Zomato App ನಲ್ಲಿ ಈ ವಸ್ತುವನ್ನು ಹುಡುಕಿದರೆ ಲಕ್ಷಾಧಿಪತಿಯಾಗುವ ಅವಕಾಶ..!

Zomato  ಗುರುವಾರ ತನ್ನ ಬಗ್ ಬೌಂಟಿ  ಕಾರ್ಯಕ್ರಮಕ್ಕಾಗಿ ನೀಡುವ ರಿವಾರ್ಡ್ ಅನ್ನು ಹೆಚ್ಚಿಸಿದೆ. ವೆಬ್‌ಸೈಟ್ ಅಥವಾ ಅದರ ಮೊಬೈಲ್ ಅಪ್ಲಿಕೇಶನ್‌ನಲ್ಲಿ  ಯಾರೇ ದೋಷವನ್ನು ಕಂಡುಹಿಡಿದರೂ, ಅವರಿಗೆ 4 ಸಾವಿರ ಡಾಲರ್ ಅಂದರೆ 2.99 ಲಕ್ಷ ರೂ. ಬಹುಮಾನ ನೀಡಲಾಗುವುದು ಎಂದು ಜೊಮಾಟೊ ಹೇಳಿದೆ. 

Written by - Ranjitha R K | Last Updated : Jul 9, 2021, 04:47 PM IST
  • Zomato ಬಗ್ ಬೌಂಟಿ ಕಾರ್ಯಕ್ರಮಕ್ಕಾಗಿ ಹೆಚ್ಚಿದ ರಿವಾರ್ಡ್
  • ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ದೋಷಗಳನ್ನು ಕಂಡುಕೊಂಡವರಿಗೆ 4 ಸಾವಿರ ಡಾಲರ್
  • ದೋಷಗಳನ್ನು ಕಂಡುಹುಡುಕಿದವರಿಗೆ ಸಿಗಲಿದೆ ಹೆಚ್ಚಿನ ಹಣ
Zomato App ನಲ್ಲಿ ಈ ವಸ್ತುವನ್ನು ಹುಡುಕಿದರೆ ಲಕ್ಷಾಧಿಪತಿಯಾಗುವ ಅವಕಾಶ..!  title=
Zomato ಬಗ್ ಬೌಂಟಿ ಕಾರ್ಯಕ್ರಮಕ್ಕಾಗಿ ಹೆಚ್ಚಿದ ರಿವಾರ್ಡ್ (photo zeenews)

ನವದೆಹಲಿ :  Zomato  ಗುರುವಾರ ತನ್ನ ಬಗ್ ಬೌಂಟಿ ಕಾರ್ಯಕ್ರಮಕ್ಕಾಗಿ ನೀಡುವ ರಿವಾರ್ಡ್ ಅನ್ನು ಹೆಚ್ಚಿಸಿದೆ. ವೆಬ್‌ಸೈಟ್ ಅಥವಾ ಅದರ ಮೊಬೈಲ್ ಅಪ್ಲಿಕೇಶನ್‌ನಲ್ಲಿ (Mobiel app) ಯಾರೇ ದೋಷವನ್ನು ಕಂಡುಹಿಡಿದರೂ, ಅವರಿಗೆ 4 ಸಾವಿರ ಡಾಲರ್ ಅಂದರೆ 2.99 ಲಕ್ಷ ರೂ. ಬಹುಮಾನ ನೀಡಲಾಗುವುದು ಎಂದು ಜೊಮಾಟೊ ಹೇಳಿದೆ. "ಜೊಮಾಟೊ ಬಗ್ ಬೌಂಟಿ 
( Zomato Bug Bounty) ಕಾರ್ಯಕ್ರಮ ನಮ್ಮ ಭದ್ರತಾ ಪ್ರಯತ್ನಗಳ ಒಂದು ಪ್ರಮುಖ ಭಾಗವಾಗಿದೆ ಎಂದು ಅದು ಹೇಳಿದೆ. ಇಲ್ಲಿಯವರೆಗೆ ಕಂಪನಿಯ ಕಾರ್ಯಕ್ರಮಕ್ಕೆ ನೀಡಿದ ಯೋಗದನ್ಕ್ಕಾಗಿ ಒಮ್ಪಂಯ್ ಎಲ್ಲರಿಗು ಧನ್ಯವಾದ ಹೇಳಿದೆ. 

