Credit Card Update : ಕ್ರೆಡಿಟ್ ಕಾರ್ಡ್ಗಳು ಜನರಿಗೆ ತುಂಬಾ ಉಪಯುಕ್ತವಾಗಿವೆ. ಆದರೆ, ಕ್ರೆಡಿಟ್ ಕಾರ್ಡ್ಗಳನ್ನು ತೆಗೆದುಕೊಳ್ಳುವ ಮೂಲಕ ಜನರು ತಮ್ಮ ಬಳಿ ಹಣವಿಲ್ಲದಿದ್ದರೂ ದುಂದುವೆಚ್ಚ ಮಾಡುವ ಅಭ್ಯಾಸವನ್ನು ಹೊಂದುವುದು ಕೂಡಾ ಹಲವಾರು ಬಾರಿ ಬೆಳಕಿಗೆ ಬಂದಿದೆ. ಆರಂಭದಲ್ಲಿ ಇದು ಸಣ್ಣ ಮೊತ್ತವಾಗಿ ಕಂಡು ಬಂದರೂ ನಿಧಾನವಾಗಿ ಈ ಅಭ್ಯಾಸ ನಿಯಂತ್ರಣ ತಪ್ಪಿ ಬಿಡುತ್ತದೆ. ತಿಂಗಳ ಕೊನೆಯಲ್ಲಿ ಬಿಲ್ ಬಂದಾಗ ಆ ಬಿಲ್ ಅನ್ನು ಪಾವತಿಸುವುದು ಹೇಗೆ ಎನ್ನುವುದು ತೋಚುವುದಿಲ್ಲ. ಆಗ ಒಮ್ಮೆಲೇ ಸಂಪೂರ್ಣ ಮೊತ್ತವನ್ನು ಮರುಪಾವತಿಸುವುದು ಸಾಧ್ಯವಾಗದೆ, ಸಾಲದ ಸುಳಿಯಲ್ಲಿ ಸಿಲುಕಿಕೊಳ್ಳಬೇಕಾಗುತ್ತದೆ.
ಕ್ರೆಡಿಟ್ ಕಾರ್ಡ್ ಟ್ರಾನ್ಸ್ಫರ್ :
ಹೆಚ್ಚಿನ ಕ್ರೆಡಿಟ್ ಕಾರ್ಡ್ ಬಿಲ್ಗಳಿಂದಾಗಿ, CIBIL ಸ್ಕೋರ್ ಕೂಡ ಕಡಿಮೆಯಾಗುತ್ತದೆ. ಜನರು ತಮ್ಮ ಬಾಕಿ ಮೊತ್ತವನ್ನು ಪಾವತಿಸಲು ವಿವಿಧ ಆಯ್ಕೆಗಳನ್ನು ಆರಿಸಿಕೊಳ್ಳುತ್ತಾರೆ. ಇಲ್ಲಿ ಪರಿಗಣಿಸಬಹುದಾದ ಒಂದು ವಿಷಯವೆಂದರೆ ಉಳಿದ ಮೊತ್ತವನ್ನು ವರ್ಗಾಯಿಸುವುದು. ಹೀಗೆ ಮಾಡುವುದರಿಂದ ಹಣಕಾಸಿನ ಒತ್ತಡ ಕಡಿಮೆಯಾಗುತ್ತದೆ. ಕಾರ್ಡ್ ಹೋಲ್ಡರ್ ನ ಹಣ ನಿರ್ವಹಣೆ ಕೌಶಲ್ಯಗಳನ್ನು ಬಲಪಡಿಸುತ್ತದೆ. ಹಾಗಿದ್ದರೆ ಕ್ರೆಡಿಟ್ ಕಾರ್ಡ್ ಬ್ಯಾಲೆನ್ಸ್ ವರ್ಗಾವಣೆ ಎಂದರೇನು ಮತ್ತು ಅದು ಸಾಲ ತೀರಿಸುವಲ್ಲಿ ಹೇಗೆ ಸಹಾಯ ಮಾಡುತ್ತದೆ ?
ಇದನ್ನೂ ಓದಿ : Arecanut today price: ರಾಜ್ಯದಲ್ಲಿ ಇಂದಿನ ಅಡಿಕೆ ಧಾರಣೆ ಹೇಗಿದೆ ತಿಳಿಯಿರಿ
ಕ್ರೆಡಿಟ್ ಕಾರ್ಡ್ ಬ್ಯಾಲೆನ್ಸ್ ವರ್ಗಾವಣೆ ಎಂದರೇನು? :
ಒಬ್ಬರ ಕ್ರೆಡಿಟ್ ಕಾರ್ಡ್ನಲ್ಲಿ ಸಾಕಷ್ಟು ಬಾಕಿ ಇರುವ ಸಾಲವನ್ನು ಹೊಂದಿರುವ ಸಂದರ್ಭದಲ್ಲಿ, ಬ್ಯಾಲೆನ್ಸ್ ವರ್ಗಾವಣೆಯು ಪ್ರಯೋಜನಕಾರಿಯಾಗಿದೆ. ಕಾರ್ಡುದಾರರು ತಮ್ಮ ಬಾಕಿಯಿರುವ ಮೊತ್ತವನ್ನು ಕಡಿಮೆ ಬಡ್ಡಿದರ ನೀಡುವ ಯಾವುದೇ ಇತರ ಹಣಕಾಸು ಸಂಸ್ಥೆಗೆ ವರ್ಗಾಯಿಸಬಹುದು. ಎಲ್ಲಾ ಬ್ಯಾಂಕುಗಳು ಬ್ಯಾಲೆನ್ಸ್ ವರ್ಗಾವಣೆಯನ್ನು ಅನುಮತಿಸದಿದ್ದರೂ, ಕೆಲವೊಂದು ಬ್ಯಾಂಕ್ ಗಳು ಈ ಪದ್ದತಿಗೆ ಅನುವು ಮಾಡಿಕೊಡುತ್ತದೆ. ಆದ್ದರಿಂದ ಕ್ರೆಡಿಟ್ ಕಾರ್ಡ್ ಅನ್ನು ಆಯ್ಕೆ ಮಾಡುವಾಗ ಬುದ್ಧಿವಂತಿಕೆಯಿಂದ ಆಯ್ಕೆ ಮಾಡಬೇಕು.
