ನವದೆಹಲಿ : ಟ್ವಿಟರ್ (Twitter) ಈಗ ಹೊಸ ವೈಶಿಷ್ಟ್ಯಗಳನ್ನು ಪ್ರಾರಂಭಿಸುತ್ತಿದೆ. ಟ್ವಿಟರ್ ಗೆ ಲಾಗಿನ್ ಆಗಲು ಹೊಸ ನಿಯಮವನ್ನು ತಂದಿದೆ . ಇದರ ಪ್ರಕಾರ, ಸ್ಮಾರ್ಟ್‌ಫೋನ್‌ನಲ್ಲಿ ಕನೆಕ್ಟ್ ಆಗಿರುವ Google ಖಾತೆಯೊಂದಿಗೆ ಹೊಸ ಟ್ವಿಟರ್ ಬೀಟಾ ಅಪ್ಡೇಟ್ ಗೆ ಲಾಗ್ ಇನ್ ಮಾಡಲು ಸಾಧ್ಯವಾಗುತ್ತದೆ. 9 ಟು 5 ಗೂಗಲ್ (Google) ವರದಿಯಿಂದ ಪಡೆದ ಮಾಹಿತಿಯ ಪ್ರಕಾರ, ಗೂಗಲ್ ಖಾತೆಯನ್ನು ಟ್ವಿಟರ್‌ನೊಂದಿಗೆ ಲಿಂಕ್ (Twittr link) ಮಾಡುವ ಪ್ರಕ್ರಿಯೆಗಾಗಿ ಬಹಳ ದಿನಗಳಿಂದ ನಿರೀಕ್ಷಿಸಲಾಗುತ್ತಿತ್ತು. ಆಪಲ್ ಅಕೌಂಟ್ ಸೈನ್-ಇನ್‌ನಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿದೆ. ಇದನ್ನು ಈಗ ಐಒಎಸ್‌ಗೆ ಸೇರಿಸಲಾಗಿದೆ.
ಹೊಸ ಏಕೀಕರಣವು ಬಳಕೆದಾರರಿಗೆ ಲಾಗ್ ಇನ್ ಮಾಡಲು ಅಥವಾ ಅಸ್ತಿತ್ವದಲ್ಲಿರುವ ವಿವರಗಳೊಂದಿಗೆ ಖಾತೆಯನ್ನು ತೆರೆಯಲು ಅನುಮತಿಸುತ್ತದೆ. ಹೆಸರು ಮತ್ತು ಇಮೇಲ್ (E mail) ವಿಳಾಸದಂತಹ ಮುಖ್ಯ ಮಾಹಿತಿಯನ್ನು ಭರ್ತಿ ಮಾಡಬೇಕಾಗುತ್ತದೆ. ಆದರೆ, ಇಲ್ಲಿ ಪಾಸ್‌ವರ್ಡ್ (Password) ಹಾಕುವ ಅಗತ್ಯ ಇರುವುದಿಲ್ಲ.
ಇದನ್ನೂ ಓದಿ : WhatsApp Video Call : ನಿಮ್ಮ ಮೊಬೈಲ್ ಡೇಟಾ ಬೇಗ ಕಾಲಿ ಆಗ್ತಾ ಇದೆಯಾ? ಹಾಗಿದ್ರೆ ಈ ಟ್ರಿಕ್ ಉಪಯೋಗಿಸಿ!
ಬಳಕೆದಾರರು ಈಗಾಗಲೇ ಟ್ವಿಟರ್ (Twitter) ಖಾತೆಯನ್ನು ಹೊಂದಿದ್ದು, ಗೂಗಲ್ ಅಕೌಂಟ್ ಇಮೇಲ್ ಅನ್ನು ಬಳಸುತ್ತಿದ್ದರೆ, ಪಾಸ್ವರ್ಡ್ ಇಲ್ಲದೆ ಲಾಗಿನ್ ಮಾಡಬಹುದಾಗಿದೆ. ಈ ವೈಶಿಷ್ಟ್ಯವು ಈಗ ಟ್ವಿಟರ್ ಬೀಟಾ v9.3.0-beta.04 ನಲ್ಲಿ ಲೈವ್ ಆಗಿದೆ. ಗೂಗಲ್ ಪ್ಲೇ ಸ್ಟೋರ್‌ಗೆ (Google play store) ಈಗಾಗಲೇ ಲಾಗಿನ್ ಆಗಿರುವವರಿಗೆ ಟ್ವಿಟರ್ ಬೀಟಾ ಡೌನ್‌ಲೋಡ್ ಸುಲಭವಾಗಿ ಲಭ್ಯವಿದೆ.
ಇದನ್ನೂ ಓದಿ : YouTube Super Thanks: YouTuberಗಳಿಗಾಗಿ ತೆರೆದುಕೊಂಡ ಆದಾಯದ ಹೊಸ ಮಾರ್ಗ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