Small Scheme: ಮಹಿಳೆಯರಿಗೆ ಸಿಗಲಿದೆ ರೂ.2.32 ಲಕ್ಷ: ಕೇಂದ್ರದ ಬೊಂಬಾಟ್ ಗಿಫ್ಟ್ ಪಡೆಯಲು ಈಗಲೇ ಮಾಡಿ ಈ ಪುಟ್ಟ ಕೆಲಸ
Mahila Samman Savings Certificate: ಕೇಂದ್ರವು ಪರಿಚಯಿಸುತ್ತಿರುವ ಹೊಸ ಯೋಜನೆಯ ಹೆಸರು ‘ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ’. ಆಜಾದಿ ಕಾ ಅಮೃತ್ ಮಹೋತ್ಸವವನ್ನು ಆಚರಿಸಲು ಮೋದಿ ಸರ್ಕಾರ ಈ ಯೋಜನೆಯನ್ನು ತಂದಿದೆ. ಈ ಹೊಸ ಯೋಜನೆಯು ಹೊಸ ಹಣಕಾಸು ವರ್ಷದ ಆರಂಭದಿಂದ ಅಂದರೆ ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ.
Mahila Samman Savings Certificate: ಕೇಂದ್ರ ಸರ್ಕಾರ ಮಹಿಳೆಯರಿಗೆ ಸಿಹಿಸುದ್ದಿಯೊಂದನ್ನು ನೀಡಿದೆ. ಈ ಕುರಿತಾಗಿ 2023-24ರ ಬಜೆಟ್‌ನಲ್ಲಿ ಪ್ರಮುಖ ಘೋಷಣೆ ಮಾಡಲಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಹಿಳೆಯರಿಗಾಗಿ ಹೊಸ ಯೋಜನೆಯನ್ನು ಘೋಷಿಸಿದ್ದಾರೆ. ಇದರಿಂದ ಎಷ್ಟೋ ಮಂದಿಗೆ ನೆಮ್ಮದಿ ಸಿಗಲಿದೆ ಎನ್ನಬಹುದು.
ಕೇಂದ್ರವು ಪರಿಚಯಿಸುತ್ತಿರುವ ಹೊಸ ಯೋಜನೆಯ ಹೆಸರು ‘ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ’. ಆಜಾದಿ ಕಾ ಅಮೃತ್ ಮಹೋತ್ಸವವನ್ನು ಆಚರಿಸಲು ಮೋದಿ ಸರ್ಕಾರ ಈ ಯೋಜನೆಯನ್ನು ತಂದಿದೆ. ಈ ಹೊಸ ಯೋಜನೆಯು ಹೊಸ ಹಣಕಾಸು ವರ್ಷದ ಆರಂಭದಿಂದ ಅಂದರೆ ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ.
ಇದನ್ನೂ ಓದಿ: Arecanut today price: ರಾಜ್ಯದ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆ ಹೇಗಿದೆ ನೋಡಿ
ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರಕ್ಕೆ ಸೇರಲು ಬಯಸುವವರು ರೂ.2 ಲಕ್ಷದವರೆಗೆ ಉಳಿಸಬಹುದು. ಈ ಯೋಜನೆಯ ಅವಧಿಯು ಕೇವಲ 2 ವರ್ಷಗಳು ಮಾತ್ರ. ಶೇ 7.5 ರಷ್ಟು ಬಡ್ಡಿಯನ್ನು ಈ ಯೋಜನೆಯಲ್ಲಿ ಪಡೆಯಬಹುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಈ ಯೋಜನೆಗೆ ಸೇರುವ ಮಹಿಳೆಯರಿಗೆ ಪಾಕ್ಷಿಕ ವಿತ್ ಡ್ರಾ ಸೌಲಭ್ಯವೂ ಇದೆ. ಈ ಯೋಜನೆಯ ನಿಯಮಗಳು ಮತ್ತು ಷರತ್ತುಗಳು ಇನ್ನೂ ತಿಳಿದಿಲ್ಲ. ಈ ಯೋಜನೆಯ ಸಂಪೂರ್ಣ ವಿವರಗಳನ್ನು ಸರ್ಕಾರ ಶೀಘ್ರದಲ್ಲೇ ಬಹಿರಂಗಪಡಿಸುವ ಸಾಧ್ಯತೆಯಿದೆ.
