Good News: ರೈತ ಬಾಂಧವರಿಗೊಂದು ಮಹತ್ವದ ಸುದ್ದಿ, ಈ ಫಸಲು ಬೆಳೆದು ಬಂಪರ್ ಲಾಭ ನಿಮ್ಮದಾಗಿಸಿಕೊಳ್ಳಿ

Good News For Farmers: ರಾಬಿ ಹಂಗಾಮು ಆರಂಭಗೊಂಡಿದೆ. ರೈತರು ತಮ್ಮ ತಮ್ಮ ಹೊಲಗಳಲ್ಲಿ ಗೋಧಿಯನ್ನು ಬಿತ್ತುತ್ತಿದ್ದಾರೆ. ಹಿಮಾಚಲ್ ಪ್ರದೇಶದ ಕೃಷಿ ಇಲಾಖೆಯ ವಿಜ್ಞಾನಿಗಳು ಗೋಧಿಯ ಎರಡು ಹೊಸ ತಳಿಗಳನ್ನು ಅಭಿವೃದ್ಧಿಗೊಳಿಸಿದ್ದಾರೆ. ಇವುಗಳನ್ನು ತಮ್ಮ ಹೊಲಗಳಲ್ಲಿ ಬಿತ್ತನೆ ಮಾಡಿ ರೈತರು ಬಂಪರ್ ಆದಾಯವನ್ನು ಗಳಿಸಬಹುದು.  

Written by - Nitin Tabib | Last Updated : Dec 2, 2022, 07:08 PM IST
  • ರ್ಕಾರವು ರಾಜ್ಯದಲ್ಲಿ ಗೋಧಿ ಉತ್ಪಾದನೆಯನ್ನು ಉತ್ತೇಜಿಸಲು ಕೆಲಸ ಮಾಡುತ್ತಿದೆ.
  • ಅಲ್ಲಿನ ಕೃಷಿ ಇಲಾಖೆ ಇದೀಗ DBW 222, DBW 187 ತಳಿಯ ಗೋಧಿಯನ್ನು ಅಭಿವೃದ್ಧಿಪಡಿಸಿದೆ.
  • ರಾಜ್ಯದ ಪರಿಸರವನ್ನು ಗಮನದಲ್ಲಿಟ್ಟುಕೊಂಡು ಈ ಹೊಸ ತಳಿಗಳನ್ನು ಸಿದ್ಧಪಡಿಸಲಾಗಿದೆ ಎನ್ನುತ್ತಾರೆ ವಿಜ್ಞಾನಿಗಳು.
Good News: ರೈತ ಬಾಂಧವರಿಗೊಂದು ಮಹತ್ವದ ಸುದ್ದಿ, ಈ ಫಸಲು ಬೆಳೆದು ಬಂಪರ್ ಲಾಭ ನಿಮ್ಮದಾಗಿಸಿಕೊಳ್ಳಿ title=
Wheat Cultivation

Wheat Cultivation: ದೇಶಾದ್ಯಂತ ರಾಬಿ ಹಂಗಾಮು ಆರಂಭಗೊಂಡಿದೆ. ದೇಶಾದ್ಯಂತದ ರೈತ ಬಾಂಧವರು ತಮ್ಮ ತಮ್ಮ ಗದ್ದೆಗಳಲ್ಲಿ ಗೋಧಿಯನ್ನು ಬಿತ್ತುತ್ತಿದ್ದಾರೆ. ಇದಕ್ಕಾಗಿ ರೈತರು ಮಾರುಕಟ್ಟೆಯಲ್ಲಿ ಮತ್ತು ಬ್ಲಾಕ್‌ನಲ್ಲಿ ಉತ್ತಮ ಬೀಜಗಳನ್ನು ಹುಡುಕುತ್ತಿದ್ದಾರೆ. ಇದೇ ವೇಳೆ, ಕೃಷಿ ವಿಜ್ಞಾನಿಗಳು ಮತ್ತು ಕೃಷಿ ತಜ್ಞರು ಸಹ ರೈತರಿಗೆ ಉತ್ತಮ ಗುಣಮಟ್ಟದ ಮತ್ತು ಅಧಿಕ ಇಳುವರಿ ನೀಡುವ ಗೋಧಿಯ ಹೆಸರನ್ನು ಸೂಚಿಸುತ್ತಿದ್ದಾರೆ. ಪ್ರಸ್ತುತ ಹಿಮಾಚಲ ಪ್ರದೇಶದಲ್ಲಿ ಎರಡು ಹೊಸ ತಳಿಯ ಗೋಧಿಯನ್ನು ಅಭಿವೃದ್ಧಿಪಡಿಸಲಾಗಿದೆ. ರೈತರು ತಮ್ಮ ಹೊಲಗಳಲ್ಲಿ ಬಿತ್ತನೆ ಮಾಡುವ ಮೂಲಕ ಬಂಪರ್ ಇಳುವರಿ ಪಡೆಯಬಹುದು. ವಿಶೇಷವೆಂದರೆ ಈ ಜಾತಿಗಳಿಗೆ ಹೆಚ್ಚು ನೀರಿನ ಅಗತ್ಯ ಬೀಳುವುದಿಲ್ಲ ಎನ್ನಲಾಗಿದೆ. ಹೀಗಾಗಿ ರೈತರ ಮುಂದೆ ನೀರಿನ ಸಮಸ್ಯೆಯೂ ಇರುವುದಿಲ್ಲ.

