Gold Silver Price Update 14 March 2023: ಚಿನ್ನ ಖರೀದಿಸುವವರ ಪಾಲಿಗೆ ಒಂದು ಒಳ್ಳೆಯ ಸುದ್ದಿ ಪ್ರಕಟವಾಗಿದೆ.  ನೀವು ಕೂಡ ಚಿನ್ನವನ್ನು ಖರೀದಿಸಲು ಯೋಜಿಸುತ್ತಿದ್ದರೆ ಈ ಸುದ್ದಿ ಕೇವಲ ನಿಮಗಾಗಿ, ಇಂದು ಚಿನ್ನಾಭರಣಗಳ ಬೆಳೆಯಲ್ಲಿ ಭಾರಿ ಇಳಿಕೆಯಾಗಿದೆ. ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ ಚಿನ್ನದ ಬೆಲೆಯಲ್ಲಿ (ಎಂಸಿಎಕ್ಸ್ ಚಿನ್ನದ ಬೆಲೆ) ಇಳಿಕೆಯಾಗಿದೆ. ಇದೇ ವೇಳೆ, ಬೆಳ್ಳಿ ಕೆಜಿಗೆ 66700 ರೂ.ಗಳಂತೆ ಮಾರಾಟವಾಗುತ್ತಿದೆ. ಇಂದು 10 ಗ್ರಾಂ ಚಿನ್ನದ ಬೆಲೆ ಎಷ್ಟು ಎಂಬುದನ್ನೂ ಪರಿಶೀಲಿಸೋಣ ಬನ್ನಿ,


COMMERCIAL BREAK
SCROLL TO CONTINUE READING

MCX ನಲ್ಲಿ ಚಿನ್ನದ ಬೆಲೆ ಇಳಿಕೆ
ಇಂದು ಬಹು ಸರಕು ವಿನಿಮಯ ಕೇಂದ್ರದಲ್ಲಿ ಚಿನ್ನದ ಬೆಲೆ ಶೇ.0.12ರಷ್ಟು ಅಂದರೆ ಸುಮಾರು ರೂ.200ರಷ್ಟು ಇಳಿಕೆಯಾಗಿದೆ. ಈ ಕುಸಿತದ ನಂತರ, ಚಿನ್ನದ ಬೆಲೆ 10 ಗ್ರಾಂಗೆ 57,574 ರೂ.ಗೆ ತಲುಪಿದೆ. ಈ ಮೊದಲು ಚಿನ್ನ ಬೆಲೆ 54,800 ರ ಸಮೀಪಕ್ಕೆ ಹೋಗಿತ್ತು ಎಂಬುದು ಇಲ್ಲಿ ಗಮನಾರ್ಹ. ಇದು ಕಳೆದ ವಾರದ ವರ್ಷದ ಕನಿಷ್ಠ ಮಟ್ಟವಾಗಿದೆ, ಆದರೆ ಅದರ ನಂತರ ಅದರಲ್ಲಿ ಚೇತರಿಕೆ ಕಂಡುಬಂದಿದೆ.


ಇಂದು ಬೆಳ್ಳಿಯಲ್ಲಿ ಕೊಂಚ ಏರಿಕೆಯಾಗಿದೆ
ಇದಲ್ಲದೇ ಇಂದು ಬೆಳ್ಳಿ ಬೆಲೆಯಲ್ಲಿ ಏರಿಕೆಯಾಗಿದೆ. ಬೆಳ್ಳಿಯು ಪ್ರತಿ ಕೆಜಿಗೆ 66763 ರೂ.ಗೆ ತಲುಪಿದ್ದು, ಶೇ.0.17 ರಷ್ಟು ಅಲ್ಪ ಏರಿಕೆಯಾಗಿದೆ. ನಿನ್ನೆ ಬೆಳ್ಳಿ ಬೆಲೆ 66,652 ರೂ.ಗಳಷ್ಟಿತ್ತು.


