India Forex Reserves: ದೇಶದ ವಿದೇಶಿ ವಿನಿಮಯ ಮೀಸಲಿನಲ್ಲಿ ಜಬರ್ದಸ್ತ ಉತ್ಕರ್ಷ, $ 596 ಬಿಲಿಯನ್ ತಲುಪಿದೆ ಮೀಸಲು

RBI Data:ಕಳೆದ ವಾರ ವಿದೇಶಿ ವಿನಿಮಯ ಸಂಗ್ರಹದಲ್ಲಿ ಇಳಿಕೆಯಾಗಿತ್ತು. ಆದರೆ ವಿದೇಶಿ ಹೂಡಿಕೆ ಹೆಚ್ಚಳದಿಂದ ಡಾಲರ್ ಮೀಸಲು ಹೆಚ್ಚಳವಾಗಿದೆ.  

Written by - Nitin Tabib | Last Updated : Jun 23, 2023, 09:46 PM IST
  • ಶುಕ್ರವಾರ, ಜೂನ್ 23, 2023 ರಂದು, ಡಾಲರ್ ವಿರುದ್ಧ ರೂಪಾಯಿಯಲ್ಲಿ ವಿದೇಶಿ ಹೂಡಿಕೆದಾರರ ಮಾರಾಟದಿಂದಾಗಿ
  • ವಿನಿಮಯ ಮಾರುಕಟ್ಟೆಯಲ್ಲಿ ದೌರ್ಬಲ್ಯ ಕಂಡುಬಂದಿದೆ. 7 ಪೈಸೆಯ ಸ್ವಲ್ಪ ದುರ್ಬಲತೆಯೊಂದಿಗೆ ಡಾಲರ್ ಎದುರು ರೂಪಾಯಿ ಮೌಲ್ಯ 82.03 ರೂ. ತಲುಪಿದೆ.
  • ಹಿಂದಿನ ಸೇಶನ್ ನಲ್ಲಿ ರೂಪಾಯಿ ಮೌಲ್ಯವು 81.96 ಮಟ್ಟದಲ್ಲಿ ಮುಕ್ತಾಯ ಕಂಡಿತ್ತು.
India Forex Reserves: ದೇಶದ ವಿದೇಶಿ ವಿನಿಮಯ ಮೀಸಲಿನಲ್ಲಿ ಜಬರ್ದಸ್ತ ಉತ್ಕರ್ಷ, $ 596 ಬಿಲಿಯನ್ ತಲುಪಿದೆ ಮೀಸಲು title=

India Forex Reserves: ವಿದೇಶಿ ವಿನಿಮಯ ಸಂಗ್ರಹದಲ್ಲಿ ಮತ್ತೊಮ್ಮೆ ಗಮನಾರ್ಹ ಏರಿಕೆಯಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಜೂನ್ 16, 2023 ಕ್ಕೆ ಕೊನೆಗೊಳ್ಳುವ ವಾರದಲ್ಲಿ, ವಿದೇಶಿ ವಿನಿಮಯ ಮೀಸಲು $ 2.35 ಶತಕೋಟಿಯಿಂದ $ 596.09 ಶತಕೋಟಿಗೆ ತಲುಪಿದೆ. ಇದಕ್ಕೂ ಮುನ್ನ ಜೂನ್ 9ಕ್ಕೆ ಕೊನೆಗೊಂಡ ವಾರದಲ್ಲಿ ವಿದೇಶಿ ವಿನಿಮಯ ಸಂಗ್ರಹವು 593.74 ಬಿಲಿಯನ್ ಡಾಲರ್‌ಗೆ ಇಳಿದಿತ್ತು.

ಆರ್‌ಬಿಐ (ಭಾರತೀಯ ರಿಸರ್ವ್ ಬ್ಯಾಂಕ್) ವಿದೇಶಿ ವಿನಿಮಯ ಸಂಗ್ರಹದ ಅಂಕಿಅಂಶಗಳನ್ನು ಬಿಡುಗಡೆ ಮಾಡಿದೆ, ಅದರ ಪ್ರಕಾರ ವಿದೇಶಿ ವಿನಿಮಯ ಮೀಸಲು $ 2.35 ಶತಕೋಟಿಗಳಷ್ಟು ಹೆಚ್ಚಾಗಿದೆ ಮತ್ತು $ 596.09 ಶತಕೋಟಿಯಷ್ಟಿದೆ. RBI ಅಂಕಿಅಂಶಗಳ ಪ್ರಕಾರ, ವಿದೇಶಿ ಕರೆನ್ಸಿ ಆಸ್ತಿ $ 2.57 ಶತಕೋಟಿ ಜಿಗಿತದೊಂದಿಗೆ $ 527.65 ಶತಕೋಟಿಗೆ ಏರಿದೆ. ಆದರೆ, ಈ ಅವಧಿಯಲ್ಲಿ ಚಿನ್ನದ ಸಂಗ್ರಹದಲ್ಲಿ ಇಳಿಕೆಯಾಗಿದೆ.