DBW 222, DBW 187 ತಳಿಗಳು
ಹಿಮಾಚಲ ಪ್ರದೇಶ ಸರ್ಕಾರವು ರಾಜ್ಯದಲ್ಲಿ ಗೋಧಿ ಉತ್ಪಾದನೆಯನ್ನು ಉತ್ತೇಜಿಸಲು ಕೆಲಸ ಮಾಡುತ್ತಿದೆ. ಅಲ್ಲಿನ ಕೃಷಿ ಇಲಾಖೆ ಇದೀಗ DBW 222, DBW 187 ತಳಿಯ ಗೋಧಿಯನ್ನು ಅಭಿವೃದ್ಧಿಪಡಿಸಿದೆ.. ರಾಜ್ಯದ ಪರಿಸರವನ್ನು ಗಮನದಲ್ಲಿಟ್ಟುಕೊಂಡು ಈ ಹೊಸ ತಳಿಗಳನ್ನು ಸಿದ್ಧಪಡಿಸಲಾಗಿದೆ ಎನ್ನುತ್ತಾರೆ ವಿಜ್ಞಾನಿಗಳು. ಪ್ರಸ್ತುತ ಬಿತ್ತುತ್ತಿರುವ ಗೋಧಿಯ ತಳಿಗಳು. DBW 222, DBW 187 ರ ಉತ್ಪಾದನೆಯು ಅವುಗಳಿಗಿಂತ ಹೆಚ್ಚಾಗಿರಲಿದೆ. ಹಿಮಾಚಲದ ಮುಖ್ಯ ಆಹಾರ ಬೆಳೆಗಳಲ್ಲಿ ಗೋಧಿ, ಭತ್ತ, ಜೋಳ, ಬಾರ್ಲಿ ಮತ್ತು ಎಣ್ಣೆಕಾಳುಗಳು ಶಾಮೀಲಾಗಿವೆ. ಈ ಬೆಳೆಗಳ ಅತ್ಯಧಿಕ ಇಳುವರಿಗೆ ಅಲ್ಲಿನ ಸರ್ಕಾರದ ಒತ್ತು ನೀಡುತ್ತಿದೆ.

ಇದನ್ನೂ ಓದಿ-New Packaging Law: ಎಫ್ಎಂಸಿಜಿ ಕಂಪನಿಗಳಿಗೆ ಭಾರಿ ನೆಮ್ಮದಿಯ ಸುದ್ದಿ ಪ್ರಕಟಿಸಿದ ಕೇಂದ್ರ ಸರ್ಕಾರ

23 ಸಾವಿರ ಕ್ವಿಂಟಲ್ ಬೀಜ ವಿತರಿಸಲಾಗಿದೆ
ಹಿಮಾಚಲ ಪ್ರದೇಶದಲ್ಲಿ ಈ ಬೀಜಗಳ ಬಿತ್ತನೆಯನ್ನು ವೇಗಗೊಳಿಸಲು, ರಾಜ್ಯ ಸರ್ಕಾರವು ರೈತರಿಗೆ 23 ಸಾವಿರ ಕ್ವಿಂಟಾಲ್ ಬೀಜಗಳನ್ನು ಶೇ.50ರಷ್ಟು ಸಬ್ಸಿಡಿಯಲ್ಲಿ ವಿತರಿಸಿದೆ. ರೈತರಿಗೆ ಈ ಬೀಜಗಳ ಪ್ರವೇಶವನ್ನು ಸಹ ಖಾತ್ರಿಪಡಿಸಲಾಗುತ್ತಿದೆ. ಈಗಿರುವ ಗೋಧಿ ತಳಿಯು ಪ್ರತಿ ಹೆಕ್ಟೇರ್‌ಗೆ 35 ರಿಂದ 37 ಕ್ವಿಂಟಾಲ್ ಧಾನ್ಯವನ್ನು ಉತ್ಪಾದಿಸುತ್ತದೆ, ಆದರೆ ಅಭಿವೃದ್ಧಿಗೊಳಿಸಲಾಗಿರುವ ಹೊಸ ತಳಿಯಿಂದ ಹೆಕ್ಟೇರ್‌ಗೆ 60 ಕ್ವಿಂಟಾಲ್‌ ಇಳುವರಿಯನ್ನು ಪಡೆಯಬಹುದು.

