Ambani Marriage: ಎಪ್ಪೋ! ಅಂಬಾನಿ ಮದುವೆಯಲ್ಲಿ ಕಾರ್ಯಕ್ರಮ ನೀಡಲು ಈಕೆ ಪಡೆದ ಸಂಭಾವನೆ ಎಷ್ಟು ಗೊತ್ತಾ!

Rihanna Viral Video: ಖ್ಯಾತ ಪಾಪ್ ಗಾಯಕಿ ರಿಹಾನಾ, ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ವಿವಾಹಪೂರ್ವ ಸಮಾರಂಭದಲ್ಲಿ ಪ್ರದರ್ಶನ ನೀಡಲಿದ್ದಾಳೆ ಎಂದು ವರದಿಯಾಗಿದೆ. ಪಾಪ್ ಗಾಯಕಿ ರಿಹಾನಾ ಪ್ರಸ್ತುತ ಜಾಮ್‌ನಗರದಲ್ಲಿದ್ದಾರೆ. ಪ್ರಸ್ತುತ ಸಮಾರಂಭದಲ್ಲಿ ಆಕೆ ಪಡೆದುಕೊಳ್ಳುತ್ತಿರುವ ಸಂಭಾವನೆಯ ವರದಿಗಳು ಹಲವರ ಹುಬ್ಬೇರಿಸಿದೆ.  ರಿಹಾನ್ನಾಳ  ಪೂರ್ವಾಭ್ಯಾಸದ ವೀಡಿಯೊ ಕೂಡ ವೈರಲ್ ಆಗಿದೆ (Viral Video In Kannada).  

Written by - Nitin Tabib | Last Updated : Mar 1, 2024, 04:26 PM IST
  • ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹಪೂರ್ವ ಕಾರ್ಯಕ್ರಮಗಳು ಗುರುವಾರ ಅನ್ನ ಸೇವೆಯೊಂದಿಗೆ ಆರಂಭಗೊಂಡಿವೆ.
  • ಎರಡೂ ಕುಟುಂಬಗಳು ಸೇರಿ 51 ಸಾವಿರ ಕುಟುಂಬಗಳಿಗೆ ಅನ್ನಸಂತರ್ಪಣೆ ಮಾಡಿದ್ದಾರೆ.
  • ಈಗ ಉಳಿದ ಕಾರ್ಯಗಳು ಶುಕ್ರವಾರದಿಂದ ಆರಂಭಗೊಳ್ಳಲಿವೆ.
  • ಮಾರ್ಚ್ 1 ರಂದು ನಡೆಯಲಿರುವ ಕಾರ್ಯಕ್ರಮದ ಹೆಸರು 'ಎವರ್‌ಲ್ಯಾಂಡ್‌ನಲ್ಲಿ ಸಂಜೆ' ಎಂದು ಕರೆಯಲಾಗುತ್ತಿದೆ.
Ambani Marriage: ಎಪ್ಪೋ! ಅಂಬಾನಿ ಮದುವೆಯಲ್ಲಿ ಕಾರ್ಯಕ್ರಮ ನೀಡಲು ಈಕೆ ಪಡೆದ ಸಂಭಾವನೆ ಎಷ್ಟು ಗೊತ್ತಾ! title=

Anant-Rahika Marriage: ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಅವರ ವಿವಾಹ ಪೂರ್ವ ಸಮಾರಂಭಗಳು ಮಾರ್ಚ್ 1 ರಿಂದ ಜಾಮ್‌ನಗರದಲ್ಲಿ ಆರಂಭವಾಗಲಿವೆ. ಹೀಗಿರುವಾಗ ಹಾಲಿವುಡ್ ನಿಂದ ಬಾಲಿವುಡ್ ವರೆಗಿನ ವ್ಯಕ್ತಿಗಳು ಗುಜರಾತ್ ತಲುಪಿದ್ದಾರೆ. ಎಲ್ಲರ ಕಣ್ಣುಗಳು ಪಾಪ್‌ಸ್ಟಾರ್ ರಿಹಾನ್ನಾ ಮೇಲೆ ನೆಟ್ಟಿವೆ. ತನ್ನ ಪಾಪ್ ಹಾಡುಗಳಿಂದ ವಿಶ್ವಾದ್ಯಂತ ಸಾಕಷ್ಟು ಹೆಸರು ಮಾಡಿರುವ ರಿಹಾನಾ, ಭಾರತಕ್ಕೆ ಆಗಮಿಸಿದ್ದಾಳೆ. ಆಕೆ ತನ್ನೊಂದಿಗೆ ಹಲವು ಅಡಿ ಎತ್ತರದ ಲಗೆಜ್ ಗಳನ್ನು ಕೂಡ ತಂದಿದ್ದಾಳೆ. ಅವುಗಳ ವೀಡಿಯೊಗಳು ವೈರಲ್ ಆಗಿವೆ. ಅಷ್ಟೇ ಅಲ್ಲ ರಿಹಾನ್ನಾ ಅಂಬಾನಿ ಕುಟುಂಬದ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಲು ಎಷ್ಟು ಕೋಟಿ ರೂಪಾಯಿ ವಸೂಲಿ ಮಾಡುತ್ತಿದ್ದಾಳೆ ಎಂಬುದು ಮಾಧ್ಯಮಗಳಲ್ಲಿ ಹೆಡ್ಲೈನ್ ಗಿಟ್ಟಿಸುತ್ತಿದೆ. ಮತ್ತೊಂದೆಡೆ, ರಿಹಾನ್ನಾಳ ರಿಹರ್ಸಲ್ ವಿಡಿಯೋ ಕೂಡ ವೈರಲ್ ಆಗುತ್ತಿದೆ.

