World Dosa Day 2024: ಇಂದು ಮಾರ್ಚ್ 3, 2024 ವಿಶ್ವಾದ್ಯಂತ ವಿಶ್ವ ದೊಸಾ ದಿನವನ್ನು ಆಚರಿಸ್ಲಾಗುತ್ತಿದೆ. ಏತನ್ಮಧ್ಯೆ ಆನ್‌ಲೈನ್ ಫುಡ್ ಡಿಲೆವರಿ ಪ್ಲಾಟ್ ಫಾರ್ಮ್ ಆಗಿರುವ ಸ್ವಿಗ್ಗಿ ದೇಶದಲ್ಲಿ ದೋಸೆ ವಿತರಣೆಯ ಕುರಿತು ಕೆಲವು ಆಸಕ್ತಿದಾಯಕ ಅಂಕಿಅಂಶಗಳನ್ನು ಬಿಡುಗಡೆ ಮಾಡಿದೆ. ಭಾರತದಲ್ಲಿ ದೋಸೆಯನ್ನು ಜನರು ಎಷ್ಟು ಇಷ್ಟಪಡುತ್ತಾರೆ ಎಂಬುದನ್ನು ಇದು ತೋರಿಸುತ್ತದೆ. ಸ್ವಿಗ್ಗಿ ಕಳೆದ ಒಂದು ವರ್ಷದಲ್ಲಿ ಒಟ್ಟು 2.9 ಕೋಟಿ ದೋಸೆಗಳನ್ನು ವಿತರಿಸಿದೆ. ಬೆಳಗಿನ ಉಪಾಹಾರದ ಸಮಯದಲ್ಲಿ ಮಾತ್ರ ಪ್ರತಿ ನಿಮಿಷಕ್ಕೆ ಸರಾಸರಿ 122 ದೋಸೆ ಆರ್ಡರ್ ಗಳು ಬಂದಿವೆ ಎಂದು ಅದು ಹೇಳಿಕೊಂಡಿದೆ. ಈ ದತ್ತಾಂಶವನ್ನು  ಫೆಬ್ರವರಿ 25, 2023 ರಿಂದ ಫೆಬ್ರವರಿ 25, 2024 ರವರೆಗೆ ಬಂದ ಆರ್ಡರ್ ಗಳಿಂದ ಸಂಗ್ರಹಿಸಲಾಗಿದೆ. (Business News In Kannada)


COMMERCIAL BREAK
SCROLL TO CONTINUE READING

ಬೆಂಗಳೂರು, ಹೈದರಾಬಾದ್ ಮತ್ತು ಚೆನ್ನೈನಂತಹ ನಗರಗಳಲ್ಲಿ ದೋಸೆಯ ಕ್ರೇಜ್ ತುಂಬಾ ಹೆಚ್ಚಾಗಿದೆ. ಬೆಂಗಳೂರು ಭಾರತದ ದೋಸೆ ರಾಜಧಾನಿಯಾಗಿ (Dosa Capital 2024) ಹೊರಹೊಮ್ಮಿದೆ. ದೆಹಲಿ, ಮುಂಬೈ ಮತ್ತು ಕೋಲ್ಕತ್ತಾಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಮಾತ್ರ ಎರಡು ಪಟ್ಟು ಹೆಚ್ಚು ದೋಸೆ ಆರ್ಡರ್‌ಗಳನ್ನು ಪೂರೈಸಲಾಗಿದೆ. ಬೆಣ್ಣೆ ಪರಾಠಕ್ಕೆ ಹೆಸರುವಾಸಿಯಾಗಿರುವ ಚಂಡೀಗಢವು ಮಸಾಲೆ ದೋಸೆಯನ್ನು ತನ್ನ ನೆಚ್ಚಿನ ಖಾದ್ಯವನ್ನಾಗಿ (Favourate Food Item) ಆರಿಸಿಕೊಂಡಿದೆ. ರಾಂಚಿ, ಕೊಯಮತ್ತೂರು, ಪುಣೆ ಮತ್ತು ಭೋಪಾಲ್‌ನಲ್ಲಿ ಅತಿ ಹೆಚ್ಚು ಆರ್ಡರ್ ಮಾಡಿದ ಖಾದ್ಯಗಳಲ್ಲಿ ದೋಸೆ ಕೂಡ ಒಂದು.


ಇದನ್ನೂ ಓದಿ-Mutual Funds Update: ಏಪ್ರಿಲ್ ನಿಂದ ಎಸ್ಐಪಿಗೆ ಸಂಬಂಧಿಸಿದಂತೆ ಈ ನಾಲ್ಕು ನಿಯಮಗಳು ಅನ್ವಯಿಸಲಿವೆ!


