ನವದೆಹಲಿ : New Wage Code: ಕರೋನಾದ ನಂತರವೂ ಅನೇಕ ಕಂಪನಿಗಳು ತಮ್ಮ ಉದ್ಯೋಗಿಗಳ ವೇತನವನ್ನು ಹೆಚ್ಚಿಸಿವೆ. ಆದರೆ, ನಿಮ್ಮ ಟೇಕ್ ಹೋಂ ವೇತನ ಅಂದರೆ ನಿಮ್ಮ ಕೈ ಸೇರುವ ಹಣ ಹೆಚ್ಚಾಗಿದೆ ಎಂದು ಯೋಚಿಸುತ್ತಿದ್ದರೆ, ಈ ಸುದ್ದಿಯನ್ನು ಎಚ್ಚರಿಕೆಯಿಂದ ಓದಿ. ಏಕೆಂದರೆ ನಿಮ್ಮ ಸಂತೋಷವು ಒಂದೇ ಸಲಕ್ಕೆ ಕಡಿಮೆಯಾಗಲಿದೆ. ಹೊಸ ವೇತನ ಸಂಹಿತೆ (New Wage Code) ಜಾರಿಯಾದ ನಂತರ, ನಿಮ್ಮ ಟೇಕ್ ಹೋಮ್ ವೇತನ (take home salary) ಕಡಿಮೆಯಾಗುವುದಲ್ಲದೆ, ತೆರಿಗೆ ಹೊರೆ ಕೂಡಾ ಹೆಚ್ಚಾಗಲಿದೆ. 


COMMERCIAL BREAK
SCROLL TO CONTINUE READING

ಭತ್ಯೆಗಳನ್ನು ಕಡಿತಗೊಳಿಸಬೇಕಾಗುತ್ತದೆ:
ಯಾವುದೇ ಉದ್ಯೋಗಿಯ CTCಯಲ್ಲಿ  ಮೂರರಿಂದ ನಾಲ್ಕು ಘಟಕಗಳಿವೆ. ಮೂಲ ವೇತನ, ಎಚ್‌ಆರ್‌ಎ (HRA) , ರಿಟೈರನ್ ಮೆಂಟ್  ಬೆನಿಫಿಟ್ ನಂಥ ಪಿಎಫ್‌, ಗ್ರಾಚ್ಯುಟಿ ಮತ್ತು ಪಿಂಚಣಿ ಮತ್ತು ತೆರಿಗೆ ಉಳಿತಾಯ ಭತ್ಯೆಗಳು ಎಲ್‌ಟಿಎ (LTA) ಮತ್ತು ಮನರಂಜನಾ ಭತ್ಯೆ ಹೀಗೆ. ಈಗ ಹೊಸ ವೇತನ ಸಂಹಿತೆಯಲ್ಲಿ, ಯಾವುದೇ ಭತ್ಯೆಗಳು ಒಟ್ಟು ಸಂಬಳದ 50% ಮೀರಬಾರದು ಎಂದು ನಿರ್ಧರಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಉದ್ಯೋಗಿಯ ಸಂಬಳ ತಿಂಗಳಿಗೆ 50,000 ರೂ.ಯಿದ್ದರೆ, ಆತನ ಮೂಲ ವೇತನ (Basic salary) 25,000 ರೂ. ಆಗಿರಬೇಕು ಮತ್ತು ಆತನ ಭತ್ಯೆಗಳು ಉಳಿದ 25,000 ರೂ. ನಲ್ಲಿ ಬರಬೇಕು.


