Cheapest Best Mileage Bikes: ಐಫೋನ್ ನಲ್ಲಿ ದೊರೆಯುವ ಅತ್ಯಂತ ಅಗ್ಗದ ದರದಲ್ಲಿ ದೊರೆಯುವ ಫೋನ್ ಎಂದರೆ ಅದುವೇ ಐಫೋನ್ ಎಸ್ಇ, ಇದರ ಮಾರುಕಟ್ಟೆಯ ಬೆಲೆ ಸುಮಾರು 49900 ರೂ.ಗಳಾಗಿದೆ ಅಂದರೆ, ಸರಿಸುಮಾರು 50 ಸಾವಿರ ರೂಪಾಯಿ ಎಂದು ಪರಿಗಣಿಸಬಹುದು. ಇದೆ ವೇಳೆ, ಐಫೋನ್‌ನ ಟಾಪ್ ಮಾಡೆಲ್ ಎಂದರೆ ಅದು ಐಫೋನ್ 14 ಪ್ರೊ ಮ್ಯಾಕ್ಸ್ ಆಗಿದೆ, ಇದರ ಬೆಲೆ ಒಂದು ಲಕ್ಷ ರೂಪಾಯಿಗಳಿಗಿಂತ ಹೆಚ್ಚು. ಇಂತಹ ಪರಿಸ್ಥಿತಿಯಲ್ಲಿ, ಈ ಬೆಲೆಗೆ ಮಾರುಕಟ್ಟೆಯಲ್ಲಿ ಅನೇಕ ಬೈಕ್‌ಗಳು ಮಾರಾಟಕ್ಕೆ ಲಭ್ಯವಿವೆ, ಅವುಗಳನ್ನು ಖರೀದಿಸಬಹುದು. ಆ ಮೋಟರ್ ಸೈಕಲ್ ಗಳು ಯಾವುವು ಎಂಬುದರ ಕುರಿತು ಇಂದು ನಾವು ನಿಮಗೆ ಮಾಹಿತಿಯನ್ನು ನೀಡುತ್ತಿದ್ದೇವೆ. ಈ ಬೈಕ್ ಗಳ ಆರಂಭಿಕ ಬೆಲೆ ಸುಮಾರು ರೂ.60,000 ರಿಂದ ಪ್ರಾರಂಭವಾಗುತ್ತದೆ. ಈ ಮೋಟಾರ್ ಸೈಕಲ್‌ಗಳು ಉತ್ತಮ ಮೈಲೇಜ್ ಕೂಡ ಕೊಡುತ್ತವೆ.


COMMERCIAL BREAK
SCROLL TO CONTINUE READING

ಟಿವಿಎಸ್ ಸ್ಪೋರ್ಟ್ಸ್
ಟಿವಿಎಸ್ ಸ್ಪೋರ್ಟ್‌ನ ಆರಂಭಿಕ ಬೆಲೆ 64 ಸಾವಿರ ರೂಪಾಯಿಗಳು, ಇದು 68 ಸಾವಿರ ರೂಪಾಯಿಗಳವರೆಗೆ ಹೋಗುತ್ತದೆ. ಇದು 109 ಸಿಸಿ ಎಂಜಿನ್ ಹೊಂದಿದೆ. ಇದು 8.18bhp ಗರಿಷ್ಠ ಶಕ್ತಿಯನ್ನು ನೀಡುತ್ತದೆ. ಇದು ಕಂಪನಿಯ ಹೆಚ್ಚು ಮಾರಾಟವಾಗುವ ಮೋಟಾರ್‌ಸೈಕಲ್‌ಗಳಲ್ಲಿ ಒಂದಾಗಿದೆ. ಇದರ ನಿರ್ವಹಣಾ ವೆಚ್ಚ ತುಂಬಾ ಕಡಿಮೆ. ಟಿವಿಎಸ್ ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಲಾದ ಕೆಲವು ವಿಮರ್ಶೆಗಳ ಪ್ರಕಾರ ಈ ಬೈಕು 110 ಕಿಮೀ ವರೆಗೆ ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ ಎನ್ನಲಾಗಿದೆ.


