ನವದೆಹಲಿ: ದೇಶದ ಅತಿದೊಡ್ಡ ಆನ್‌ಲೈನ್ ಆಹಾರ ವಿತರಣಾ ಸಂಸ್ಥೆ(Food Delivery App)ಯಾಗಿರುವ ಜೊಮ್ಯಾಟೋ ಶುಕ್ರವಾರ ಅಧಿಕೃತವಾಗಿ ಷೇರುಮಾರುಕಟ್ಟೆ ಪ್ರವೇಶಿಸಿದೆ. ಎನ್‌ಎಸ್‌ಇ, ಬಿಎಸ್‌ಇಯಲ್ಲಿ ಬಂಪರ್ ಲಿಸ್ಟಿಂಗ್ ಆಗುವ ಮೂಲಕ ಆರಂಭಿಕ ಷೇರು ಕೊಡುಗೆ(IPO)ಯಲ್ಲಿ ಹೂಡಿಕೆ ಮಾಡಿದ್ದ ಹೂಡಿಕೆದಾರರಿಗೆ ಬಂಪರ್ ಲಾಭ ತಂದುಕೊಟ್ಟಿದೆ.


COMMERCIAL BREAK
SCROLL TO CONTINUE READING

ಭಾರೀ ನಿರೀಕ್ಷೆ ಹುಟ್ಟುಹಾಕಿದ್ದ ಜೊಮ್ಯಾಟೋ ಐಪಿಓ(Initial public offering) ಜುಲೈ 14ರಿಂದ ಆರಂಭಗೊಂಡಿತ್ತು. ಷೇರು ಮಾರುಕಟ್ಟೆ(Share Market) ತಜ್ಞರು ಜೊಮ್ಯಾಟೋ ಐಪಿಒಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದರು. ಆದರೆ ಹೂಡಿಕೆದಾರರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಜೊಮ್ಯಾಟೋ ಷೇರುಗಳು ಐಪಿಒ ಇಶ್ಯೂ ಪ್ರೈಸ್ ಗಿಂತಲೂ ಶೇ.53ರಷ್ಟು ಹೆಚ್ಚಿನ ಬೆಲೆಗೆ ಲಿಸ್ಟ್ ಆಗಿದ್ದು, ಹೂಡಿಕೆದಾರರಿಗೆ ಬಂಪರ್ ಲಾಭ ತಂದುಕೊಟ್ಟಿದೆ.


ಇದನ್ನೂ ಓದಿ: PM Kisan: 27 ಲಕ್ಷ ರೈತರ ಪಾವತಿ ವಿಫಲ, ನೀವೂ ಈ ತಪ್ಪು ಮಾಡುತ್ತಿದ್ದೀರಾ? ತಕ್ಷಣ ಪರಿಶೀಲಿಸಿ


ಜೊಮ್ಯಾಟೋ ಷೇರುಗಳು ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ(NSE)ದಲ್ಲಿ ಪ್ರತಿ ಷೇರಿಗೆ 116 ರೂ.ಗಳಂತೆ ಲಿಸ್ಟ್ ಆದರೆ, ಬಾಂಬೆ ಷೇರು ವಿನಿಮಯ ಕೇಂದ್ರ(BSE)ದಲ್ಲಿ115 ರೂ.ಗೆ ಲಿಸ್ಟ್ ಆಗಿದೆ. ಇದರ ಐಪಿಒ ಮೂಲ ಬೆಲೆ 72-76 ರೂ. ಆಗಿತ್ತು. ಬರೋಬ್ಬರಿ ಶೇ.51ರಷ್ಟು ಹೆಚ್ಚಿನ ಬೆಲೆಗೆ ಜೊಮ್ಯಾಟೋ ಷೇರುಗಳು ಲಿಸ್ಟ್ ಆಗಿವೆ. ಷೇರುಪೇಟೆಯಲ್ಲಿ ಲಿಸ್ಟ್ ಆದ ಬಳಿಕ ಜೊಮ್ಯಾಟೋ ಮಾರುಕಟ್ಟೆ ಮೌಲ್ಯವು ಏರಿಕೆಯಾಗಿದ್ದು, ಎನ್‌ಎಸ್‌ಇಯಲ್ಲಿ 1 ಲಕ್ಷ ಕೋಟಿ ರೂ. ದಾಟಿದೆ. ಮಿಡ್ ಕ್ಯಾಪ್ ಕಂಪನಿಯಾಗಿರುವ ಜೊಮ್ಯಾಟೋದ ಮಾರುಕಟ್ಟೆ ಮೌಲ್ಯ 1,08,067 ತಲುಪಿದ್ದು, ಅತ್ಯಂತ ಸ್ಟ್ರಾಂಗ್ ಆಗಿ ಷೇರು ಮಾರುಕಟ್ಟೆಗೆ ಪಾದಾರ್ಪಣೆ ಮಾಡಿದೆ.  