ಇದನ್ನೂ  ಓದಿ : Ujjwala Yojana: ಈ ದಾಖಲೆ ಇದ್ದರೆ ಸಾಕು ಉಚಿತವಾಗಿ ಪಡೆಯಬಹುದು LPG ಸಿಲಿಂಡರ್


ಅಂದರೆ, ಇಲ್ಲಿಯವರೆಗೆ ಕಂಪನಿ ಮೂಲ ವೇತನವನ್ನು 25-30 ಪ್ರತಿಶತದಲ್ಲಿ ಇರಿಸಿಕೊಳ್ಳುತ್ತಿತ್ತು. ಉಳಿದ ಭಾಗವು ಭತ್ಯೆಯಲ್ಲಿ ಬರುತ್ತಿತ್ತು. ಆದರೆ ಇನ್ನು ಮುಂದೆ ಮೂಲ ವೇತನವನ್ನು 50 ಪ್ರತಿಶತಕ್ಕಿಂತ ಕಡಿಮೆ ಇರಿಸಲು ಸಾಧ್ಯವಿಲ್ಲ. ಹೊಸ ವೇತನ ಸಂಹಿತೆಯ ನಿಯಮಗಳನ್ನು ಜಾರಿಗೆ ತರಲು ಕಂಪನಿಗಳು ಅನೇಕ ಭತ್ಯೆಗಳನ್ನು ಕಡಿತಗೊಳಿಸಬೇಕಾಗುತ್ತದೆ.


ನಿವೃತ್ತಿಗಾಗಿ ಹೆಚ್ಚಿನ ಹಣವನ್ನು ಸಂಗ್ರಹ : 
ಭವಿಷ್ಯ ನಿಧಿ ಮತ್ತು ಗ್ರಾಚ್ಯುಟಿ (gratuity) ನೇರವಾಗಿ ಉದ್ಯೋಗಿಯ ಮೂಲ ವೇತನಕ್ಕೆ ಸಂಬಂಧಿಸಿವೆ. ಮೂಲ ಸಂಬಳದ ಹೆಚ್ಚಳದೊಂದಿಗೆ, ಈ ಎರಡು ಘಟಕಗಳ ಕೊಡುಗೆ ಕೂಡ ಹೆಚ್ಚಾಗುತ್ತದೆ. ಅಂದರೆ, ನೌಕರನ ನಿವೃತ್ತಿ ನಿಧಿ ಹೆಚ್ಚಾಗುತ್ತದೆ .ಆದರೆ ಅವನ ಕೈಗೆ ಸಿಗುವ ವೇತನ  ಕಡಿಮೆಯಾಗುತ್ತದೆ, ಏಕೆಂದರೆ ಈಗ ಹೆಚ್ಚಿನ ಭಾಗವು ಪಿಎಫ್ ಮತ್ತು ಗ್ರಾಚ್ಯುಟಿಗೆ ಹೋಗಲು ಆರಂಭಿಸುತ್ತದೆ. 


ಇದನ್ನೂ  ಓದಿ : Aadhaar card update: ನಿಮ್ಮ ಆಧಾರ್ ಕಾರ್ಡ್‌ನಲ್ಲಿ ಹೊಸ ಫೋಟೋ ಅಪ್‌ಡೇಟ್ ಮಾಡುವುದು ಹೇಗೆ..?


ತೆರಿಗೆಯ ಮೇಲೆ ಪರಿಣಾಮ :
ಹೊಸ ವೇತನ ಸಂಹಿತೆ ಜಾರಿಯಾದ ನಂತರ, ನೌಕರರ ಸ್ಯಾಲರಿ ಸ್ಟ್ರಕ್ಚರ್ ಕೂಡಾ ಬದಲಾಗುತ್ತದೆ. ಇದು ವೇತನ  ಹೆಚ್ಚಿರುವ ಉದ್ಯೋಗಿಗಳ ತೆರಿಗೆ (Income tax) ಹೊರೆಯನ್ನು ಕೂಡಾ ಹೆಚ್ಚಿಸುತ್ತದೆ. ಏಕೆಂದರೆ ಅವರ ಎಲ್ಲಾ ಭತ್ಯೆಗಳನ್ನು CTC ಯ 50 ಪ್ರತಿಶತದೊಳಗೆ ಸೇರಿಸಬೇಕಾಗುತ್ತದೆ. ಕಡಿಮೆ ಆದಾಯ ಹೊಂದಿರುವವರು ಕಡಿಮೆ ತೆರಿಗೆ ಪಾವತಿಸಬೇಕಾಗುತ್ತದೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.