ಕ್ರೆಡಿಟ್ ಕಾರ್ಡ್ ಸಾಲಕ್ಕೆ ಬ್ಯಾಲೆನ್ಸ್ ವರ್ಗಾವಣೆ ಆಯ್ಕೆಯು ಹೇಗೆ ಸಹಾಯ ಮಾಡುತ್ತದೆ? :
ಬಾಕಿ ಮೊತ್ತವನ್ನು ಬೇರೆ ಸಂಸ್ಥೆಗೆ ವರ್ಗಾಯಿಸುವ ಮೂಲಕ ಬಡ್ಡಿದರಗಳನ್ನು ಕಡಿಮೆ ಮಾಡಬಹುದು. ಇದು ಕ್ರೆಡಿಟ್ ಕಾರ್ಡ್ ಹೊಂದಿರುವವರಿಗೆ ತಮ್ಮ ಬಾಕಿಯನ್ನು ತೀರಿಸಲು ಸಹಾಯ ಮಾಡುತ್ತದೆ. . ಅಸ್ತಿತ್ವದಲ್ಲಿರುವ ಕ್ರೆಡಿಟ್ ಕಾರ್ಡ್ನಲ್ಲಿ APR ಅಧಿಕವಾಗಿದ್ದರೆ, ಕಡಿಮೆ ಅಥವಾ ಶೂನ್ಯ APR ಹೊಂದಿರುವ ಕಾರ್ಡ್ಗೆ ಬ್ಯಾಲೆನ್ಸ್ ಅನ್ನು ವರ್ಗಾಯಿಸುವುದರಿಂದ ಬಡ್ಡಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕಾರ್ಡುದಾರರು ಮುಂದೆ ಪಾವತಿಸಬೇಕಾದ ಬಡ್ಡಿಯ ಮೊತ್ತವನ್ನು ಅವರ ಹೊಸ ಕ್ರೆಡಿಟ್ ಕಾರ್ಡ್ ವಿತರಕರು ನಿರ್ಧರಿಸುತ್ತಾರೆ.
ಇದನ್ನೂ ಓದಿ : ಪೋಸ್ಟ್ ಆಫೀಸ್ ಯೋಜನೆಯಲ್ಲಿ ಸೂಪರ್ ಬದಲಾವಣೆ... ಹೂಡಿಕೆ ಮಾಡಿದವರ ಪ್ರಗತಿ!
ಕ್ರೆಡಿಟ್ ಕಾರ್ಡ್ ಬ್ಯಾಲೆನ್ಸ್ ಅನ್ನು ಹೇಗೆ ವರ್ಗಾಯಿಸುವುದು? :
- ಬ್ಯಾಲೆನ್ಸ್ ವರ್ಗಾವಣೆ ಸೌಲಭ್ಯದೊಂದಿಗೆ ಬರುವ ಬ್ಯಾಂಕ್ನಿಂದ ಹೊಸ ಕ್ರೆಡಿಟ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿ.
- ಇದರ ನಂತರ ಬ್ಯಾಲೆನ್ಸ್ ವರ್ಗಾವಣೆ ಸೌಲಭ್ಯವನ್ನು ಪ್ರಾರಂಭಿಸಲು ಬ್ಯಾಂಕ್ ಗೆ ತಿಳಿಸಿ .
- ನಿಮ್ಮ ಅಸ್ತಿತ್ವದಲ್ಲಿರುವ ಕಾರ್ಡ್ ವಿವರಗಳನ್ನು ಒದಗಿಸಿ ಮತ್ತು ವರ್ಗಾವಣೆ ಮಾಡಬೇಕಾದ ಮೊತ್ತವನ್ನು ಸಹ ಸೂಚಿಸಿ.
- ಬ್ಯಾಲೆನ್ಸ್ ವರ್ಗಾವಣೆ ಪೂರ್ಣಗೊಂಡ ನಂತರ, ನಿಗದಿತ ಸಮಯದೊಳಗೆ ನಿಮ್ಮ ಬಾಕಿ ಹಣವನ್ನು ಪಾವತಿಸಲು ಪ್ರಾರಂಭಿಸಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.