Foreign Transactions: ಸಾಮಾನ್ಯವಾಗಿ ವಿದೇಶದಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಅಥವಾ ಯಾವುದೇ ಸಂಬಂಧಿಕರಿಗೆ ಅಥವಾ ಯಾವುದೇ ಕೆಲಸಕ್ಕಾಗಿ ಅಥವಾ ತಮ್ಮ ಅಧ್ಯಯನಕ್ಕಾಗಿ ಜನರು ವಿದೇಶಕ್ಕೆ ಹಣವನ್ನು ಕಳುಹಿಸುತ್ತಾರೆ. ಈ ವರ್ಗದಲ್ಲಿ ನೀವೂ ಬರುತ್ತಿದ್ದರೆ ಈ ಸುದ್ದಿ ನಿಮಗಾಗಿ.  ವಾಸ್ತವದಲ್ಲಿ, ಆದಾಯ ತೆರಿಗೆ ಇಲಾಖೆಯು 1 ಜುಲೈ 2023 ರಿಂದ ವಿದೇಶಕ್ಕೆ ಕಳುಹಿಸಿದ ಮೊತ್ತದ ಮೇಲಿನ ತೆರಿಗೆ ನಿಯಮಗಳನ್ನು ಬದಲಾಯಿಸಲಿದೆ. ನೀವು ಸಹ ವಿದೇಶಿ ವಹಿವಾಟುಗಳನ್ನು ಮಾಡುತ್ತಿದ್ದರೆ, ಜುಲೈ 1 ರಿಂದ ವಿದೇಶಿ ವಹಿವಾಟುಗಳಿಗೆ ನೀವು ಎಷ್ಟು ಟಿಸಿಎಸ್ ಪಾವತಿಸಬೇಕಾಗುತ್ತದೆ ಎಂಬುದನ್ನೂ ತಿಳಿದುಕೊಳ್ಳೋಣ ಬನ್ನಿ


COMMERCIAL BREAK
SCROLL TO CONTINUE READING

ಎಷ್ಟು TCS ಕಡಿತಗೊಳಿಸಲಾಗುತ್ತದೆ?
ವಿದೇಶಕ್ಕೆ ಕಳುಹಿಸುವ ಹಣದ ಮೇಲೆ 20% TCS ಕಡಿತಗೊಳಿಸಲಾಗುತ್ತದೆ. ಈ ಬದಲಾವಣೆಯು 1 ಜುಲೈ 2023 ರಿಂದ ಜಾರಿಗೆ ಬರಲಿದೆ. LRS ಅಡಿಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ನೀವು ವೈದ್ಯಕೀಯ ನಿಮಿತ್ತ ಅಥವಾ ಅಧ್ಯಯನಕ್ಕಾಗಿ ದೇಶದ ಹೊರಗೆ ಹಣವನ್ನು ಕಳುಹಿಸಿದರೆ, ನೀವು 5 ಪ್ರತಿಶತ ಟಿಸಿಎಸ್ ಪಾವತಿಸಬೇಕಾಗಲಿದೆ. ಮಾಹಿತಿಯ ಪ್ರಕಾರ, 7 ಲಕ್ಷಕ್ಕಿಂತ ಹೆಚ್ಚಿನ ವಹಿವಾಟುಗಳ ಮೇಲೆ TCS ಕಡಿತಗೊಳಿಸಲಾಗುತ್ತದೆ.


ಹೊಸ ನಿಯಮ ಏನೆಂದು ತಿಳಿಯಿರಿ
ಜುಲೈ 1 ರಿಂದ, ವಿದೇಶಕ್ಕೆ ಹಣವನ್ನು ಕಳುಹಿಸುವಾಗ ಶೇಕಡಾ 20 ರಷ್ಟು TCS ಕಡಿತಗೊಳಿಸಲಾಗುತ್ತದೆ. ನೀವು ವೈದ್ಯಕೀಯ ಅಥವಾ ಶಿಕ್ಷಣಕ್ಕಾಗಿ 7 ಲಕ್ಷಕ್ಕಿಂತ ಹೆಚ್ಚು ಹಣವನ್ನು ಕಳುಹಿಸಿದರೆ, ನೀವು 5 ಪ್ರತಿಶತದಷ್ಟು TCS ಅನ್ನು ಪಾವತಿಸಬೇಕಾಗುತ್ತದೆ.