ಪಾಪ್ ಗಾಯಕಿ ರಿಹಾನ್ನಾ ಪ್ರಸ್ತುತ ತನ್ನ ತಂಡದೊಂದಿಗೆ ಗುಜರಾತ್ ನ ಜಾಮ್‌ನಗರದಲ್ಲಿ ಬೀಡು ಬಿಟ್ಟಿದ್ದಾಳೆ. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹಪೂರ್ವ ಸಮಾರಂಭದಲ್ಲಿ ಪ್ರದರ್ಶನ ನೀಡಲಿದ್ದಾಳೆ. ಈಗ ಇಲ್ಲಿ ಪ್ರದರ್ಶನ ನೀಡಲು ಆಕೆ ಎಷ್ಟು ಕೋಟಿ ರೂಪಾಯಿ ವಸೂಲಿ ಮಾಡುತ್ತಿದ್ದಾಳೆ ಎಂಬ ಹಲವು ವರದಿಗಳು ಮಾಧ್ಯಮಗಳಲ್ಲಿ ಕಾಣಿಸಿಕೊಂಡಿವೆ. 'ಇಂಡಿಯಾ ಟುಡೆ' ವರದಿ ಪ್ರಕಾರ, ಪಾಪ್ ಕ್ವೀನ್ ರಿಹಾನ್ನಾ, ಅನಂತ್ ಅಂಬಾನಿ ಅವರ ವಿವಾಹಪೂರ್ವ ಸಮಾರಂಭದಲ್ಲಿ ಪ್ರದರ್ಶನ ನೀಡಲು 66 ರಿಂದ 74 ಕೋಟಿ ರೂ. ಪಡೆದುಕೊಳ್ಳುತ್ತಿದ್ದಾಳೆ ಎನ್ನಲಾಗಿದೆ. ರಿಲಯನ್ಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಈ ವರ್ಷ ಜುಲೈ 12 ರಂದು ವಿವಾಹವಾಗಲಿದ್ದಾರೆ. ಮದುವೆಗೂ ಮುನ್ನ ಗುಜರಾತ್‌ನಲ್ಲಿ ವಿವಾಹ ಪೂರ್ವ ಕಾರ್ಯಕ್ರಮಗಳು ನಡೆಯುತ್ತಿವೆ.

ರಿಹಾನ್ನಾ ಎಷ್ಟು ಸಂಭಾವನೆ ಪಡೆದುಕೊಳ್ಳುತ್ತಿದ್ದಾಳೆ
ಇದೇ ವೇಳೆ, ಡೈಲಿ ಮೇಲ್' ವರದಿಯ ಪ್ರಕಾರ, ಈ ಭಾರತ ಪ್ರವಾಸದಲ್ಲಿ ಪ್ರದರ್ಶನ ನೀಡಲು ರಿಹಾನ್ನಾ 52 ಕೋಟಿ ರೂ. ಸಂಭಾವನೆ ಪಡೆದಿದ್ದಾಳೆ ಎನ್ನಲಾಗಿದೆ., ಆದಾಗ್ಯೂ, ಈ ಕುರಿತು ಇನ್ನೂ ಯಾವುದೇ ಅಧಿಕೃತ ವಿವರಗಳು ಇನ್ನೂ ಬಹಿರಂಗಗೊಂಡಿಲ್ಲ. ರಿಹಾನ್ನಾ ಫೆಬ್ರವರಿ 29 ರಂದು ಜಾಮ್ನಗರ ತಲುಪಿದ್ದಾಳೆ ಮತ್ತು ಆಕೆಯ ಜೊತೆಗೆ ಆಕೆಯ ತಂಡ ಕೂಡ ಆಗಮಿಸಿದೆ. ತನ್ನ ಪ್ರದರ್ಶನಕ್ಕೆ ಸಾಕಷ್ಟು ಸಿದ್ಧತೆ ನಡೆಸಿ ಬಂದಿದ್ದಾಳೆ.

