇದು ಸ್ಕೂಟರ್ ರಿಮೋಟ್ ಲಾಕ್ ಅಥವಾ ಅನ್ಲಾಕ್, ಜಿಪಿಎಸ್, ಆಂಟಿ-ಥೆಫ್ಟ್ ಎಚ್ಚರಿಕೆಗಳಂತಹ ವೈಶಿಷ್ಟ್ಯಗಳನ್ನು ಸಹ ಒಳಗೊಂಡಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.