ಇದನ್ನೂ ಓದಿ-Employee's Pension Limit: ಇನ್ಮುಂದೆ 25000 ರೂ. ಪೆನ್ಷನ್ ಸಿಗಲಿದೆ! ಶೇ.333 ವೃದ್ಧಿ, ಹೇಗೆ ಇಲ್ಲಿ ತಿಳಿದುಕೊಳ್ಳಿ

ಎಷ್ಟು ಗೋಧಿ ಬೆಳೆಯುವ ಗುರಿ ಹೊಂದಲಾಗಿದೆ
ಮಾಧ್ಯಮ ವರದಿಗಳ ಪ್ರಕಾರ, ರಾಜ್ಯದಲ್ಲಿ ಪ್ರಸ್ತುತ 6.17 ಲಕ್ಷ ಮೆಟ್ರಿಕ್ ಟನ್ (ಎಂಟಿ) ಗೋಧಿಯನ್ನು ಉತ್ಪಾದಿಸಲಾಗುತ್ತಿದೆ. ಗೋಧಿ ಬೆಳೆಯುವ ಪ್ರದೇಶದ ಬಗ್ಗೆ ಹೇಳುವುದಾದರೆ, ಇದು 3.30 ಲಕ್ಷ ಹೆಕ್ಟೇರ್ ನಷ್ಟಿದೆ. ಪ್ರಸಕ್ತ ಹಂಗಾಮಿನಲ್ಲಿ 2022-23ರಲ್ಲಿ ಒಟ್ಟು 1649.97 ಸಾವಿರ ಮೆಟ್ರಿಕ್ ಟನ್ ಆಹಾರ ಧಾನ್ಯ ಉತ್ಪಾದನೆಯಾಗುವ ಸಾಧ್ಯತೆ ಇದೆ. 2022-23ನೇ ಸಾಲಿನಲ್ಲಿ ರಬಿಗೆ 687.41 ಸಾವಿರ ಟನ್ ಮತ್ತು ಖಾರಿಫ್‌ಗೆ 962.56 ಸಾವಿರ ಟನ್ ಗುರಿ ನಿಗದಿಪಡಿಸಲಾಗಿದೆ. ರಾಜ್ಯದಲ್ಲಿ ಆಹಾರ ಧಾನ್ಯಗಳಲ್ಲದೆ ಆಲೂಗಡ್ಡೆ, ತರಕಾರಿ, ಶುಂಠಿಯನ್ನೂ ಬಿತ್ತಲಾಗುತ್ತದೆ. ತರಕಾರಿಗಳಿಗೆ 82,000 ಹೆಕ್ಟೇರ್, ಆಲೂಗಡ್ಡೆಗೆ 15.10 ಸಾವಿರ ಹೆಕ್ಟೇರ್ ಮತ್ತು ಶುಂಠಿಗೆ (ಹಸಿರು) ಮೂರು ಸಾವಿರ ಹೆಕ್ಟೇರ್ ಪ್ರದೇಶವನ್ನು ನಿಗದಿಪಡಿಸಲಾಗಿದೆ. ರೈತರಿಗೆ ಸಹಾಯ ಮಾಡಲು ರಾಜ್ಯ ಸರ್ಕಾರ ಸಬ್ಸಿಡಿ ಮೇಲೆ ಬೀಜಗಳನ್ನು ವಿತರಿಸುತ್ತಿದೆ. ಇದರಿಂದ ರೈತರು ಕಡಿಮೆ ಬೆಲೆಯಲ್ಲಿ ಉತ್ತಮ ಫಸಲು ಪಡೆಯಬಹುದು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News