ಲೋನ್ ಹೆಸರಿನಲ್ಲಿ ನಡೆಯುತ್ತಿದೆ ಭಯಾನಕ ಮೋಸ.! ಗ್ರಾಹಕರನ್ನು ಎಚ್ಚರಿಸಿದ ಎಸ್ ಬಿಐ

SBI Loan Finance Ltd ಕಂಪನಿಯು ಗ್ರಾಹಕರನ್ನು ಲೋನ್  ವಿಚಾರವಾಗಿ ಸಂಪರ್ಕಿಸುತ್ತಿರುವ ವಿಚಾರ ಬೆಳಕಿಗೆ ಬಂದಿರುವುದಾಗಿ ಬ್ಯಾಂಕ್ ಹೇಳಿದೆ. ಅಲ್ಲದೆ ಈ ಕಂಪನಿಗೂ ಎಸ್ ಬಿಐ ಗೂ ಯಾವುದೇ ಸಂಬಂಧ ಇಲ್ಲ ಎನ್ನುವುದನ್ನು ಬ್ಯಾಂಕ್ ಸ್ಪಷ್ಟಪಡಿಸಿದೆ.   

Written by - Ranjitha R K | Last Updated : Apr 21, 2021, 12:53 PM IST
  • ಲೋನ್ ವಂಚನೆ ಬಗ್ಗೆ ಗ್ರಾಹಕರನ್ನು ಎಚ್ಚರಿಸಿದ ಬ್ಯಾಂಕ್
  • SBI Loan Finance Ltd. ಕಂಪನಿಗೂ ಎಸ್ ಬಿಐಗೂ ಸಂಬಂಧವಿಲ್ಲ ಎಂದ ಬ್ಯಾಂಕ್
  • ಸಾಲ ಪಡೆಯಲು ಬಯಸುವುದಾದರೆ ನೇರ ಬ್ಯಾಂಕ್ ಗೆ ಬರುವಂತೆ ಸೂಚನೆ
ಲೋನ್ ಹೆಸರಿನಲ್ಲಿ ನಡೆಯುತ್ತಿದೆ ಭಯಾನಕ ಮೋಸ.! ಗ್ರಾಹಕರನ್ನು ಎಚ್ಚರಿಸಿದ ಎಸ್ ಬಿಐ

ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India) ಆನ್‌ಲೈನ್ ವಂಚನೆಗಳ ಬಗ್ಗೆ ಕಾಲಕಾಲಕ್ಕೆ ತನ್ನ ಗ್ರಾಹಕರನ್ನು  ಎಚ್ಚರಿಸುತ್ತಲೇ ಇರುತ್ತದೆ. ಈ ಬಾರಿ ಎಸ್‌ಬಿಐ ತನ್ನ ಗ್ರಾಹಕರಿಗೆ ಸಾಲ ನೀಡುವಂತೆ ಬರುವ ನಕಲಿ ಕರೆಗಳ (fake call) ಬಗ್ಗೆ ಎಚ್ಚರಿಕೆ ನೀಡಿದೆ.

ಲೋನ್ ಆಫರ್ ಗಳ ಬಗ್ಗೆ ಗ್ರಾಹಕರನ್ನು ಎಚ್ಚರಿಸಿದ ಎಸ್‌ಬಿಐ : 
SBI Loan Finance Ltd ಕಂಪನಿಯು ಗ್ರಾಹಕರನ್ನು ಲೋನ್ (Loan) ವಿಚಾರವಾಗಿ ಸಂಪರ್ಕಿಸುತ್ತಿರುವ ವಿಚಾರ ಬೆಳಕಿಗೆ ಬಂದಿರುವುದಾಗಿ ಬ್ಯಾಂಕ್ ಹೇಳಿದೆ. ಅಲ್ಲದೆ ಈ ಕಂಪನಿಗೂ ಎಸ್ ಬಿಐ ಗೂ (SBI) ಯಾವುದೇ ಸಂಬಂಧ ಇಲ್ಲ ಎನ್ನುವುದನ್ನು ಬ್ಯಾಂಕ್ ಸ್ಪಷ್ಟಪಡಿಸಿದೆ.   SBI Loan Finance Ltd.  ಲೋನ್ ಹೆಸರಿನಲ್ಲಿ ಗ್ರಾಹಕರಿಗೆ ಮೋಸ ಮಾಡುತ್ತಿದೆ . ಹಾಗಾಗಿ ಗ್ರಾಹಕರು ಎಚ್ಚರಿಕೆಯಿಂದ ರುವಂತೆ ಬ್ಯಾಂಕ್ ಸೂಚಿಸಿದೆ.  