ಈ ಯೋಜನೆಯು ಅಂಚೆ ಕಚೇರಿಯಲ್ಲಿ ಲಭ್ಯವಾಗುವ ಅವಕಾಶವಿದೆ. ಅಲ್ಲದೆ ಆಯ್ದ ಬ್ಯಾಂಕ್‌ಗಳಲ್ಲಿಯೂ ಲಭ್ಯವಿರಬಹುದು. ಇತರ ಸಣ್ಣ ಉಳಿತಾಯ ಯೋಜನೆಗಳಂತೆ ಇದು ಕೂಡ ಆಕರ್ಷಕ ಬಡ್ಡಿಯನ್ನು ನೀಡುತ್ತದೆ.
ಶೇ.7.5 ರ ಬಡ್ಡಿ ದರದ ಪ್ರಕಾರ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರದ ಮೂಲಕ ರೂ. 2 ಲಕ್ಷ ಹೂಡಿಕೆ ಮಾಡಿದರೆ ವರ್ಷಕ್ಕೆ ರೂ. 15,427 ಸಿಗುತ್ತದೆ. ಅಂದರೆ ಎರಡು ವರ್ಷಕ್ಕೆ ಬಡ್ಡಿಯೇ ರೂ. 32,044 ಇರುತ್ತದೆ. ಒಟ್ಟಾರೆಯಾಗಿ ಬಡ್ಡಿಸಮೇತ ಹೂಡಿಕೆಯ ಮೇಲೆ 2 ಲಕ್ಷ ರೂ. 32 ಸಾವಿರಕ್ಕಿಂತ ಹೆಚ್ಚು ಪಡೆಯಬಹುದು.
ಆದರೆ ಈ ಯೋಜನೆಗೆ ತೆರಿಗೆ ವಿಧಿಸಲಾಗುತ್ತದೆಯೇ? ಇಲ್ಲವೇ? ಎಂಬ ಅಂಶವೂ ತಿಳಿಯಬೇಕಿದೆ. ವರದಿಗಳ ಪ್ರಕಾರ, ಕೇಂದ್ರ ಸರ್ಕಾರವು ಈ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರದಲ್ಲಿ ಇಇಇ ತೆರಿಗೆ ಪ್ರಯೋಜನವನ್ನು ಲಭ್ಯವಾಗುವಂತೆ ಮಾಡಬಹುದು. ಒಂದು ವೇಳೆ ಹೀಗೆ ಮಾಡಿದರೆ ಈ ಯೋಜನೆ ತುಂಬಾ ಪ್ರಯೋಜನಕಾರಿ ಎಂದು ಹೇಳಬಹುದು.
ಇದನ್ನೂ ಓದಿ: Tax Saving Schemes: ಈ ಅದ್ಭುತ ಯೋಜನೆಗಳಲ್ಲಿ ಹೂಡಿಕೆ ಮಾಡಿ ಲಾಭದ ಜೊತೆಗೆ ತೆರಿಗೆ ಉಳಿಸಿ
ಬ್ಯಾಂಕ್‌ಗಳಲ್ಲಿನ ಸ್ಥಿರ ಠೇವಣಿ ಮತ್ತು ಅಂಚೆ ಕಚೇರಿಗಳಲ್ಲಿನ ಇತರ ಅನೇಕ ಉಳಿತಾಯ ಯೋಜನೆಗಳಿಗೆ ಹೋಲಿಸಿದರೆ, ಈ ಮಹಿಳಾ ಸಮ್ಮಾನ್ ಉಳಿತಾಯ ಯೋಜನೆಯಲ್ಲಿನ ಬಡ್ಡಿ ದರವು ಆಕರ್ಷಕವಾಗಿದೆ. ಇದು ಮಹಿಳೆಯರಿಗೆ ಉತ್ತಮ ಹೂಡಿಕೆ ಯೋಜನೆಯಾಗಿ ಮುಂದುವರಿಯುತ್ತದೆ ಎಂದು ನಿರೀಕ್ಷಿಸಬಹುದು. ಹಣವನ್ನು ಉಳಿಸಲು ಬಯಸುವ ಮಹಿಳೆಯರು ಈ ಯೋಜನೆಯನ್ನು ಬಳಸಬಹುದು. ಈಗಾಗಲೇ ಹೆಣ್ಣು ಮಕ್ಕಳಿಗಾಗಿ ಕೇಂದ್ರ ಸುಕನ್ಯಾ ಯೋಜನೆಯನ್ನು ಜಾರಿಗೆ ತಂದಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.