ಇದು Super AC: ಈ ಏರ್ ಕಂಡಿಷನ್ ಗೆ ಕರೆಂಟ್ ಬೇಕಾಗಿಯೇ ಇಲ್ಲ
ನಾವು ಹೇಳುತ್ತಿರುವುದು ಸೋಲಾರ್ ಏರ್ ಕಂಡೀಷನ್ ಬಗ್ಗೆ. ಇದು ಕೂಡಾ ನಾರ್ಮಲ್ ಎಸಿ ರೀತಿಯಲ್ಲಿ 1 ಟನ್, 1.5 ಟನ್ ಮತ್ತು 2 ಟನ್ ಸಾಮರ್ಥ್ಯದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ.
ನವದೆಹಲಿ : ಬೇಸಿಗೆಯಲ್ಲಿ (Summer) ಎಸಿ ಇರದೇ ಇರಲು ಆಗುವುದಿಲ್ಲ. ಒಂದು ವೇಳೆ ಎಸಿ (AC)ಹಾಕಿಸಿಕೊಂಡರೂ, ಎಸಿಗೆ ತಗಲುವ ಕರೆಂಟ್ ಬಿಲ್ ಪೇ ಮಾಡುವುದು ಕೂಡಾ ದೊಡ್ಡ ಸಮಸ್ಯೆ. ಹೀಗಿರುವಾಗ ಇಲ್ಲೊಂದು ವಿಶೇಷ ಎಸಿ ಬಂದಿದೆ. ಇದಕ್ಕೆ ಕರೆಂಟ್ ಬೇಡವೇ ಬೇಡ. ಹಾಗಾಗಿ ಕರೆಂಟ್ ಬಿಲ್ ಬರುವುದೇ ಇಲ್ಲ. ಅಂಥಹ ವಿಶೇಷ ಏರ್ ಕಂಡೀಷನ್ (Special Air Condition) ಯಾವುದು ನೋಡೋಣ.
ಬಂದಿದೆ ಸೋಲಾರ್ ಏರ್ ಕಂಡೀಷನ್ :
ನಾವು ಹೇಳುತ್ತಿರುವುದು ಸೋಲಾರ್ ಏರ್ ಕಂಡೀಷನ್ (Solar Air Condition) ಬಗ್ಗೆ. ಇದು ಕೂಡಾ ನಾರ್ಮಲ್ ಎಸಿ ರೀತಿಯಲ್ಲಿ 1 ಟನ್, 1.5 ಟನ್ ಮತ್ತು 2 ಟನ್ ಸಾಮರ್ಥ್ಯದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ನೀವು ಸಾಮಾನ್ಯ ಎಸಿಯನ್ನು (Ac) ರಾತ್ರಿ ಚಲಾಯಿಸುತ್ತೀರಿ. ರಾತ್ರಿಯಿಂದ ಬೆಳಗಿನ ತನಕ ಏನಿಲ್ಲವಂದ್ರೂ 10-12 ಯೂನಿಟ್ ಕರೆಂಟ್ ಖರ್ಚಾಗಿರುತ್ತದೆ. ಯೂನಿಟ್ ಗೆ 7 ರೂಪಾಯಿ ಅಂತ ಲೆಕ್ಕ ಹಾಕಿದರೂ 70-84 ರೂಪಾಯಿ ತನಕ ದಿನಕ್ಕೆ ಕರೆಂಟ್ ಬಿಲ್ ಕೇವಲ ಎಸಿಗಾಗಿ ಖರ್ಚಾಗುತ್ತದೆ. ತಿಂಗಳಿಗೆ ಏನಿಲ್ಲ ಅಂದ್ರೂ 2100 -2500 ರೂಪಾಯಿ ತನಕ ಕರೆಂಟ್ ಬಿಲ್ (Electricity Bill) ಹೆಚ್ಚಿಗೆ ಬರುತ್ತದೆ. ಸೋಲಾರ್ ಎಸಿ ಬಳಸಿದರೆ ಈ ಖರ್ಚು ಉಳಿಯುತ್ತದೆ.
ಇದನ್ನೂ ಓದಿ : ಹಲವು ವೈಶಿಷ್ಟ್ಯಗಳನ್ನು ಹೊಂದಿರುವ ಹೀರೋನ ಅಗ್ಗದ ಬೈಕು ಬಿಡುಗಡೆ..!
