New Wage Code: ಖಾಸಗಿ ಕಂಪನಿ ಉದ್ಯೋಗಿಗಳಿಗೆ ಇಲ್ಲಿದೆ ಸಿಹಿಸುದ್ದಿ!

ಹೊಸ ವೇತನ ಸಂಹಿತೆ ಅಕ್ಟೋಬರ್ ನಲ್ಲಿ ಜಾರಿಯಾಗುವ ಸಾಧ್ಯತೆ ಇದೆ.

Written by - Zee Kannada News Desk | Last Updated : Jul 20, 2021, 04:54 PM IST
  • ಹೊಸ ವೇತನ ಸಂಹಿತೆ ಜಾರಿಗೆ ಬಂದ ಕೂಡಲೇ ಅಸ್ತಿತ್ವದಲ್ಲಿರುವ ವ್ಯವಸ್ಥೆ ಸಂಪೂರ್ಣ ಬದಲಾಗಲಿದೆ.
  • ನೌಕರರ ಕನಿಷ್ಠ ಮೂಲ ವೇತನವನ್ನು 15 ರಿಂದ 21 ಸಾವಿರ ರೂ.ಗೆ ಹೆಚ್ಚಿಸಬೇಕೆಂದು ಕಾರ್ಮಿಕ ಸಂಘಗಳ ಒತ್ತಾಯ
  • ಈ ನಿಯಮ ಜಾರಿಯಾದಲ್ಲಿ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವ ನೌಕರರ ವೇತನ ಹೆಚ್ಚಾಗುತ್ತದೆ
New Wage Code: ಖಾಸಗಿ ಕಂಪನಿ ಉದ್ಯೋಗಿಗಳಿಗೆ ಇಲ್ಲಿದೆ ಸಿಹಿಸುದ್ದಿ! title=
ಖಾಸಗಿ ನೌಕರರಿಗೆ ಮಹತ್ವದ ಮಾಹಿತಿ

ನವದೆಹಲಿ: ನೂತನ ವೇತನ ಪದ್ಧತಿ ವಿಚಾರವಾಗಿ ಖಾಸಗಿ ಕಂಪನಿ ಉದ್ಯೋಗಿಗಳಿಗೆ ಸಿಹಿಸುದ್ದಿಯೊಂದು ಸಿಕ್ಕಿದೆ. ಸ್ಯಾಲರಿ ವಿಚಾರವಾಗಿ ತಲೆಕೆಡಿಸಿಕೊಂಡಿದ್ದ ಅನೇಕರಿಗೆ ಇದರಿಂದ ಸ್ವಲ್ಪ ರಿಲೀಫ್ ಸಿಗಬಹುದು. ಹೊಸ ವೇತನ ಸಂಹಿತೆಯ ಅನುಷ್ಠಾನದ ಬಳಿಕ ಸಂಬಳ ಪಡೆಯುವ ನೌಕರರಿಗೆ ಹಲವು ಪ್ರಮುಖ ಬದಲಾವಣೆಗಳಾಗಲಿದ್ದು, ಅವರ ವೇತನದ ಮೇಲೆ ಹೆಚ್ಚಿನ ಪರಿಣಾಮ ಉಂಟಾಗುತ್ತದೆ. ನೌಕರರ ಟೇಕ್-ಹೋಮ್ ಸ್ಯಾಲರಿ ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ ಈ ಪದ್ಧತಿಯಲ್ಲಿ ಕೆಲ ಬದಲಾವಣೆಯಾದರೆ ನೌಕರರ ಮೂಲ ಕನಿಷ್ಠ ವೇತನ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Mera Pani Meri Virasat Yojana : ಈ ಯೋಜನೆಯ ಮೂಲಕ ರೈತರಿಗೆ ಸಿಗಲಿದೆ ₹ 7000 : ಜು. 31 ರೊಳಗೆ ನೋಂದಣಿ ಮಾಡಿಕೊಳ್ಳಿ!

 ಹೊಸ ವೇತನ ಸಂಹಿತೆ(New Wage Code)ಯ ನಿಯಮಗಳ ಪ್ರಕಾರ ನೌಕರರ ಮೂಲ ವೇತನವು ಒಟ್ಟು ಸಂಬಳದ ಶೇ.50ರಷ್ಟು ಅಥವಾ ಕಂಪನಿಯ ವೆಚ್ಚ (ಸಿಟಿಸಿ)ವಾಗಿರಬೇಕು ಮತ್ತು ಇದಕ್ಕಿಂತ ಕಡಿಮೆ ಇರಬಾರದು. ಸದ್ಯ ಹೆಚ್ಚಿನ ಕಂಪನಿಗಳು ನೌಕರರ ಮೂಲ ವೇತನವನ್ನು ಕಡಿಮೆ ಇಡುತ್ತವೆ ಮತ್ತು ಭತ್ಯೆಗಳ ಸಂಖ್ಯೆ ಹೆಚ್ಚು ಮಾಡಿರುತ್ತವೆ.  ಆದರೆ ಹೊಸ ವೇತನ ಸಂಹಿತೆ ಜಾರಿಗೆ ಬಂದ ಕೂಡಲೇ ಅಸ್ತಿತ್ವದಲ್ಲಿರುವ ಈ ವ್ಯವಸ್ಥೆಯು ಸಂಪೂರ್ಣವಾಗಿ ಬದಲಾಗಲಿದೆ. ಕಂಪನಿಗಳು ನೌಕರರ ಸಿಟಿಸಿಯ ಮೂಲ ವೇತನದ ಶೇ.50ರಷ್ಟು ಅಥವಾ ಹೆಚ್ಚಿನದನ್ನು ಉಳಿಸಿಕೊಳ್ಳಬೇಕಾಗುತ್ತದೆ. ಇನ್ನುಳಿದ ಶೇ.50ರಷ್ಟಲ್ಲಿ ನೌಕರರು ಪಡೆಯುವ ಎಲ್ಲಾ ಭತ್ಯೆಗಳನ್ನು ಸೇರಿಸಿ ನೀಡಬೇಕಾಗುತ್ತದೆ.

