Yamaha GT150 Fazer: ಯಮಹಾದ RX100 ಬೈಕ್ ಯುವಕರಿಗಷ್ಟೇ ಅಲ್ಲ ಇತರ ವಯಸ್ಸಿನವರಿಗೂ ಅತ್ಯಂತ ಇಷ್ಟವಾದ ಬೈಕ್ ಆಗಿತ್ತು. ಇನ್ನೂ ಜನರು ಆ ಬೈಕಿನ ರೀಲಾಂಚ್‌ಗಾಗಿ ಕಾಯುತ್ತಿದ್ದಾರೆ. ಆದಾಗ್ಯೂ, ಯಮಹಾ ಹೊಸ ಬೈಕ್ ಅನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ, ಇದು ಹೆಚ್ಚಿನ ಪ್ರಮಾಣದಲ್ಲಿ RX100 ನ ನವೀಕರಿಸಿದ ಆವೃತ್ತಿಯಂತೆ ಕಂಗೊಳಿಸುತ್ತಿದೆ. ಈ ಬೈಕ್‌ನ ಹೆಸರು ಯಮಹಾ ಜಿಟಿ 150 ಫೇಜರ್, ಇದು ಕ್ಲಾಸಿಕ್ ರೆಟ್ರೋ ಲುಕ್‌ನೊಂದಿಗೆ ಬಿಡುಗಡೆಯಾಗಿದೆ. ಬೈಕ್ ಅನ್ನು 150 ಸಿಸಿ ಎಂಜಿನ್‌ನೊಂದಿಗೆ ಬಿಡುಗಡೆ ಮಾಡಲಾಗಿದೆ.


COMMERCIAL BREAK
SCROLL TO CONTINUE READING

ಪ್ರಸ್ತುತ ಚೀನಾ ಮಾರುಕಟ್ಟೆಯಲ್ಲಿ ಬೈಕ್ ಅನ್ನು ಬಿಡುಗಡೆ ಮಾಡಲಾಗಿದೆ ಎಂಬುದು ಇಲ್ಲಿ ಉಲ್ಲೇಖನೀಯ. ಚೀನಾದಲ್ಲಿ ಇದರ ಬೆಲೆ 13,390 ಯುವಾನ್ ನಿಗದಿಪದಿಸಲಾಗಿದೆ, ಅಂದರೆ ಭಾರತದ ಪ್ರಕಾರ 1.60 ಲಕ್ಷ ರೂಪಾಯಿಗಳು ಎಂದರ್ಥ. ಇದು ಬಿಳಿ, ಗಾಢ ಬೂದು, ತಿಳಿ ಬೂದು ಮತ್ತು ನೀಲಿ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ. ಬೈಕ್‌ಗೆ ಸ್ಪೋರ್ಟಿ ಲುಕ್ ನೀಡಲು, ಫೆಂಡರ್‌ಗಳು, ಅಲಾಯ್ ಚಕ್ರಗಳು, ಎಕ್ಸಾಸ್ಟ್ ಮತ್ತು ಸಸ್ಪೆನ್ಷನ್ ಅನ್ನು ಕಪ್ಪು ಬಣ್ಣದಲ್ಲಿ ಇರಿಸಲಾಗಿದೆ.


ಇದನ್ನೂ ಓದಿ-ಹೀರೋ-ಹೊಂಡಾ ಕಂಪನಿಗಳ ಸ್ಕೂಟರ್ ಗಳಿಗೆ ಭಾರಿ ಟೆನ್ಶನ್ ನೀಡುತ್ತಿದೆ ಟಿವಿಎಸ್ ಕಂಪನಿಯ ಈ ಸ್ಕೂಟರ್


ಬೈಕ್‌ಗೆ ಕ್ಲಾಸಿಕ್ ಲುಕ್ ನೀಡಲು, ಹೆಡ್‌ಲ್ಯಾಂಪ್‌ಗಳು, ರಿಯರ್ ವ್ಯೂ ಮಿರರ್‌ಗಳು ಮತ್ತು ಟರ್ನ್ ಸಿಗ್ನಲ್‌ಗಳು ದುಂಡಾಕಾರದಲ್ಲಿಯೇ ಇರಿಸಲಾಗಿದೆ. ಎಲ್‌ಇಡಿ ದೀಪಗಳು, 12ವಿ ಡಿಸಿ ಚಾರ್ಜಿಂಗ್ ಸಾಕೆಟ್, ಟಿಯರ್‌ಡ್ರಾಪ್ ಆಕಾರದ ಇಂಧನ ಟ್ಯಾಂಕ್, ಲೆದರ್ ಸೀಟ್‌ಗಳು, ಟ್ರ್ಯಾಕರ್ ಶೈಲಿಯ ಸೈಡ್ ಪ್ಯಾನೆಲ್‌ಗಳಂತಹ ಇತರ ವೈಶಿಷ್ಟ್ಯಗಳನ್ನು ಇದು ಒಳಗೊಂಡಿವೆ. ಇದಕ್ಕೆ ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ನೀಡಲಾಗಿದೆ, ಇದು ಸಾಕಷ್ಟು ಮಾಹಿತಿಯನ್ನು ಬಿತ್ತರಿಸುತ್ತದೆ. ಬೈಕಿನ ಸೀಟ್ ಎತ್ತರ 800 ಎಂಎಂ. ಇಬ್ಬರು ಸುಲಭವಾಗಿ ಕುಳಿತುಕೊಳ್ಳಬಹುದಾದ ಉದ್ದನೆಯ ಸೀಟನ್ನು ಈ ಬೈಕ್ ಹೊಂದಿದೆ. ಬೈಕು ಮುಖ್ಯವಾಗಿ ನಗರ ಪ್ರಯಾಣಕ್ಕಾಗಿ ಉದ್ದೇಶಿಸಲಾಗಿದೆ, ಇದರ ಮೂಲಕ ಹಗುರವಾದ ಆಫ್-ರೋಡಿಂಗ್ ಅನ್ನು ಸಹ ಮಾಡಬಹುದು.


ಇದನ್ನೂ ಓದಿ-ಹೀರೋ-ಟಿವಿಎಸ್ ಟೆನ್ಶನ್ ಹೆಚ್ಚಿಸಲು ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ ಹೊಂಡಾ ಕಂಪನಿಯ ಹೊಸ ಸ್ಕೂಟರ್ !


ಯಮಹಾ GT150 ಫೇಜರ್ ಎಂಜಿನ್
ಯಮಹಾ ಜಿಟಿ150 ಫೇಜರ್ ಬೈಕ್ 149ಸಿಸಿ ಎಂಜಿನ್ ಹೊಂದಿದೆ. ಇದು 7,500 rpm ನಲ್ಲಿ ಗರಿಷ್ಠ 12.3 hp ಮತ್ತು 12.4 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದನ್ನು 5-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಬೈಕಿನ ಎರಡೂ ತುದಿಗಳಲ್ಲಿ 18-ಇಂಚಿನ ಗಾಲಿಗಳನ್ನು ನೀಡಲಾಗಿದ್ದು. ಎರಡೂ ಗಾಲಿಗಳಿಗೆ ಡಿಸ್ಕ್ ಬ್ರೇಕಿಂಗ್ ವ್ಯವಸ್ಥೆ ನೀಡಲಾಗಿದೆ. ಇದು 126 ಕೆಜಿ ತೂಕ ಮತ್ತು 12.5 ಲೀಟರ್ ಇಂಧನ ಟ್ಯಾಂಕ್ ಸಾಮರ್ಥ್ಯವನ್ನು ಹೊಂದಿದೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.