ಇದನ್ನೂ ಓದಿ: Flipkart Big Saving Days 2021 Sale ನಲ್ಲಿ ₹7 ಸಾವಿರಗೆ ಅಗ್ಗವಾಗಲಿದೆ ಮೊಬೈಲ್ : iPhone ಮೇಲೆ  ಭಾರೀ  Discount


9,375 ಕೋಟಿ ರೂ. ಸಂಗ್ರಹಿಸುವ ಗುರಿಯೊಂದಿಗೆ ಜೊಮ್ಯಾಟೋ(Zomato) ಸಾರ್ವಜನಿಕ ಆರಂಭಿಕ ಕೊಡುಗೆ(IPO) ಘೋಷಿಸಿತ್ತು. ಜುಲೈ 14 ರಿಂದ 16ರವರೆಗೆ ಹೂಡಿಕೆದಾರರ ಚಂದಾದಾರಿಕೆ ಪ್ರಾರಂಭವಾಗಿತ್ತು. ಹೂಡಿಕೆದಾರರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದ ಈ ಐಪಿಒ 38 ಬಾರಿ ಹೆಚ್ಚು ಸಬ್ ಸ್ಕ್ರೈಬ್ ಆಗಿತ್ತು. ಕಳೆದ 13 ವರ್ಷಗಳಲ್ಲಿ 5 ಸಾವಿರ ಕೋಟಿ ಮೌಲ್ಯದ ಐಪಿಒ, ಷೇರು ಮಾರುಕಟ್ಟೆಗೆ ಪ್ರವೇಶಿಸಿದಂತಾಗಿದೆ. ಜೊಮ್ಯಾಟೋ ಐಪಿಒ ಗಾತ್ರವು 71.92 ಕೋಟಿ ಇಕ್ವಿಟಿ ಷೇರುಗಳು ಆಗಿತ್ತು. ಆದರೆ 2,752.25 ಕೋಟಿಯಷ್ಟು ಷೇರುಗಳಿಗೆ ಬೇಡಿಕೆ ಬಂದಿತ್ತು.


ಸಾಂಸ್ಥಿಕ ಹೂಡಿಕೆದಾರರಿಂದಲೂ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದ್ದ ಜೊಮ್ಯಾಟೋ ಐಪಿಒ(Zomato IPO) ಜುಲೈ 13ರಂದು 4,197 ಕೋಟಿ ರೂ.ನಷ್ಟು ಹಣವನ್ನು ಸಂಗ್ರಹಿಸಿತ್ತು. ಸದ್ಯ ಷೇರು ಮಾರುಕಟ್ಟೆ ಪಾಸಿಟಿವ್ ಆಗಿರುವುದರಿಂದ ಜೊಮ್ಯಾಟೋ ಐಪಿಒ ಷೇರುಗಳು ಬಂಪರ್ ಲಿಸ್ಟಿಂಗ್ ಆಗಲಿವೆ ಎಂದು ಹೂಡಿಕೆ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅದರಂತೆ ಹೂಡಿಕೆದಾರರಿಗೆ ಜೊಮ್ಯಾಟೋ ಭರ್ಜರಿ ಲಾಭ ಮಾಡಿಕೊಟ್ಟಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