ಹೀರೋ HF ಡಿಲಕ್ಸ್
Hero HF DELUXE ನ ಆರಂಭಿಕ ಬೆಲೆ 60,308 ರೂ ಆಗಿದ್ದು, ಇದು 65,938 ರೂ.ಗಳವರೆಗೆ ಹೋಗುತ್ತದೆ ಕಂಪನಿಯ ವೆಬ್‌ಸೈಟ್‌ನಲ್ಲಿ ಗ್ರಾಹಕರೊಬ್ಬರನ್ನು ಉಲ್ಲೇಖಿಸಿದ ಪ್ರಕಾರ, ಈ ಬೈಕ್ 100 ಕಿಮೀಗಿಂತ ಹೆಚ್ಚು ಮೈಲೇಜ್ ನೀಡಬಲ್ಲದು ಎನ್ನಲಾಗಿದೆ. ಬೈಕ್ 97.2ಸಿಸಿ ಎಂಜಿನ್ ಹೊಂದಿದೆ. ಇದು 5.9kw ಗರಿಷ್ಠ ಶಕ್ತಿ ಮತ್ತು 8.5Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.


ಇದನ್ನೂ ಓದಿ-Good News: ರೈತ ಬಾಂಧವರಿಗೊಂದು ಮಹತ್ವದ ಸುದ್ದಿ, ಈ ಫಸಲು ಬೆಳೆದು ಬಂಪರ್ ಲಾಭ ನಿಮ್ಮದಾಗಿಸಿಕೊಳ್ಳಿ


ಬಜಾಜ್ ಪ್ಲಾಟಿನಾ 100
ಬಜಾಜ್ ಪ್ಲಾಟಿನಾ 100 ನ ಆರಂಭಿಕ ಬೆಲೆ ರೂ.64653 ಆಗಿದೆ. ಬೈಕ್ 102 ಸಿಸಿ 4 ಸ್ಟ್ರೋಕ್, ಡಿಟಿಎಸ್-ಐ, ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದೆ. ಈ ಎಂಜಿನ್ 5.8 kW ಗರಿಷ್ಠ ಶಕ್ತಿ ಮತ್ತು 8.3 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಇದು 4-ಸ್ಪೀಡ್ ಗೇರ್ ಬಾಕ್ಸ್ ಅನ್ನು ಹೊಂದಿದೆ. ಈ ಬೈಕು 70 ಕಿಲೋಮೀಟರ್‌ಗಿಂತ ಹೆಚ್ಚು ಮೈಲೇಜ್ ಹೊಂದಿದೆ. ಗರಿಷ್ಠ ವೇಗ ಗಂಟೆಗೆ 90 ಕಿ.ಮೀ.


ಇದನ್ನೂ ಓದಿ-New Packaging Law: ಎಫ್ಎಂಸಿಜಿ ಕಂಪನಿಗಳಿಗೆ ಭಾರಿ ನೆಮ್ಮದಿಯ ಸುದ್ದಿ ಪ್ರಕಟಿಸಿದ ಕೇಂದ್ರ ಸರ್ಕಾರ


ಬಜಾಜ್ CT110X
ಬಜಾಜ್ CT110X ನ ಬೆಲೆ ರೂ.59,104 ರಿಂದ ಪ್ರಾರಂಭವಾಗುತ್ತದೆ. ಇದು 115.45cc 4 ಸ್ಟ್ರೋಕ್, ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದೆ. ಈ ಎಂಜಿನ್ 8.6 ಪಿಎಸ್ ಗರಿಷ್ಠ ಶಕ್ತಿ ಮತ್ತು 9.81 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಇದು 4-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಬರುತ್ತದೆ. ಇದರ ಮೈಲೇಜ್ ಕೂಡ 70 ಕಿಮೀಗಿಂತ ಹೆಚ್ಚು.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.