ನವದೆಹಲಿ: ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (Airports Authority of India)ದಲ್ಲಿ ಖಾಲಿ ಇರುವ ಒಟ್ಟು 400 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಜ್ಯೂನಿಯರ್​ ಎಕ್ಸಿಕ್ಯೂಟಿವ್​ ಹುದ್ದೆ(Air traffic control)ಗಳ ಭರ್ತಿಗೆ ಕೇಂದ್ರ ಸರ್ಕಾರ ಮುಂದಾಗಿದ್ದು, ಪದವೀಧರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.


COMMERCIAL BREAK
SCROLL TO CONTINUE READING

ಜೂನ್ 15ರಂದು ಅರ್ಜಿ ಅಪ್ಲಿಕೇಶನ್ ವಿಂಡೋ ತೆರೆಯಲಿದ್ದು, ಜುಲೈ 14 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿರುತ್ತದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಆನ್​ಲೈನ್ ಹೊರತುಪಡಿಸಿ ಇನ್ನುಳಿದ ಯಾವುದೇ ವಿಧಾನದ ಮೂಲಕ ಬಂದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ. ಅರ್ಜಿಗಾಗಿ AAIನ ಅಧಿಕೃತ ವೆಬ್‍ಸೈಟ್ www.aai.aeroಗೆ ಭೇಟಿ ನೀಡಬೇಕು. ಹುದ್ದೆ ಕುರಿತ ಅಧಿಸೂಚನೆ, ಆಯ್ಕೆ ಪ್ರಕ್ರಿಯೆ, ಅರ್ಜಿ ಸಲ್ಲಿಕೆ ಮುಂತಾದ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.


ಇದನ್ನೂ ಓದಿ: SSC Recruitment 2022 : SSC ಯಲ್ಲಿ 797 ಹುದ್ದೆಗಳಿಗೆ ಅರ್ಜಿ ಅಹ್ವಾನ : ಜೂನ್ 13 ಕೊನೆ ದಿನ!


ಹುದ್ದೆಗಳ ವಿವರ ಇಂತಿದೆ:


ಸಂಸ್ಥೆ:- ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (AAI)


ಹುದ್ದೆ:- ಜೂನಿಯರ್ ಎಕ್ಸಿಕ್ಯೂಟಿವ್


ಹುದ್ದೆಗಳ ಸಂಖ್ಯೆ:-   400


ಉದ್ಯೋಗ ಸ್ಥಳ:- ಭಾರತದಾದ್ಯಂತ


ವೇತನ:- 40,000-1,40,000 ರೂ.(ಪ್ರತಿ ತಿಂಗಳಿಗೆ)  


ವಿದ್ಯಾರ್ಹತೆ: ಅರ್ಹ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಭೌತಶಾಸ್ತ್ರ ಮತ್ತು ಗಣಿತದಲ್ಲಿ ಬಿಎಸ್ಸಿ, ಬಿಇ ಅಥವಾ ಬಿಟೆಕ್​ ಪದವಿ ಪೂರ್ಣಗೊಳಿಸಿರಬೇಕು.


ವಯೋಮಿತಿ: ನೇಮಕಾತಿ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯ ಗರಿಷ್ಠ ವಯಸ್ಸು  27 ವರ್ಷಗಳು ಮೀರಿರಬಾರದು.


ವಯೋಮಿತಿ ಸಡಿಲಿಕೆ: ಹಿಂದುಳಿದ ವರ್ಗಗಳ  ಅಭ್ಯರ್ಥಿಗಳಿಗೆ 3 ವರ್ಷ, ಪ.ಜಾತಿ/ಪ.ಪಂಗಡ ಅಭ್ಯರ್ಥಿಗಳಿಗೆ 5 ವರ್ಷ ಮತ್ತು  ವಿಕಲಚೇತನ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ.


ಅರ್ಜಿ ಶುಲ್ಕ: ವಿಕಲಚೇತನ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದ್ದು, ಪ.ಜಾತಿ/ಪ.ಪಂಗಡ, ಮಹಿಳಾ ಅಭ್ಯರ್ಥಿಗಳಿಗೆ 81 ರೂ. ಮತ್ತು ಇನ್ನುಳಿದ ಎಲ್ಲಾ ಅಭ್ಯರ್ಥಿಗಳಿಗೆ 1000 ರೂ. ಅರ್ಜಿ ಶುಲ್ಕವಿರುತ್ತದೆ.


ಅರ್ಜಿ ಶುಲ್ಕ ಪಾವತಿ ವಿಧಾನ: ಆನ್‌ಲೈನ್ ಮೂಲಕವೇ ಅರ್ಜಿ ಶುಲ್ಕ ಪಾವತಿಸಬೇಕು.


ಆಯ್ಕೆ ಪ್ರಕ್ರಿಯೆ: ಆನ್‌ಲೈನ್ ಪರೀಕ್ಷೆ, ದಾಖಲೆಗಳ ಪರಿಶೀಲನೆ, ಧ್ವನಿ ಪರೀಕ್ಷೆ ಮತ್ತು ಅಭ್ಯರ್ಥಿಯ ಹಿನ್ನೆಲೆ ಪರಿಶೀಲನೆ ಇರುತ್ತದೆ.


ಪ್ರಮುಖ ದಿನಾಂಕಗಳು: ಜೂನ್​ 15ರಿಂದ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಪ್ರಾರಂಭವಾಗಲಿದ್ದು, ಜುಲೈ 14 ಅರ್ಜಿ ಸಲ್ಲಿಸಲು ಕೊನೆ ದಿನಾಂಕವಾಗಿರುತ್ತದೆ.


ಒಟ್ಟು 400 ಹುದ್ದೆಗಳು: 163 UR, 40 EWS, 108 OBC, 59 SC, 30 ST ಮತ್ತು 4 PWD ಸೀಟುಗಳು ಸೇರಿದಂತೆ ಒಟ್ಟು 400 ಹುದ್ದೆಗಳು ಖಾಲಿ ಇವೆ. ಹೆಚ್ಚಿನ ಮಾಹಿತಿಗೆ www.aai.aero ಗೆ ಭೇಟಿ ನೀಡಿ ಪರಿಶೀಲಿಸಬೇಕು.


ಇದನ್ನೂ ಓದಿ: ಉದ್ಯೋಗಕಾಂಕ್ಷಿಗಳೆ ಗಮನಿಸಿ : IBPS ನಿಂದ 8106 ಹುದ್ದೆಗೆ ಅರ್ಜಿ ಆಹ್ವಾನ!


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.