ಒಬ್ಬ ವ್ಯಕ್ತಿ ಬರೋಬ್ಬರಿ 447 ಪ್ಲೇಟ್ ದೋಸೆ ಆರ್ಡರ್ ಮಾಡಿದ್ದಾನೆ
ಕೊಯಮತ್ತೂರಿನ ವ್ಯಕ್ತಿಯೊಬ್ಬರು ಕಳೆದ ವರ್ಷ ಒಟ್ಟು 447 ಪ್ಲೇಟ್ ದೋಸೆಗಳನ್ನು ಆರ್ಡರ್ ಮಾಡಿ ಭಾರತದ ದೊಸಾ ಚಾಂಪಿಯನ್ (Dosa Champion 2024) ಆಗಿ ಹೊರಹೊಮ್ಮಿದ್ದಾರೆ. ರಂಜಾನ್, ಕ್ರಿಕೆಟ್ ವಿಶ್ವಕಪ್ ಮತ್ತು ಐಪಿಎಲ್ ಸಮಯದಲ್ಲಿ ದೋಸೆ ಎರಡನೇ ಅತ್ಯಂತ ಜನಪ್ರಿಯ ಭಕ್ಷ್ಯವಾಗಿದೆ (Most Popular Food Item 2024). ನವರಾತ್ರಿಯ ಸಮಯದಲ್ಲಿ ಇದು ಅತ್ಯಂತ ಜನಪ್ರಿಯ ಸಸ್ಯಾಹಾರಿ ಖಾದ್ಯವಾಗಿತ್ತು. ಜನರು ಹೆಚ್ಚಾಗಿ ಉಪಹಾರ ಮತ್ತು ರಾತ್ರಿಯ ಊಟಕ್ಕೆ ದೋಸೆಯನ್ನು ಆರ್ಡರ್ ಮಾಡುತ್ತಾರೆ. ರಾತ್ರಿಯ ಊಟಕ್ಕೆ ಹೆಚ್ಚಿನವರು ದೋಸೆಯನ್ನು ಇಷ್ಟಪಡುವ ನಗರ ಚೆನ್ನೈ, ಆದರೆ ಹೈದರಾಬಾದ್ ಹೆಚ್ಚಿನವರು ಅದನ್ನು ಉಪಹಾರವಾಗಿ ಆರ್ಡರ್ ಮಾಡುತ್ತಾರೆ.


ಇದನ್ನೂ ಓದಿ-ಪ್ರತಿ ಬಾರಿ ಮನೆಗೆ LPG Gas Cylinder ಮನೆಗೆ ಬಂದಾಗ ಈ ಸಂಖ್ಯೆ ಖಂಡಿತ ಪರಿಶೀಲಿಸಿ, ಕಾರಣ ಇಲ್ಲಿದೆ!


ಸ್ವಿಗ್ಗಿ ಎಲ್ಲಾ ರೀತಿಯ ದೋಸೆಗಳನ್ನು ಪೂರೈಸುತ್ತದೆ
ಸ್ವಿಗ್ಗಿಯಲ್ಲಿ ವಿವಿಧ ರೀತಿಯ ದೋಸೆಗಳು ಲಭ್ಯವಿವೆ, ಈ ದಕ್ಷಿಣ ಭಾರತದ ಖಾದ್ಯದ ನಂಬಲಾಗದ ವೈವಿಧ್ಯತೆ ಮತ್ತು ಸೃಜನಶೀಲತೆಯನ್ನು ಪ್ರದರ್ಶಿಸುತ್ತದೆ. ಕ್ಲಾಸಿಕ್ ಮಸಾಲೆ ದೋಸೆ ಮತ್ತು ಸಾದಾ ದೋಸೆಯಿಂದ ಹಿಡಿದು ವಿಶಿಷ್ಟವಾದ ಆಯ್ಕೆಗಳಾದ ಚಾಕೊಲೇಟ್ ದೋಸಾ, ಪಾವ್ ಭಾಜಿ ನೂಡಲ್ಸ್ ಪಾಲಕ್ ದೋಸೆ, ಶೆಜ್ವಾನ್ ಚಾಪ್ ಸ್ಪೆಷಲ್ ದೋಸೆ, ದಿಲ್ಖುಷ್ ದೋಸೆ, ಲೇಸ್ ದೋಸೆ ಮತ್ತು ಪನೀರ್‌ನೊಂದಿಗೆ ಅಮೇರಿಕನ್ ಚಾಪ್ಸಿ ದೋಸೆ, ದೋಸೆ ಪ್ರಯೋಗಗಳಿಗೆ ಕ್ಯಾನ್ವಾಸ್ ಆಗಿ ಮಾರ್ಪಟ್ಟಿದೆ, ಇದು ಸಾಂಪ್ರದಾಯಿಕ ರುಚಿಗಳನ್ನು ಸಂಯೋಜಿಸುತ್ತದೆ. ಅದೂ ಕೂಡ ಆಧುನಿಕ ಟ್ವಿಸ್ಟ್ನೊಂದಿಗೆ.


ಇದನ್ನೂ ನೋಡಿ-