ರಿಹಾನ್ನಾ ಅವರ ರಿಹರ್ಸಲ್ ವಿಡಿಯೋ ವೈರಲ್ ವೈರಲ್ ಆಗುತ್ತಿದೆ
ರಿಹಾನ್ನಾಳ ವೀಡಿಯೊ ಕೂಡ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಅದರಲ್ಲಿ ಆಕೆ ತನ್ನ ಪ್ರದರ್ಶನಕ್ಕೆ ತಯಾರಿ ನಡೆಸುತ್ತಿರುವುದನ್ನು ನೀವು ನೋಡಬಹುದು. ರಿಹಾನ್ನಾ ಕಾರ್ಯಕ್ರಮ ನಿರ್ವಹಿಸಿದಾಗ, ಕಾರ್ಯಕ್ರಮ ಖಂಡಿತ ಹೈಲೈಟ್ ಆಗುತ್ತದೆ.

ಇದನ್ನೂ ಓದಿ-Good News: ಹಿಟ್ಟು-ಅಕ್ಕಿ ಬಳಿಕ ಇದೀಗ ಮೋದಿ ಸರ್ಕಾರದ ವತಿಯಿಂದ ಅಗ್ಗದ 'ಭಾರತ್ ಮಸೂರಿ ಬೇಳೆ' ಮಾರಾಟ!

ಅಂಬಾನಿ ಕುಟುಂಬದ ಕಾರ್ಯಕ್ರಮಕ್ಕೆ ಯಾರ್ಯಾರು ಆಗಮಿಸುತ್ತಿದ್ದಾರೆ
ಬಾಲಿವುಡ್ ತಾರೆಯರ ಬಗ್ಗೆ ಹೇಳುವುದಾದರೆ, ಸಲ್ಮಾನ್ ಖಾನ್, ಶಾರುಖ್ ಖಾನ್, ರಣವೀರ್ ಸಿಂಗ್, ರಾಣಿ ಮುಖರ್ಜಿ, ಗೌರಿ ಖಾನ್, ರಜನಿಕಾಂತ್, ಅಭಿಷೇಕ್ ಬಚ್ಚನ್, ಅಮಿತಾಬ್ ಬಚ್ಚನ್, ಆಲಿಯಾ ಭಟ್, ವಿಕ್ಕಿ ಕೌಶಲ್, ಕತ್ರಿನಾ ಕೈಫ್, ಕರೀನಾ ಕಪೂರ್, ಸಾರಾ ಅಲಿ ಖಾನ್, ಅನನ್ಯಾ ಪಾಂಡೆ ಸೈಫ್ ಅಲಿ ಖಾನ್ ಅವರ ಹೆಸರುಗಳು ಪಟ್ಟಿಯಲ್ಲಿ ಶಾಮೀಲಾಗಿವೆ.

ಇದನ್ನೂ ಓದಿ-Good News: ದೇಶದ ಕೋಟ್ಯಾಂತರ ರೈತರಿಗೆ ಮೋದಿ ಸರ್ಕಾರದ ಭರ್ಜರಿ ಉಡುಗೊರೆ, 24 ಸಾವಿರ ರೂ.ಗಳ ಸಬ್ಸಿಡಿಗೆ ಅನುಮೋದನೆ!

ಅನ್ನ ಸೇವೆಯಿಂದ ಕಾರ್ಯಕ್ರಮಕ್ಕೆ ಶುಭಾರಂಭ
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹಪೂರ್ವ ಕಾರ್ಯಕ್ರಮಗಳು ಗುರುವಾರ ಅನ್ನ ಸೇವೆಯೊಂದಿಗೆ ಆರಂಭಗೊಂಡಿವೆ. ಎರಡೂ ಕುಟುಂಬಗಳು ಸೇರಿ 51 ಸಾವಿರ ಕುಟುಂಬಗಳಿಗೆ ಅನ್ನಸಂತರ್ಪಣೆ  ಮಾಡಿದ್ದಾರೆ. ಈಗ ಉಳಿದ ಕಾರ್ಯಗಳು ಶುಕ್ರವಾರದಿಂದ ಆರಂಭಗೊಳ್ಳಲಿವೆ. ಮಾರ್ಚ್ 1 ರಂದು ನಡೆಯಲಿರುವ ಕಾರ್ಯಕ್ರಮದ ಹೆಸರು 'ಎವರ್‌ಲ್ಯಾಂಡ್‌ನಲ್ಲಿ ಸಂಜೆ' ಎಂದು ಕರೆಯಲಾಗುತ್ತಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News