SSC Recruitment 2022 : SSC ಯಲ್ಲಿ 797 ಹುದ್ದೆಗಳಿಗೆ ಅರ್ಜಿ ಅಹ್ವಾನ : ಜೂನ್ 13 ಕೊನೆ ದಿನ!

ಅರ್ಜಿ ಜೂನ್ 13, 2022 ರಂದು ಕೊನೆಗೊಳ್ಳಲಿದೆ. ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್, ssc.nic.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

Written by - Zee Kannada News Desk | Last Updated : Jun 7, 2022, 09:20 PM IST
  • ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ನಲ್ಲಿ 797 ಹುದ್ದೆಗಳಿಗೆ ಅರ್ಜಿ
  • ಅರ್ಜಿ ಜೂನ್ 13, 2022 ರಂದು ಕೊನೆಗೊಳ್ಳಲಿದೆ.
  • ಅರ್ಜಿದಾರರು ಜೂನ್ 15, 2022 ರವರೆಗೆ ಆನ್‌ಲೈನ್ ಶುಲ್ಕವನ್ನು ಪಾವತಿ ಕೊನೆ ದಿನ
SSC Recruitment 2022 : SSC ಯಲ್ಲಿ 797 ಹುದ್ದೆಗಳಿಗೆ ಅರ್ಜಿ ಅಹ್ವಾನ : ಜೂನ್ 13 ಕೊನೆ ದಿನ! title=

SSC Selection Post Recruitment 2022 : ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ನಲ್ಲಿ 797 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಜಿ ಜೂನ್ 13, 2022 ರಂದು ಕೊನೆಗೊಳ್ಳಲಿದೆ. ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್, ssc.nic.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಹುದ್ದೆಗೆ ಅರ್ಜಿ ಮೇ 23, 2022 ರಂದು ಪ್ರಾರಂಭವಾಗಿದೆ. ಅರ್ಜಿದಾರರು ಜೂನ್ 15, 2022 ರವರೆಗೆ ಆನ್‌ಲೈನ್ ಶುಲ್ಕವನ್ನು ಪಾವತಿ ಕೊನೆ ದಿನವಾಗಿದೆ. ಆಯೋಗವು ಜೂನ್ 27 ರಿಂದ 29, 2022 ರವರೆಗೆ ಅಪ್ಲಿಕೇಶನ್ ತಿದ್ದುಪಡಿ ವಿಂಡೋವನ್ನು ಓಪನ್ ಇರುತ್ತದೆ.

ಇದನ್ನೂ ಓದಿ : ಉದ್ಯೋಗಕಾಂಕ್ಷಿಗಳೆ ಗಮನಿಸಿ : IBPS ನಿಂದ 8106 ಹುದ್ದೆಗೆ ಅರ್ಜಿ ಆಹ್ವಾನ!

ಪ್ರಮುಖ ದಿನಾಂಕಗಳು : 

- ಆನ್‌ಲೈನ್ ಅರ್ಜಿಗಳನ್ನು ಸಲ್ಲಿಸಲು ದಿನಾಂಕ: ಮೇ 23 ರಿಂದ ಜೂನ್ 13 ರವರೆಗೆ
- ಆನ್‌ಲೈನ್ ಅರ್ಜಿಗಳನ್ನು ಸ್ವೀಕರಿಸಲು ಕೊನೆಯ ದಿನಾಂಕ ಮತ್ತು ಸಮಯ: ಜೂನ್ 13 (23.00 PM ವರೆಗೆ)
- ಆನ್‌ಲೈನ್ ಶುಲ್ಕ ಪಾವತಿಗೆ ಕೊನೆಯ ದಿನಾಂಕ ಮತ್ತು ಸಮಯ: ಜೂನ್ 15 (23.00 PM)
- ಆಫ್‌ಲೈನ್ ಚಲನ್ ರಚಿಸಲು ಕೊನೆಯ ದಿನಾಂಕ ಮತ್ತು ಸಮಯ: ಜೂನ್ 16 (23.00 PM)
- ಚಲನ್ ಮೂಲಕ ಪಾವತಿಸಲು ಕೊನೆಯ ದಿನಾಂಕ (ಬ್ಯಾಂಕ್‌ನ ಕೆಲಸದ ಸಮಯದಲ್ಲಿ): ಜೂನ್ 18
- ಆನ್‌ಲೈನ್ ಪಾವತಿ ಸೇರಿದಂತೆ 'ಅರ್ಜಿ ನಮೂನೆ ತಿದ್ದುಪಡಿಗಾಗಿ ವಿಂಡೋ' ದಿನಾಂಕಗಳು: ಜೂನ್ 27 ರಿಂದ ಜೂನ್ 29, 2022
- ಕಂಪ್ಯೂಟರ್ ಆಧಾರಿತ ಪರೀಕ್ಷೆಯ ದಿನಾಂಕಗಳು: ಆಗಸ್ಟ್ 2022 (ತಾತ್ಕಾಲಿಕ)

ಅರ್ಹತಾ ಮಾನದಂಡಗಳು

ಮೇಲೆ ತಿಳಿಸಲಾದ ಪೋಸ್ಟ್‌ಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕೆಳಗೆ ನೀಡಲಾದ ನೇರ ಲಿಂಕ್‌ನಿಂದ ಅಧಿಕೃತ ಅಧಿಸೂಚನೆಯ ಮೂಲಕ ಶಿಕ್ಷಣ ಅರ್ಹತೆ ಮತ್ತು ವಯಸ್ಸಿನ ಮಿತಿಯನ್ನು ಪರಿಶೀಲಿಸಬಹುದು.

ಆಯ್ಕೆ ವಿಧಾನ

ಆಬ್ಜೆಕ್ಟಿವ್ ಟೈಪ್ ಮಲ್ಟಿಪಲ್ ಚಾಯ್ಸ್ ಪ್ರಶ್ನೆಗಳನ್ನು ಒಳಗೊಂಡಿರುವ ಕಂಪ್ಯೂಟರ್ ಆಧಾರಿತ ಪರೀಕ್ಷೆ ಮೂಲಕ ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತದೆ.

ಇದನ್ನೂ ಓದಿ : ECIL Recruitment 2022 : ECIL ನಲ್ಲಿ ITI ಪಾಸ್ ಆದವರಿಗೆ ₹20480 ಸಂಬಳದ ಹುದ್ದೆಗಳಿಗೆ ಅರ್ಜಿ!

ಅರ್ಜಿ ಶುಲ್ಕ ಎಷ್ಟು?

ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 100 ರೂ. ಪಾವತಿಸಬೇಕಾಗುತ್ತದೆ. ಪರಿಶಿಷ್ಟ ಜಾತಿಗಳು (SC), ಪರಿಶಿಷ್ಟ ಪಂಗಡಗಳು (ST), ವಿಕಲಚೇತನರು (PwD), ಮತ್ತು ಮಾಜಿ ಸೈನಿಕರು (ESM) ಗೆ ಸೇರಿದ ಮಹಿಳಾ ಅಭ್ಯರ್ಥಿಗಳು ಮತ್ತು ಅಭ್ಯರ್ಥಿಗಳಿಗೆ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ.

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?

ಅರ್ಹ ಅಭ್ಯರ್ಥಿಗಳು ಆಯೋಗದ ಅಧಿಕೃತ ವೆಬ್‌ಸೈಟ್ ssc.nic.in ಮೂಲಕ ಜೂನ್ 13, 2022 ರವರೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News