ನಿರುದ್ಯೋಗಿಗಳಿಗೆ ಗುಡ್ ನ್ಯೂಸ್..ಎಚ್ಎಎಲ್ ನಲ್ಲೊಂದು ಸುವರ್ಣಾವಕಾಶ..!
ಹಿಂದೂಸ್ಥಾನ ಏರೋನಾಟಿಕ್ಸ್ ಲಿಮಿಟೆಡ್ ವತಿಯಿಂದ ವಿವಿಧ ವೃತ್ತಿಗಳಲ್ಲಿ ಐಟಿಐ ಪಾಸಾದ ಅಭ್ಯರ್ಥಿಗಳಿಗೆ ಅಪ್ರೆಂಟಿಶಿಪ್ ತರಬೇತಿಯನ್ನು ನೀಡಲಾಗುತ್ತಿದ್ದು, ಈಗ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.ಈ ತರಬೇತಿಯು ಒಂದು ವರ್ಷದ ಅವಧಿಯದ್ದಾಗಿದ್ದು, ಜುಲೈ ಮಾಹೆಯಿಂದ ಅಪ್ರೆಂಟಿಶಿಪ್ ತರಬೇತಿಯು ಆರಂಭವಾಗಲಿದೆ.ಫಿಟ್ಟರ್, ಟರ್ನರ್, ಮಷಿನಿಷ್ಟ್, ಎಲೆಕ್ಟ್ರಿಷಿಯನ್, ವೆಲ್ಡರ್, ಕೋಪಾ, ಫೌಂಡ್ರಿ ಮ್ಯಾನ್, ಶೀಟ್ ಮೆಟಲ್ ವರ್ಕರ್ ವೃತ್ತಿಗಳಲ್ಲಿ ಪಾಸಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಬೆಂಗಳೂರು : ಹಿಂದೂಸ್ಥಾನ ಏರೋನಾಟಿಕ್ಸ್ ಲಿಮಿಟೆಡ್ ವತಿಯಿಂದ ವಿವಿಧ ವೃತ್ತಿಗಳಲ್ಲಿ ಐಟಿಐ ಪಾಸಾದ ಅಭ್ಯರ್ಥಿಗಳಿಗೆ ಅಪ್ರೆಂಟಿಶಿಪ್ ತರಬೇತಿಯನ್ನು ನೀಡಲಾಗುತ್ತಿದ್ದು, ಈಗ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.ಈ ತರಬೇತಿಯು ಒಂದು ವರ್ಷದ ಅವಧಿಯದ್ದಾಗಿದ್ದು, ಜುಲೈ ಮಾಹೆಯಿಂದ ಅಪ್ರೆಂಟಿಶಿಪ್ ತರಬೇತಿಯು ಆರಂಭವಾಗಲಿದೆ.ಫಿಟ್ಟರ್, ಟರ್ನರ್, ಮಷಿನಿಷ್ಟ್, ಎಲೆಕ್ಟ್ರಿಷಿಯನ್, ವೆಲ್ಡರ್, ಕೋಪಾ, ಫೌಂಡ್ರಿ ಮ್ಯಾನ್, ಶೀಟ್ ಮೆಟಲ್ ವರ್ಕರ್ ವೃತ್ತಿಗಳಲ್ಲಿ ಪಾಸಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಇದನ್ನೂ ಓದಿ: KGF Chapter 3: ಕೆಜಿಎಫ್ ಚಾಪ್ಟರ್ 3 ಚಿತ್ರದ ಪ್ರೀ ಪ್ರೊಡಕ್ಷನ್ ಕಾರ್ಯಕ್ಕೆ ಚಾಲನೆ...!
ಅರ್ಜಿ ನಮೂನೆಯಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಐಟಿಐ ನಲ್ಲಿ ಪಡೆದ ಅಂಕಗಳನ್ನು ಕಡ್ಡಾಯವಾಗಿ ನಮೂದಿಸಬೇಕು.ಅಭ್ಯರ್ಥಿಗಳು ಅಪ್ರೆಂಟಿಶಿಪ್ ಪೋರ್ಟಲ್ apprenticeshipindia.org/candidate-registration ನಲ್ಲಿ ನೋಂದಣಿ ಮಾಡಿಕೊಂಡು, ನೋಂದಣಿ ಸಂಖ್ಯೆಯನ್ನು ಅರ್ಜಿ ನಮೂನೆಯಲ್ಲಿ ಕಡ್ಡಾಯವಾಗಿ ನಮೂದಿಸಬೇಕು.ಅಭ್ಯರ್ಥಿಗಳನ್ನು ಮೆರಿಟ್ ಆಧಾರದಲ್ಲಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ
. ವಿಶ್ವದ ಬಾಕ್ಸ್ ಆಫೀಸ್ ನಲ್ಲಿ ಕೆಜಿಎಫ್ 2 ಗೆ ಎರಡನೇ ಸ್ಥಾನ..! ಫ್ರೀ ಟಿಕೆಟ್ ಘೋಷಿಸಿದ ಈ ಕಂಪನಿ..!
ಎಸ್‌ಸಿ, ಎಸ್‌ಟಿ, ಒಬಿಸಿ, ವಿಶೇಷ ಚೇತನರು, ಮಾಜಿ ಸೈನಿಕ ವರ್ಗದಡಿ ಮೀಸಲಾತಿ ಕೋರುವವರು ಸಂಬಂಧಿಸಿದ ಮೀಸಲಾತಿ ದೃಢೀಕರಣ ಪ್ರಮಾಣಪತ್ರ, ಎಸ್.ಎಸ್.ಎಲ್.ಸಿ, ಐಟಿಐ ಅಂಕ ಪಟ್ಟಿಗಳು, ಎನ್‌ಟಿಸಿ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಎನ್‌ಸಿವಿಟಿ ಎಂಐಎಸ್ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಂಡ ಪ್ರತಿಯನ್ನು ನಿಗದಿತ ಅರ್ಜಿ ನಮೂನೆಯೊಂದಿಗೆ ಸಲ್ಲಿಸಬೇಕು.
ಅರ್ಜಿ ಸಲ್ಲಿಸಲು ಏಪ್ರಿಲ್ 30 ಕೊನೆಯ ದಿನವಾಗಿದ್ದು, ಅಪೂರ್ಣ ಹಾಗೂ ಅವಧಿ ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಕಚೇರಿಯನ್ನು ಸಂಪರ್ಕಿಸಬೇಕು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.