ಇದನ್ನೂ ಓದಿ: ಈ ಬ್ಯಾಂಕ್ ನಲ್ಲಿ ಖಾತೆ ತೆರೆದರೆ ಉಚಿತವಾಗಿ ಸಿಗಲಿದೆ ಒಂದು ಕೋಟಿಯ ವಿಮೆ

ಇಂತಹ ಸಂದರ್ಭದಲ್ಲಿ ಪಿಎಫ್ ಮತ್ತು ಗ್ರಾಚ್ಯುಟಿಯಲ್ಲಿ ಉದ್ಯೋಗಿಗಳ ಕೊಡುಗೆ ಹೆಚ್ಚಾಗುತ್ತದೆ. ಆದರೆ ಟೇಕ್-ಹೋಮ್ ಸಂಬಳ(TakeHome Salary) ಕಡಿಮೆಯಾಗುತ್ತದೆ. ಹೊಸ ನಿಯಮಗಳ ಪ್ರಕಾರ ನೌಕರರ ಕನಿಷ್ಠ ಮೂಲ ವೇತನವನ್ನು 15 ಸಾವಿರ ರೂ.ಗಳಿಂದ 21 ಸಾವಿರ ರೂ.ಗೆ ಹೆಚ್ಚಿಸಬೇಕೆಂದು ಕಾರ್ಮಿಕ ಸಂಘಗಳು ಒತ್ತಾಯಿಸುತ್ತಿದ್ದವು. ಇದು ಜಾರಿಯಾದಲ್ಲಿ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವ ಸಂಬಳದ ವರ್ಗದ ವೇತನ ಹೆಚ್ಚಾಗುತ್ತದೆ. ಈಗಿರುವ ನಿಯಮಗಳ ಪ್ರಕಾರ ತಿಂಗಳಿಗೆ 15 ಸಾವಿರ ರೂ.ಗಿಂತ ಹೆಚ್ಚು ಆದಾಯ ಗಳಿಸುವ ನೌಕರರಿಗೆ ಪಿಎಫ್(PF) ಕಡ್ಡಾಯವಲ್ಲ. ವೇತನವು 15 ಸಾವಿರ ರೂ.ಗಿಂತ ಹೆಚ್ಚಿದ್ದರೆ ನಿಜವಾದ ವೇತನದಲ್ಲಿ ಪಿಎಫ್‌ನ ಕೊಡುಗೆ ಉದ್ಯೋಗದಾತ ಮತ್ತು ಉದ್ಯೋಗಿಯ ಕಡೆಯಿಂದ ಸ್ವಯಂಪ್ರೇರಿತವಾಗಿರುತ್ತದೆ. ಇದರರ್ಥ ಉದ್ಯೋಗಿ ಬಯಸಿದರೆ ಕೊಡುಗೆ ನೀಡಬಹುದು ಅಥವಾ ನೀಡದೆಯೂ ಇರಬಹುದು.

ಹೊಸ ವೇತನ ಸಂಹಿತೆಯನ್ನು ಈ ವರ್ಷ ಏಪ್ರಿಲ್ 1 ರಿಂದ ಜಾರಿಗೆ ತರಲು ನಿರ್ಧರಿಸಲಾಗಿತ್ತು. ಆದರೆ ಕೆಲ ರಾಜ್ಯಗಳು ಇದನ್ನು ಜಾರಿಗೆ ತರಲು ಇನ್ನೂ ಸಿದ್ಧವಾಗಿಲ್ಲದ ಕಾರಣ ಮುಂದೂಡಲಾಗಿದೆ. ಆದರೆ ಅಕ್ಟೋಬರ್‌ನಲ್ಲಿ ಇದನ್ನು ಜಾರಿಗೆ ತರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಹೊಸ ವೇತನ ಸಂಹಿತೆ ಜಾರಿಗೆ ಬಂದರೆ ನೌಕರರ ವೇತನ ಪದ್ಧತಿಯಲ್ಲಿ ದೊಡ್ಡ ಬದಲಾವಣೆ ಕಂಡುಬರಲಿದೆ. ಆಗಸ್ಟ್ 2019 ರಂದು ಸಂಸತ್ತು 3 ಕಾರ್ಮಿಕ ಮಸೂದೆಗೆ ಸಂಬಂಧಿಸಿದ ನಿಯಮಗಳನ್ನು ಬದಲಾಯಿಸಿತ್ತು. ಕೈಗಾರಿಕಾ ವಲಯದ ದುಡಿಮೆ, ಕೆಲಸದ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿ ಹಾಗೂ ಸಾಮಾಜಿಕ ಭದ್ರತೆ(Social Security)ಗೆ ಸಂಬಂಧಿಸಿದ ನಿಯಮಗಳಲ್ಲಿ ಬದಲಾವಣೆ ಮಾಡಲಾಗಿತ್ತು. ಈ ನಿಯಮಗಳನ್ನು ಸೆಪ್ಟೆಂಬರ್ 2020 ರಲ್ಲಿ ಅಂಗೀಕರಿಸಲಾಯಿತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News