EPFO Alert : ನೀವು ಕೂಡಾ ಈ ತಪ್ಪು ಮಾಡಿರಬಹುದಾ ? ಒಮ್ಮೆ ಪರಿಶೀಲಿಸಿಕೊಳ್ಳಿ
ಇಪಿಎಫ್‌ಒ ಖಾತೆದಾರರಿಗೆ ತಮ್ಮ ಪಿಎಫ್ ಖಾತೆ ಮತ್ತು ವೈಯಕ್ತಿಕ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳದಂತೆ ಹೇಳಲಾಗಿದೆ. ಯಾವುದೇ ರೀತಿಯ ಅಪರಿಚಿತ ಆ್ಯಪ್ ಡೌನ್‌ಲೋಡ್ ಮಾಡದಂತೆಯೂ ಎಚ್ಚರಿಕೆ ನೀಡಿದೆ.
ನವದೆಹಲಿ : EPFO Alerts : ನೌಕರರ ಭವಿಷ್ಯ ನಿಧಿ ಸಂಸ್ಥೆ ತನ್ನ ಚಂದಾದಾರರಿಗೆ ಎಚ್ಚರಿಕೆಯ ಸಂದೇಶವನ್ನು ನೀಡಿದೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು (EPFO) ತನ್ನ 6 ಕೋಟಿ ಖಾತೆದಾರರಿಗೆ ತಮ್ಮ ಖಾತೆಗೆ ಸಂಬಂಧಿಸಿದ ಮಾಹಿತಿಯ ಬಗ್ಗೆ ಜಾಗರೂಕರಾಗಿರುವಂತೆ ಸೂಚಿಸಿದೆ. ಇಲ್ಲವಾದರೆ, ದೊಡ್ಡ ನಷ್ಟವನ್ನು ಅನುಭವಿಸಬೇಕಾಗಬಹುದು ಎಂದು ಎಚ್ಚರಿಸಿದೆ. ಯಾವುದೇ ಉದ್ಯೋಗಿಗೆ, ಭವಿಷ್ಯ ನಿಧಿಯ ಮೊತ್ತವು ಅತಿದೊಡ್ಡ ಬಂಡವಾಳವಾಗಿರುತ್ತದೆ. ಅದು ಭವಿಷ್ಯದ ಅಗತ್ಯಗಳನ್ನು ಪೂರೈಸುತ್ತದೆ. ಭವಿಷ್ಯ ನಿಧಿ (PF) ನಿವೃತ್ತಿಯ ನಂತರ ಆರ್ಥಿಕ ಭದ್ರತೆಯನ್ನು ಒದಗಿಸುತ್ತದೆ.
EPFO ಎಚ್ಚರಿಕೆ :
ಇಪಿಎಫ್‌ಒ ಖಾತೆದಾರರಿಗೆ ತಮ್ಮ ಪಿಎಫ್ ಖಾತೆ ಮತ್ತು ವೈಯಕ್ತಿಕ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳದಂತೆ ಹೇಳಲಾಗಿದೆ. ಯಾವುದೇ ರೀತಿಯ ಅಪರಿಚಿತ ಆ್ಯಪ್ ಡೌನ್‌ಲೋಡ್ ಮಾಡದಂತೆಯೂ ಎಚ್ಚರಿಕೆ ನೀಡಿದೆ. ಇಪಿಎಫ್‌ಒ ಟ್ವಿಟರ್‌ನಲ್ಲಿ ಈ ಎಚ್ಚರಿಕೆಯನ್ನು ನೀಡಿದೆ. EPFO ತನ್ನ ಖಾತೆದಾರರಿಂದ ಫೋನ್ ಕರೆಗಳಲ್ಲಿ UAN ಸಂಖ್ಯೆ, ಆಧಾರ್ ಸಂಖ್ಯೆ, PAN ಮಾಹಿತಿ ಅಥವಾ ಬ್ಯಾಂಕ್ ಖಾತೆ ವಿವರಗಳನ್ನು ಎಂದಿಗೂ ಕೇಳುವುದಿಲ್ಲ ಎಂದು EPFO ಹೇಳಿದೆ. ಇಪಿಎಫ್‌ಒ ತನ್ನ ಖಾತೆದಾರರಿಗೆ ಎಂದಿಗೂ ಫೋನ್ ಕರೆ ಮಾಡುವುದಿಲ್ಲ ಎನ್ನುವುದನ್ನು ಕೂಡಾ ಸ್ಪಷ್ಟಪಡಿಸಿದೆ.
ಇದನ್ನೂ ಓದಿ : SBI ಗ್ರಾಹಕರಿಗೆ ಸಿಹಿ ಸುದ್ದಿ : Debit Card ಮೂಲಕ ಖರೀದಿ ಮಾಡಿದರೂ EMIಗೆ ಕನ್ವರ್ಟ್ ಮಾಡಬಹುದು..!
ನಕಲಿ ವೆಬ್‌ಸೈಟ್‌ಗಳ ಬಗ್ಗೆ ಎಚ್ಚರದಿಂದಿರಲು ಸೂಚನೆ :
ಚಂದಾದಾರರು ನಕಲಿ ಕರೆಗಳ ಬಗ್ಗೆ ಎಚ್ಚರದಿಂದ ಇರುವಂತೆ ಸೂಚಿಸಿದೆ. ಇಪಿಎಫ್‌ಒ ನೀಡುವ ಅಲರ್ಟ್‌ಗಳನ್ನು ಲಘುವಾಗಿ ಪರಿಗಣಿಸಿದರೆ, ದೊಡ್ಡ ವಂಚನೆ ಸಂಭವಿಸಬಹುದು. ಅವರ ಪಿಎಫ್ ಖಾತೆಯಲ್ಲಿರುವ ಮೊತ್ತವನ್ನು ಹ್ಯಾಕರ್ ಖಾಲಿ ಮಾಡಿಬಿಡಬಹುದು. ಇಪಿಎಫ್‌ಒ ತನ್ನ ಗ್ರಾಹಕರಿಗೆ ಕಾಲಕಾಲಕ್ಕೆ ಎಚ್ಚರಿಕೆಗಳನ್ನು ನೀಡುತ್ತಲೇ ಇರುತ್ತದೆ. ಇದು ತನ್ನ ಟ್ವಿಟರ್ (Twitter) ಹ್ಯಾಂಡಲ್ ಮತ್ತು SMS ಮೂಲಕ ಗ್ರಾಹಕರಿಗೆ ಎಚ್ಚರಿಕೆಯ ಸಂದೇಶಗಳನ್ನು ಕಳುಹಿಸುತ್ತಿರುತ್ತದೆ. ಇದನ್ನು ಗಂಭೀರವಾಗಿ ಪರಿಗಣಿಸಿದರೆ ಚಂದಾದಾರರು ಯಾವುದೇ ರೀತಿಯ ವಂಚನೆಯಿಂದ ಸುರಕ್ಷಿತವಾಗಿರಬಹುದು.
ಇದನ್ನೂ ಓದಿ : Arecanut: ಕರ್ನಾಟಕದ ಪ್ರಮುಖ ಮಾರ್ಕೆಟ್‌ಗಳಲ್ಲಿ ಅಡಿಕೆ ಬೆಲೆ ಎಷ್ಟಿದೆ ಗೊತ್ತಾ..?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.