KGF Chapter 3: ಕೆಜಿಎಫ್ ಚಾಪ್ಟರ್ 3 ಚಿತ್ರದ ಪ್ರೀ ಪ್ರೊಡಕ್ಷನ್ ಕಾರ್ಯಕ್ಕೆ ಚಾಲನೆ...!

ಈಗಾಗಲೇ ವಿಶ್ವದಾದ್ಯಂತ ಬಾಕ್ಸ್ ಆಫೀಸ್ ನಲ್ಲಿ ಕೆಜಿಎಫ್ 2 ಚಿತ್ರವು ಸಾಕಷ್ಟು ಸದ್ದು ಮಾಡುತ್ತಿದೆ. ಆ ಮೂಲಕ ಚಿತ್ರವು ಜಾಗತಿಕವಾಗಿ ಹೊಸ ದಾಖಲೆಯನ್ನು ನಿರ್ಮಿಸುತ್ತಿದೆ.ಇದೇ ವೇಳೆ ಕೆಜಿಎಫ್ ಚಿತ್ರ ತಂಡವು ಈಗ ಹೊಸ ಘೋಷಣೆಯನ್ನು ಮಾಡಿದೆ.

Written by - Zee Kannada News Desk | Last Updated : Apr 18, 2022, 05:33 PM IST
  • ಆ ಮೂಲಕ ಚಿತ್ರವು ಸಾರ್ವಕಾಲಿಕ ದಾಖಲೆಯನ್ನು ನಿರ್ಮಿಸುತ್ತಿದೆ.
  • ಇದೇ ಸಂದರ್ಭದಲ್ಲಿ ಕೆಜಿಎಫ್ ಚಿತ್ರ ತಂಡವು ಈಗ ಹೊಸ ಘೋಷಣೆಯನ್ನು ಮಾಡಿದೆ.
KGF Chapter 3: ಕೆಜಿಎಫ್ ಚಾಪ್ಟರ್ 3 ಚಿತ್ರದ ಪ್ರೀ ಪ್ರೊಡಕ್ಷನ್ ಕಾರ್ಯಕ್ಕೆ ಚಾಲನೆ...!  title=

ಬೆಂಗಳೂರು: ಈಗಾಗಲೇ ವಿಶ್ವದಾದ್ಯಂತ ಬಾಕ್ಸ್ ಆಫೀಸ್ ನಲ್ಲಿ ಕೆಜಿಎಫ್ 2 ಚಿತ್ರವು ಸಾಕಷ್ಟು ಸದ್ದು ಮಾಡುತ್ತಿದೆ. ಆ ಮೂಲಕ ಚಿತ್ರವು ಜಾಗತಿಕವಾಗಿ ಹೊಸ ದಾಖಲೆಯನ್ನು ನಿರ್ಮಿಸುತ್ತಿದೆ.ಇದೇ ವೇಳೆ ಕೆಜಿಎಫ್ ಚಿತ್ರ ತಂಡವು ಈಗ ಹೊಸ ಘೋಷಣೆಯನ್ನು ಮಾಡಿದೆ.

ಇದನ್ನೂ ಓದಿ: KGF 2: ಕನ್ನಡದಲ್ಲೇ ಕೆಜಿಎಫ್ ಚಾಪ್ಟರ್‌ 2 ವೀಕ್ಷಿಸಿದ ರಜನಿಕಾಂತ್

ಈಗಾಗಲೇ ಕೆಜಿಎಫ್ 2 ಚಿತ್ರದ ಅಂತ್ಯದಲ್ಲಿ ಮೂರನೇ ಭಾಗವು ಕೂಡ ತೆರೆಗೆ ಬರಲಿದೆ ಎನ್ನುವ ಸುಳಿವನ್ನು ನೀಡಿರುವ ಕೆಜಿಎಫ್ ಚಿತ್ರ ತಂಡವು ಮೂರನೇ ಭಾಗದ ಪ್ರೀ ಪ್ರೊಡಕ್ಷನ್ ಕಾರ್ಯವು ನಡೆಯುತ್ತಿದೆ ಎನ್ನುವ ಸಂಗತಿಯನ್ನು ಬಹಿರಂಗಪಡಿಸಿದೆ. ಹೌದು ಖಾಸಗಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಕೆಜಿಎಫ್‌ನ ಕಾರ್ಯನಿರ್ವಾಹಕ ನಿರ್ಮಾಪಕ ಕಾರ್ತಿಕ್ ಗೌಡ ಅವರು ಮೂರನೇ ಭಾಗ ಬರುವುದನ್ನು ಖಚಿತಪಡಿಸಿದ್ದಾರೆ.ಅಷ್ಟೇ ಅಲ್ಲದೆ ಚಿತ್ರದ ಪ್ರೀ ಪ್ರೊಡಕ್ಷನ್ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.ಶೀಘ್ರದಲ್ಲೇ ವಿವರವನ್ನು ಬಹಿರಂಗಪಡಿಸುವುದಾಗಿ ಅವರು ಹೇಳಿದ್ದಾರೆ.

.

ಇದನ್ನೂ ಓದಿ: ಕೇವಲ ಮೂರು ದಿನಗಳಲ್ಲಿ ಬಾಕ್ಸ್ ಆಫೀಸ್ ನಲ್ಲಿ 419 ಕೋಟಿ ರೂ.ಗಳಿಸಿದ ಕೆಜಿಎಫ್ 2..!

ಕೆಜಿಎಫ್ 2 ಚಿತ್ರವು ಬಾಕ್ಸ್ ಆಫೀಸ್ ನಲ್ಲಿ ಬಿರುಗಾಳಿಯನ್ನೇ ಸೃಷ್ಟಿಸಿದ್ದು, ಈ ಚಿತ್ರ ಬಿಡುಗಡೆಯಾದ ನಾಲ್ಕನೇ ದಿನದಲ್ಲೇ 552 ಕೋಟಿ ರೂ ಗಳನ್ನು ಬಾಚಿಕೊಂಡಿದೆ.ಆ ಮೂಲಕ ವಿಶ್ವದಲ್ಲೇ ಈ ವಾರಾಂತ್ಯದಲ್ಲಿ ಅತಿ ಹೆಚ್ಚು ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿರುವ ಚಿತ್ರದಲ್ಲಿ ಕೆಜಿಎಫ್ 2 ಎರಡನೇ ಸ್ಥಾನದಲ್ಲಿದೆ.ಅಷ್ಟೇ ಅಲ್ಲದೆ ಹಿಂದಿ ಬೆಲ್ಟ್ ನಲ್ಲಿ ವೇಗವಾಗಿ 200 ಕೋಟಿ ದಾಟಿದ ಚಿತ್ರ ಎನ್ನುವ ಹೆಗ್ಗಳಿಕೆಗೂ ಪಾತ್ರವಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News