ಉದಾಹರಣೆಗೆ ನೀವು ವಿದೇಶದಲ್ಲಿರುವ ಯಾರಿಗಾದರೂ 10 ಲಕ್ಷ ರೂ.ಗಳನ್ನು ಕಳುಹಿಸಿದ್ದೀರಿ ಎಂದಿಟ್ಟುಕೊಳ್ಳಿ, ಆಗ ನೀವು 12 ಲಕ್ಷ ರೂ.ಗಳನ್ನು ಬ್ಯಾಂಕಿನಲ್ಲಿ ಠೇವಣಿ ಇಡಬೇಕಾಗುತ್ತದೆ. ಈ ಹೆಚ್ಚುವರಿ ರೂ. 2 ಲಕ್ಷವು ಈ ವಹಿವಾಟಿನ ಮೇಲೆ ಅನ್ವಯವಾಗುವ TCS ಆಗಿರುತ್ತದೆ. ಆದಾಗ್ಯೂ, ನೀವು ಅದರ ಮೇಲೆ ತೆರಿಗೆ ವಿನಾಯಿತಿಯ ಲಾಭವನ್ನು ತೆಗೆದುಕೊಳ್ಳಬಹುದು. ಇದಕ್ಕಾಗಿ, ಐಟಿಆರ್ ಸಲ್ಲಿಸುವಾಗ ನೀವು ತೆರಿಗೆ ಕ್ರೆಡಿಟ್ ಎಂದು ಕ್ಲೈಮ್ ಮಾಡಬಹುದು.


ಇದನ್ನೂ ಓದಿ-India Forex Reserves: ದೇಶದ ವಿದೇಶಿ ವಿನಿಮಯ ಮೀಸಲಿನಲ್ಲಿ ಜಬರ್ದಸ್ತ ಉತ್ಕರ್ಷ, $ 596 ಬಿಲಿಯನ್ ತಲುಪಿದೆ ಮೀಸಲು


ಎಷ್ಟು ಲಾಭ ಸಿಗಲಿದೆ
ನೀವು ರೂ 3 ಲಕ್ಷದವರೆಗೆ ತೆರಿಗೆ ಪ್ರಯೋಜನವನ್ನು ಪಡೆದರೆ, ನೀವು ಕೇವಲ ರೂ 1 ಲಕ್ಷವನ್ನು ಪಾವತಿಸಬೇಕಾಗುತ್ತದೆ, ಏಕೆಂದರೆ ರೂ 2 ಲಕ್ಷವನ್ನು ಟಿಡಿಎಸ್ ರೂಪದಲ್ಲಿ ತೆರಿಗೆ ಕ್ರೆಡಿಟ್ ಆಗಿ ಕ್ಲೈಮ್ ಮಾಡಲಾಗುತ್ತದೆ.


ಇದನ್ನೂ ಓದಿ-New Power Tariff Rule: ಹಗಲಿನಲ್ಲಿ ಕಡಿಮೆ, ರಾತ್ರಿ ವೇಳೆ ಹೆಚ್ಚಿನ ‘ವಿದ್ಯುತ್ ಶುಲ್ಕ’; ಕೇಂದ್ರದಿಂದ ಹೊಸ ರೂಲ್ಸ್!


ಬದಲಾವಣೆಯ ಉದ್ದೇಶ
>> ನಿಯಮ ಬದಲಾವಣೆಯ ಉದ್ದೇಶ ವಿದೇಶಿ ವಹಿವಾಟಿನ ಮೇಲೆ ನಿಗಾ ಇಡುವುದಾಗಿದೆ.
>> ವಿದೇಶಿ ವಿನಿಮಯ ಸಂಗ್ರಹವನ್ನು ಕಾಪಾಡಿಕೊಳ್ಳುವುದು.
>> ಮನಿ ಲಾಂಡರಿಂಗ್ ಅನ್ನು ಕಡಿಮೆ ಮಾಡುವ ಉದ್ದೇಶ
>> ತೆರಿಗೆ ಆದಾಯವನ್ನು ಹೆಚ್ಚಿಸುವುದು
>> ಹೆಚ್ಚಿನ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಬದಲಾವಣೆಗಳನ್ನು ಮಾಡಲಾಗುತ್ತಿದೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.