ಧಾರವಾಡ : ಕೆ.ಎಲ್.ಇ ಟೆಕ್ ಯುನಿವರ್ಸಿಟಿ ಹುಬ್ಬಳ್ಳಿ, ಏಕಲಕ್ಷ ಇನ್ನೊವೆಶನ್ ಲ್ಯಾಬ್ಸ್, ಇವಾಲ್ವ ಲೈವ್ಸ್, ಫೌಂಡೆಶನ್, ದೇಶಪಾಂಡೆ ಫೌಂಡೆಶನ್, ವಿದ್ಯಾಪೊಷಕ ಹಾಗೂ ಇತರೆ ಕೈಗಾರಿಕಾ ಸಂಸ್ಥೆಗಳ ಸಹಯೋಗದಲ್ಲಿ ಜಿಲ್ಲೆಯ ಪ್ರತಿಭಾವಂತ ದ್ವೀತಿಯ ಪಿಯುಸಿ ಹಾಗೂ ಡಿಪ್ಲೊಮಾ ಇಲೆಕ್ಟ್ರಾನಿಕ್ಸ್ ಇಲೆಕ್ಟ್ರಿಕಲ್ & ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಉತ್ತೀರ್ಣ ಹೊಂದಿದ ವಿಧ್ಯಾರ್ಥಿಗಳಿಗೆ ಈಗಾಗಲೇ ಕಳೆದ ಶೈಕ್ಷಣಿಕ ವರ್ಷದಲ್ಲಿ ವ್ಯಾಸಂಗ ಮಾಡಿದ ಪಠ್ಯಪುಸ್ತಕಗಳ ಆಧಾರದ ಮೇಲೆ 30-07-2023 ರಂದು ಹುಬ್ಬಳ್ಳಿಯ ಬಿವಿಬಿ ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿರುವ ಏಕಲಕ್ಷ ಇನ್ನೊವೇಶನ್ ಲ್ಯಾಬ್ಸ್ ಪ್ರೈವೆಟ ಲಿಮಿಟೆಡ್, ಸಿ ಲೈಟ್ ಕಟ್ಟಡದಲ್ಲಿ ಬೆಳಿಗ್ಗೆ 10-30 ಗಂಟೆಯಿಂದ 12-30 ಗಂಟೆಯವರೆಗೆ ಹಾಗೂ ಮಧ್ಯಾಹ್ನ 2-30 ಗಂಟೆಯಿಂದ ಸಾಯಂಕಾಲ 4-30 ಗಂಟೆಯವರೆಗೆ 2 ಅಧಿವೇಶನಗಳಲ್ಲಿ ಪರೀಕ್ಷೆಗಳನ್ನು ಜರುಗಿಸಲಾಗುವುದು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಡಿಕೆಶಿ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಅರ್ಜಿ ವಿಚಾರಣೆ ಜುಲೈ 31ಕ್ಕೆ ಮುಂದೂಡಿಕೆ


ಪರೀಕ್ಷೆಯಲ್ಲಿ ಉತ್ತೀರ್ಣಗೊಂಡು ಆಯ್ಕೆಗೊಂಡ ಅಭ್ಯರ್ಥಿಗಳಿಗೆ ಉಚಿತವಾಗಿ ಹುಬ್ಬಳ್ಳಿಯ ಬಿ.ವಿ.ಬಿ. ಕ್ಯಾಂಪಸ್‍ದಲ್ಲಿರುವ ಕೆ.ಎಲ್.ಇ. ಟೆಕ್ ಯುನಿವರ್ಸಿಟಿಯಲ್ಲಿ 3 ವರ್ಷದ ಬಿ.ಎಸ್.ಸಿ. ಪದವಿ, 8 ತಿಂಗಳ ತಾಂತ್ರಿಕ ತರಬೇತಿ, 4 ತಿಂಗಳ ಪನ್ರ್ಸಾಲಿಟಿ ಡೆವೆಲಪಮೆಂಟ್ ತರಬೇತಿ, 1 ವರ್ಷ ಕೈಗಾರಿಕಾ ತರಬೇತಿ ಇರುತ್ತದೆ. ಇದು ಒಟ್ಟು 5 ವರ್ಷದ ಅವಧಿ ಇದ್ದು, ಅವಧಿಯಲ್ಲಿ ಉಚಿತ ಶಿಕ್ಷಣ, ವಸತಿ ಹಾಗೂ ಊಟದ ವ್ಯವಸ್ಥೆ ಹಾಗೂ ಸ್ಟ್ಯಾಪಂಡ ಇರುತ್ತದೆ. 5 ವರ್ಷದ ಅವಧಿ ಪೂರ್ಣಗೊಂಡ ನಂತರ ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗವಕಾಶ ಹೊಂದಬಹುದಾಗಿದೆ.


ಇದನ್ನೂ ಓದಿ: ಬ್ರ‍್ಯಾಂಡ್ ಬೆಂಗಳೂರು ಯೋಜನೆ/ ಆಕರ್ಷಕ ಬೆಂಗಳೂರಿಗಾಗಿ ಪ್ರತ್ಯೇಕ ಸಮಿತಿ ಜೊತೆ ಸಭೆ


ಆಸಕ್ತರು https://www.eklakshya.com/apply/susandhi-application-2022 ಲಿಂಕ್ ಮೂಲಕ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ವೆಬ್‍ಸೈಟ್ www.eklakshya.com ಹಾಗೂ ದೂರವಾಣಿ ಸಂಖ್ಯೆ 8050050183, 8050050185 ಹಾಗೂ 9972440183 ಗೆ ಸಂಪರ್ಕಿಸಬಹುದಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.