ಈ ರೀತಿ ಬಹುಮಾನ ನೀಡಲಾಗುವುದು :
 Zomato ಟ್ವೀಟ್ ಮಾಡುವ ಮೂಲಕ ಈ ಮಾಹಿತಿಯನ್ನು ನೀಡಿದೆ. CVV (Common Vulnerability Scoring System) ದೋಷದಿಂದಾಗಿ ಕಂಪನಿಗೆ ಎಷ್ಟು ನಷ್ಟ ಸಂಭವಿಸಬಹುದು ಎಂಬುದರ ತನಿಖೆ ನಡೆಸಲಾಗುವುದು.  ಅದರ ಆಧಾರದ ಮೇಲೆ ರಿವಾರ್ಡ್ ಗಳನ್ನೂ ನೀಡಲಾಗುವುದು ಎಂದು ಕಂಪನಿ ಹೇಳಿದೆ.  "ಉದಾಹರಣೆಗೆ, ಸಿವಿಎಸ್ಎಸ್ 10.0 ಆಗಿದ್ದರೆ,  4,000 ಡಾಲರ್ ನೀಡಲಾಗುವುದು, ಸಿವಿಎಸ್ಎಸ್ 9.5 ಆಗಿದ್ದರೆ 3,000 ಡಾಲರ್ ನೀಡಲಾಗುವುದು ಎಂದು ಜೊಮಾಟೊ ಹೇಳಿಕೆಯಲ್ಲಿ ತಿಳಿಸಿದೆ. 

ಇದನ್ನೂ ಓದಿ : 7th Pay Commission: ಸರ್ಕಾರಿ ನೌಕರರಿಗೆ ಮೋದಿ ಸರ್ಕಾರದಿಂದ ಮತ್ತೊಂದು ಉಡುಗೊರೆ, LTC Claim ಕುರಿತು ಮಹತ್ವದ ನಿರ್ಧಾರ

 Zomato  ಬಗ್ ಬೌಂಟಿ ಪ್ರೋಗ್ರಾಂನಲ್ಲಿ  (Zomato Bug Bounty) ಭಾಗವಹಿಸಲು ಟೂ ಫ್ಯಾಕ್ಟರ್ ಆಥೆನ್ಟಿಕೇಶನ್ ನ ಅಗತ್ಯವಿದೆ. ವೆಬ್‌ಸೈಟ್ ಅಥವಾ ಅದರ ಮೊಬೈಲ್ ಅಪ್ಲಿಕೇಶನ್‌ನಲ್ಲಿನ  ದೋಷಗಳನ್ನ ಕಷ್ಟಪಟ್ಟು ಹುಡುಕುವ ಕೆಲಸಕ್ಕಾಗಿ, ಫುಡ್ ಆರ್ಡರಿಂಗ್ ಪ್ಲಾಟ್ ಫಾರ್ಮ್ (food ordering platform) ಅಧಿಕ  ಹಣವನ್ನು ನೀಡಲು ಸಿದ್ಧರಿರುವುದಾಗಿ, ಭರವಸೆ ನೀಡಿದೆ. ಇದಲ್ಲದೆ, ಕಡಿಮೆ ಅಪಾಯದ ದೋಷಗಳನ್ನು ಕಂಡುಹಿಡಿಯುವವರಿಗೂ ಜೆಮೊಟೊ ಹಣವನ್ನು ಪಾವತಿಸಲಿದೆ.

ಇದನ್ನೂ ಓದಿ : Gold-Silver Price : ಚಿನ್ನವು 8500 ರೂ.ಗಳವರೆಗೆ ಅಗ್ಗ! ಬೆಳ್ಳಿ ಎರಡು ದಿನಗಳಲ್ಲಿ ₹700 ಇಳಿಕೆ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News