ಚಿನ್ನದ ಸಂಗ್ರಹವು $ 324 ಮಿಲಿಯನ್‌ನಿಂದ $ 45.04 ಶತಕೋಟಿಗೆ ಇಳಿದಿದೆ. IMFನೊಂದಿಗಿನ ಮೀಸಲು $34 ಮಿಲಿಯನ್ ಹೆಚ್ಚಳ ಕಂಡಿದೆ ಮತ್ತು ಮತ್ತು ಅದು $5.14 ಶತಕೋಟಿಗೆ ಹೆಚ್ಚಾಗಿದೆ. ಅಕ್ಟೋಬರ್ 2021 ರಲ್ಲಿ ವಿದೇಶಿ ವಿನಿಮಯ ಮೀಸಲು $ 645 ಶತಕೋಟಿ ತಲುಪಿದಾಗ ಭಾರತದ ಇಡುವರೆಗಿನ ಅತ್ಯಧಿಕ ವಿದೇಶಿ ವಿನಿಮಯವನ್ನು ಕಂಡಿತ್ತು.

ಇದನ್ನೂ ಓದಿ-New Power Tariff Rule: ಹಗಲಿನಲ್ಲಿ ಕಡಿಮೆ, ರಾತ್ರಿ ವೇಳೆ ಹೆಚ್ಚಿನ ‘ವಿದ್ಯುತ್ ಶುಲ್ಕ’; ಕೇಂದ್ರದಿಂದ ಹೊಸ ರೂಲ್ಸ್!

2022 ರಲ್ಲಿ, ಡಾಲರ್ ವಿರುದ್ಧ ರೂಪಾಯಿ ದುರ್ಬಲಗೊಂಡ ನಂತರ, ಆರ್‌ಬಿಐ ಡಾಲರ್‌ಗಳನ್ನು ಮಾರಾಟ ಮಾಡಬೇಕಾಗಿತ್ತು, ಇದರಿಂದಾಗಿ ವಿದೇಶಿ ವಿನಿಮಯ ಸಂಗ್ರಹದಲ್ಲಿ ಇಳಿಕೆ ಕಂಡುಬಂದಿದೆ. ವಿದೇಶಿ ಹೂಡಿಕೆದಾರರ ಮಾರಾಟದಿಂದಾಗಿ, ವಿದೇಶಿ ವಿನಿಮಯ ಮೀಸಲು $ 525 ಶತಕೋಟಿಗೆ ಇಳಿದಿದೆ. ಆದರೆ, ಕೆಳಹಂತದಿಂದ ವಿದೇಶಿ ಹೂಡಿಕೆದಾರರು ಭಾರಿ ಹೂಡಿಕೆ ಮಾಡಿದ್ದರಿಂದ ವಿದೇಶಿ ವಿನಿಮಯ ಸಂಗ್ರಹದಲ್ಲಿ ಮತ್ತೆ ಹೆಚ್ಚಳವಾಗಿದೆ.

ಇದನ್ನೂ ಓದಿ-Share Market Update: 63,000 ಅಂಕಗಳಿಗಿಂತಲೂ ಕೆಳಕ್ಕೆ ಜಾರಿದ ಸೆನ್ಸೆಕ್ಸ್, ಮೆಟಲ್ ಹಾಗೂ ಆಟೋ ವಲಯಗಳಲ್ಲಿ ಭಾರಿ ಬಿಕವಾಲಿ

ಶುಕ್ರವಾರ, ಜೂನ್ 23, 2023 ರಂದು, ಡಾಲರ್ ವಿರುದ್ಧ ರೂಪಾಯಿಯಲ್ಲಿ ವಿದೇಶಿ ಹೂಡಿಕೆದಾರರ ಮಾರಾಟದಿಂದಾಗಿ ವಿನಿಮಯ ಮಾರುಕಟ್ಟೆಯಲ್ಲಿ ದೌರ್ಬಲ್ಯ ಕಂಡುಬಂದಿದೆ. 7 ಪೈಸೆಯ ಸ್ವಲ್ಪ ದುರ್ಬಲತೆಯೊಂದಿಗೆ ಡಾಲರ್ ಎದುರು ರೂಪಾಯಿ ಮೌಲ್ಯ 82.03 ರೂ. ತಲುಪಿದೆ. ಹಿಂದಿನ ಸೇಶನ್ ನಲ್ಲಿ ರೂಪಾಯಿ ಮೌಲ್ಯವು 81.96 ಮಟ್ಟದಲ್ಲಿ ಮುಕ್ತಾಯ ಕಂಡಿತ್ತು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News