ಸೋಲಾರ್ ಎಸಿ ಕೆಲಸ ಹೇಗೆ ಮಾಡುತ್ತದೆ.?
ಸೋಲಾರ್ ಎಸಿ ಎಷ್ಟು ಟನ್ ಇದೆಯೋ, ಆ ಲೆಕ್ಕಾಚಾರದಲ್ಲಿ ಸೋಲಾರ್ ಪ್ಲೇಟ್ ಹಾಕಲಾಗುತ್ತದೆ. ಒಂದು ವೇಳೆ ಸೋಲಾರ್ ಎಸಿ 1 ಟನ್ ಇದ್ದರೆ 1500 ವಾಟ್ ಶಕ್ತಿಯ ಸೋಲಾರ್ ಪ್ಲೇಟ್ ಹಾಕಲಾಗುತ್ತದೆ. ಆ ಸೌರ ಫಲಕಕ್ಕೊಂದು ಇನ್ ವರ್ಟರ್ ಮತ್ತು ಬ್ಯಾಟರಿ ಲಿಂಕ್ ಆಗಿರುತ್ತದೆ. ಸೂರ್ಯ ಕಿರಣ ಸೌರ ಫಲಕದ ಮೇಲೆ ಬೀಳುತ್ತದೆ. ಅಲ್ಲಿಂದ ವಿದ್ಯುತ್ ಉತ್ಪಾದನೆಯಾಗಿ ಬ್ಯಾಟರಿ ರಿಚಾರ್ಜ್ (Battery Recharge) ಆಗುತ್ತದೆ. ಸೌರ ಶಕ್ತಿಯಿಂದ ಎಸಿ (AC) ಕೆಲಸ ಮಾಡಲು ಶುರು ಮಾಡುತ್ತದೆ. ಒಂದು ವೇಳೆ, ಸೂರ್ಯ ಕಿರಣ ಇಲ್ಲದ ದಿನ ಬ್ಯಾಟರಿ ರಿಚಾರ್ಜ್ ಆಗದೇ ಹೋದರೂ ಕೂಡಾ ನೀವು ಅದನ್ನು ವಿದ್ಯುತ್ ನಿಂದ ಕೂಡಾ ಚಲಾಯಿಸಬಹುದು. ಹಾಗಾಗಿ ಸೋಲಾರ್ ಎಸಿ ಬಳಸಿದರೆ ನಿಮಗೆ ಕರೆಂಟ್ ಬಿಲ್ ಬರುವುದಿಲ್ಲ. ಬಂದರೂ ಅತ್ಯಲ್ಪ ಅಷ್ಟೆ.
ಈ ಸೋಲಾರ್ ಎಸಿ ಬೆಲೆ ಎಷ್ಟು.?
ಸೋಲಾರ್ ಎಸಿ ಮಾರುವ ಬಹಳಷ್ಟು ಕಂಪನಿಗಳು ಈಗ ಮಾರುಕಟ್ಟೆಯಲ್ಲಿವೆ (Market). 40 ಸಾವಿರ ದಿಂದ ಹಿಡಿದು 2 ಲಕ್ಷದ ತನಕ ಬೆಲೆಯಲ್ಲಿ ಸೋಲಾರ್ ಎಸಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಪಾಕೆಟ್ ಗೆ ತುಸು ಭಾರ ಅನ್ನಿಸಿದರೂ, ಭಾರೀ ಕರೆಂಟ್ ಬಿಲ್ ಉಳಿಸುವ ಕಾರಣ ಸೋಲಾರ್ ಎಸಿಗಳಿಗೆ ಮಾರುಕಟ್ಟೆಯಲ್ಲಿ ಡಿಮ್ಯಾಂಡ್ ದೊಡ್ಡದಿದೆ.
ಇದನ್ನೂ ಓದಿ : ಲೋನ್ ಹೆಸರಿನಲ್ಲಿ ನಡೆಯುತ್ತಿದೆ ಭಯಾನಕ ಮೋಸ.! ಗ್ರಾಹಕರನ್ನು ಎಚ್ಚರಿಸಿದ ಎಸ್ ಬಿಐ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.