Yellow Leaf Disease Of Arecanut: ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಡಿಕೆಗೆ ತಗುಲಿರುವ ಹಳದಿ ಎಲೆ ರೋಗವನ್ನ ನಿಯಂತ್ರಿಸಲಾಗದೆ ಮಲೆನಾಡ ನೂರಾರು ಜನ ಬದುಕಿ-ಬಾಳಿದ್ದ ಮನೆಗಳನ್ನ ಬಿಟ್ಟು ಊರುಗಳನ್ನೇ ಬಿಡುತ್ತಿದ್ದಾರೆ. ಕೊಪ್ಪ ತಾಲೂಕಿನ ಜಯಪುರ ಸಮೀಪದ ಹುಲಿಗರಿಡಿ ಗ್ರಾಮದ ಸ್ಥಿತಿ ಹೇಳ ತೀರದಾಗಿದೆ. 


COMMERCIAL BREAK
SCROLL TO CONTINUE READING

ಹೌದು, ಮಲೆನಾಡ ಭಾಗದಲ್ಲಿ ಪ್ರಮುಖ ಬೆಳೆ, ಇಲ್ಲಿನ ಜನರ ಬದುಕಿಗೆ ದಾರಿ ದೀಪವಾಗಿರುವ ಅಡಿಕೆಗೆ ಹಳದಿ ಎಲೆ ರೋಗ ತಗುಲಿದ್ದು ಇದರಿಂದಾಗಿ ನೂರಾರು ಜನ ಊರು ಬಿಟ್ಟಿರುವುದು ಮಾತ್ರವಲ್ಲದೆ, ಅವರ ತೋಟಗಳತ್ತ ಮುಖ ಮಾಡೋದನ್ನೇ ಬಿಟ್ಟಿದ್ದಾರೆ. 


ಹಳದಿ ಎಲೆ ರೋಗದಿಂದಾಗಿ ಆತಂಕ ಗೊಂಡಿರುವ ಮಲೆನಾಡಿನ ಕೊಪ್ಪ ತಾಲೂಕಿನ ಜಯಪುರ ಸಮೀಪದ ಹುಲಿಗರಿಡಿ ಗ್ರಾಮದ ಮಂದಿ ಊರು ಬಿಟ್ಟಿದ್ದು ಅನಾದಿ ಕಾಲದಿಂದಲೂ ಬದುಕಿ ಬಾಳಿದ್ದ ಮನೆಗಳೀಗ ಖಾಲಿ-ಖಾಲಿ. ತುತ್ತಿನ ಊಟಕ್ಕಾಗಿ,  ಮಾಡಿರುವ ಸಾಲ ತೀರಿಸುವ ಸಲುವಾಗಿ ಗುಳೇ ಹೋಗುತ್ತಿದ್ದಾರೆ. ಇದರಿಂದಾಗಿ ಊರಿಗೆ ಊರೇ ಖಾಲಿಯಾದಂತಾಗಿದ್ದು ಮನೆಯಲ್ಲಿದ್ದ ದೇವರ ಪಟಗಳು, ಮಕ್ಕಳು ಪುಸ್ತಕಗಳು, ಪಾತ್ರೆ-ಪಡೆಗಳು, ಪಾಳು ಬಿದ್ದ ರೈತನ ಮನೆಗಳು ಮಾತ್ರ ನೆನಪಾಗಿ ಉಳಿದಿವೆ. 


ಇದನ್ನೂ ಓದಿ- ಅಡಿಕೆ ರೇಟ್: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮತ್ತೆ ಏರಿಕೆ!


ಐದು ದಶಕಗಳಿಂದ ದಿನದಿಂದ ದಿನಕ್ಕೆ ಹೆಚ್ಚುತ್ತಿರೋ ಹಳದಿ ಎಲೆ ರೋಗ ಬೆಳೆಗಾರರಿಗೆ ಕೃಷಿ ಬಗ್ಗೆಯೇ ಬೇಜಾರು ಮೂಡಿಸಿದೆ. ಕಿವಿಗೆ ಬಿದ್ದ ಔಷಧಿಯನ್ನೆಲ್ಲಾ ಸಿಂಪಡಿಸಿದ್ರು ರೈತರ ಜೇಬು ಬರಿದಾಯ್ತೆ ವಿನಃ ರೋಗ ನಿಯಂತ್ರಣಕ್ಕೆ ಬಾರಲೇ ಇಲ್ಲ. 


ಒಟ್ಟಾರೆಯಾಗಿ ಶೃಂಗೇರಿ-ಕೊಪ್ಪ-ಎನ್.ಆರ್.ಪುರ ತಾಲೂಕಿನ ಹಲವು ಭಾಗದಲ್ಲಿ ಅಡಿಕೆ ಬೆಳೆಗೆ ಹಳದಿ ಎಲೆ ಹಾಗೂ ಎಲೆಚುಕ್ಕಿ ರೋಗ ಪಾರುಪತ್ಯ ಮರೆಯುತ್ತಿದ್ದು, ಸಂಶೋಧನ ಕೇಂದ್ರಕ್ಕೆ ಔಷಧಿ ಸಂಶೋಧನೆಗೆಂದು ಬಂದ ಕೋಟಿಗಟ್ಟಲೇ ಹಣವನ್ನು ಕೂಡ ಹಳದಿ ಎಲೆ ರೋಗವೇ ತಿಂದು ಹಾಕಿದೆ. 


ಇದನ್ನೂ ಓದಿ- ಏನಿದು ಕ್ರೆಡಿಟ್ ಕಾರ್ಡ್ ಬ್ಯಾಲೆನ್ಸ್ ಟ್ರಾನ್ಸ್ಫರ್ ? ಸಾಲ ಮರುಪಾವತಿಗೆ ಇದು ಹೇಗೆ ಸಹಾಯಕ ?


ಬ್ಯಾಂಕ್ ಸಾಲದ ಜೊತೆ ಅಡವಿಟ್ಟ ಹೆಂಡತಿ ಮಕ್ಕಳ ಓಡವೆಯನ್ನ ಬಿಡಿಸೋಕು ಆಗದ ಸಂದಿಗ್ಧ ಪರಿಸ್ಥಿತಿಗೆ ಬೆಳೆಗಾರರು ಬಂದಿದ್ದಾರೆ. ಹಾಗಾಗಿ, ಸಾಲದ ಶೂಲಕ್ಕೆ ಸಿಕ್ಕ ಅಡಿಕೆ ಬೆಳೆಗಾರರು ಹೊರಬರಲಾಗದೆ ಬದುಕುವ ಅನಿವಾರ್ಯತೆಗೆ ಊರುಬಿಟ್ಟು ಗುಳೆ ಹೋಗುತ್ತಿದ್ದಾರೆ. ಅಡುಗೆ ಭಟ್ಟ ವೃತ್ತಿ, ಅರ್ಚಕರ ವೃತ್ತಿ ಸೇರಿದಂತೆ ನಾನಾ ವೃತ್ತಿ ಮಾಡುತ್ತಿದ್ದಾರೆ. ಅಳಿದುಳಿದಿರೋ ತೋಟವನ್ನ ಉಳಿಸಿಕೊಳ್ಳೋಕೆ ಬೆಳೆಗಾರರು ಇಂದಿಗೂ ಹೋರಾಡ್ತಿದ್ದಾರೆ. 


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.