ಜಾಗತಿಕ ಮಾರುಕಟ್ಟೆಯಲ್ಲಿ ಪರಿಸ್ಥಿತಿ ಹೇಗಿದೆ?
ಜಾಗತಿಕ ಮಾರುಕಟ್ಟೆಯಲ್ಲಿ ಇಂದು ಅಮೆರಿಕದಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ. US ನಲ್ಲಿ ಚಿನ್ನದ ಬೆಲೆ ಶೇ.0.43 ಇಳಿಕೆಯಾಗಿ  $ 1,908.20 ಪ್ರತಿ ಔನ್ಸ್ ತಲುಪಿದೆ. ಇದೇ ವೇಳೆ ಬೆಳ್ಳಿಯು ಶೇ.0.63 ಇಳಿಕೆಯೊಂದಿಗೆ, ಪ್ರತಿ ಔನ್ಸ್ $ 21.785 ತಲುಪಿದೆ.


ಇದನ್ನೂ ಓದಿ-Big Update: ದೇಶಾದ್ಯಂತ ಪಡಿತರ ವಿತರಣೆಗೆ ಹೊಸ ನಿಯಮ ಜಾರಿ! ನೀವೂ ತಿಳಿದುಕೊಳ್ಳಿ...


ಚಿನ್ನ ಖರೀದಿಸುವ ಮುನ್ನ ಗಮನವಿರಲಿ
ನೀವು ಕೂಡ ಮಾರುಕಟ್ಟೆಯಲ್ಲಿ ಚಿನ್ನವನ್ನು ಖರೀದಿಸಲು ಹೊರಟಿದ್ದರೆ, ಹಾಲ್‌ಮಾರ್ಕ್ ನೋಡಿದ ನಂತರವೇ ಚಿನ್ನವನ್ನು ಖರೀದಿಸಿ. ಚಿನ್ನದ ಶುದ್ಧತೆಯನ್ನು ಪರಿಶೀಲಿಸಲು ನೀವು ಸರ್ಕಾರಿ ಅಪ್ಲಿಕೇಶನ್ ಬಳಸಬಹುದು. 'ಬಿಐಎಸ್ ಕೇರ್ ಆ್ಯಪ್' ಮೂಲಕ ನೀವು ಚಿನ್ನದ ಶುದ್ಧತೆ ನೈಜವೆ ಅಥವಾ ನಕಲಿಯೇ ಎಂಬುದನ್ನು ಪರಿಶೀಲಿಸಬಹುದು. ಇದಲ್ಲದೇ ಈ ಆಪ್ ಮೂಲಕವೂ ದೂರು ನೀಡಬಹುದು.


ಇದನ್ನೂ ಓದಿ-Ration Card Update: ಕೋಟ್ಯಾಂತರ ಪಡಿತರ ಚೀಟಿದಾರರಿಗೊಂದು ಬಂಬಾಟ್ ಸುದ್ದಿ! ಮಿಸ್ ಮಾಡದೆ ಓದಿ...


ನಿಮ್ಮ ನಗರದ ದರವನ್ನು ಈ ಪರಿಶೀಲಿಸಿ
ನಿಮ್ಮ ಮನೆಯಲ್ಲಿ ಕುಳಿತು ಕೂಡ ನೀವು ಚಿನ್ನದ ಬೆಲೆಯನ್ನು ಪರಿಶೀಲಿಸಬಹುದು. ಇಂಡಿಯನ್ ಬುಲಿಯನ್ ಮತ್ತು ಜ್ಯುವೆಲರ್ಸ್ ಅಸೋಸಿಯೇಷನ್ ​​ಪ್ರಕಾರ, ನೀವು 8955664433 ಗೆ ಮಿಸ್ಡ್ ಕಾಲ್ ನೀಡುವ ಮೂಲಕ ಬೆಲೆಯನ್ನು ಪರಿಶೀಲಿಸಬಹುದು. ನೀವು ಯಾವ ಸಂಖ್ಯೆಯಿಂದ ಸಂದೇಶವನ್ನು ಕಳುಹಿಸುತ್ತೀರೋ ಅದೇ ಸಂಖ್ಯೆಗೆ ನಿಮ್ಮ ಸಂದೇಶವು ಬರುತ್ತದೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.