ಇದನ್ನೂ ಓದಿ : NPS: ದಿನಕ್ಕೆ 180 ರೂ. ಹೂಡಿಕೆ ಮಾಡಿ, ನಿವೃತ್ತಿ ವೇಳೆ ಕೋಟ್ಯಾಧಿಪತಿಯಾಗಿ

ಸಾಲ ಪಡೆಯಲು ಬಯಸುವುದಾದರೆ ನೇರ ಬ್ಯಾಂಕ್ ಗೆ ಬರುವಂತೆ ಸೂಚನೆ : 
ಈ ಕಂಪನಿಯು ಲೋನ್ ವಿಚಾರವಾಗಿ ಸಂಪರ್ಕಿಸಿದರೆ ಗ್ರಾಹಕರು ಯಾವುದೇ ರೀತಿಯ ರಿಜಿಸ್ಟ್ರೇಷನ್ ಚಾರ್ಜ್ , ಪ್ರೊಸೆಸಿಂಗ್ ಚಾರ್ಜ್ ನೀಡದಂತೆ ಬ್ಯಾಮಕ್ ಎಚ್ಚರಿಸಿದೆ. ಒಂದು ವೇಳೆ ಗ್ರಾಹಕರು ಸಾಲ ಪಡೆಯಲು ಬಯಸಿದರೆ, ನೇರವಾಗಿ ಸಮೀಪದ ಎಸ್ ಬಿಐ ಶಾಖೆಗೆ ಭೇಟಿ ನೀಡುವಂತೆ ಬ್ಯಾಂಕ್ (Bank) ಹೇಳಿದೆ.  ಅಲ್ಲದೆ ಮಧ್ಯವರ್ತಿಗಳ ಸಹಾಯವನ್ನು ಕೂಡಾ ಪಡೆಯದಂತೆ ಬ್ಯಾಂಕ್ ಮನವಿ ಮಾಡಿದೆ. 

ಈ ಮಾಹಿತಿಯನ್ನು ಫೋನ್‌ನಲ್ಲಿ ಉಳಿಸಬೇಡಿ : ಎಸ್‌ಬಿಐ
ಈ ಮೊದಲು, ಎಸ್‌ಬಿಐ ಮತ್ತೊಂದು ಎಚ್ಚರಿಕೆಯನ್ನು ನೀಡಿತ್ತು. ಅದರಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಮೊಬೈಲ್‌ನಲ್ಲಿ (Mobile) ಸೇವ್ ಮಾಡಿ ಇಟ್ಟುಕೊಳ್ಳದಂತೆ ಎಸ್ ಬಿಐ ಗ್ರಾಹಕರಿಗೆ ಸೂಚಿಸಿತ್ತು. ಬ್ಯಾಂಕಿಂಗ್ ಪಿನ್, ಡೆಬಿಟ್ ಕಾರ್ಡ್ (Debit card), ಕ್ರೆಡಿಟ್ ಕಾರ್ಡ್ ಮಾಹಿತಿ ಮತ್ತು ಅದರ ಪಾಸ್‌ವರ್ಡ್, ಸಿವಿವಿ (CVV) ಇತ್ಯಾದಿಗಳನ್ನು ಮೊಬೈಲ್‌ನಲ್ಲಿ ಯಾವುದೇ ಕಾರಣಕ್ಕೂ ಸೇವ್ ಮಾಡಬಾರದು ಎಂದು ಎಸ್‌ಬಿಐ ಎಚ್ಚರಿಸಿದೆ. ಒಂದು ವೇಳೆ ಪೋನಿನಲ್ಲಿ ಈ ಎಲ್ಲಾ ಮಾಹಿತಿಗಳನ್ನು ಸೇವ್ ಮಾಡಿದ್ದರೆ ಇದನ್ನು ತಕ್ಷಣ ಡಿಲೀಟ್ ಮಾಡಿ. ಇಲ್ಲವಾದರೆ ಆನ್ ಲೈನ್ ವಂಚನೆಗೆ ಒಳಗಾಗುವ ಸಾಧ್ಯತೆಯಿದೆ. 

ಇದನ್ನೂ ಓದಿ : FD Account: ಈ ಬ್ಯಾಂಕಿನ ಖಾತೆದಾರರು ಮನೆಯಲ್ಲೇ ಕುಳಿತು ಎಫ್‌ಡಿ ಖಾತೆ ತೆರೆಯಲು ಇಲ್ಲಿದೆ ಸುಲಭ ಮಾರ್ಗ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

More Stories

Trending News