ಬೆಂಗಳೂರು: 2023-24 ನೇ ಸಾಲಿನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಹಿಂದುಳಿದ ವರ್ಗಗಳ ಪ್ರವರ್ಗ -1, ಪ್ರವರ್ಗ-2ಎ, ಪ್ರವರ್ಗ-3ಎ, ಮತ್ತು  ಪ್ರವರ್ಗ-3ಬಿ  ವರ್ಗಕ್ಕೆ ಸೇರಿದ ಕಾನೂನು ಪದವೀಧರರಿಗೆ ನ್ಯಾಯಾಂಗ ಆಡಳಿತ ವೃತ್ತಿ ತರಬೇತಿ ಅವಧಿಯಲ್ಲಿ ತರಬೇತಿ ಭತ್ಯೆ ಪಾವತಿಸುವ ಕಾರ್ಯಕ್ರಮದಡಿ ಅರ್ಹ ಕಾನೂನು ಪದವೀಧರರಿಂದ ಅರ್ಜಿ ಆಹ್ವಾನಿಸಲಾಗಿದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಅಮೀರ್ ಖಾನ್ ಅವರ 3 Idiots 2 ಕನ್ಫರ್ಮ್? ರಾಜು ರಸ್ತೋಗಿ ಕೊಟ್ರು ಬಿಗ್ ಅಪ್‌ಡೇಟ್!


ಎರಡನೇ ತಂಡದ ಅಭ್ಯರ್ಥಿಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಪ್ರರ್ಗ-1 ರ ಅಭ್ಯರ್ಥಿಯ ಕುಟುಂಬದ ವಾರ್ಷಿಕ ರೂ.3.50ಲಕ್ಷ ಆದಾಯಮಿತಿ ಹೊಂದಿದ್ದು 40 ವರ್ಷದೊಳಗಿನವರಾಗಿರಬೇಕು. ಪ್ರವರ್ಗ-2ಎ, ಪ್ರವರ್ಗ-3ಎ, ಮತ್ತು  ಪ್ರವರ್ಗ-3ಬಿ  ವರ್ಗಗಕ್ಕೆ ಸೇರಿದ ಅಭ್ಯರ್ಥಿಗಳ ಆದಾಯ 2.50 ಲಕ್ಷ ಆದಾಯಮಿತಿ ಹೊಂದಿದ್ದು 38 ವರ್ಷದೂಳಗಿನವರಾಗಿರಬೇಕು. ಕಾನೂನು ಪದವೀಧರರಿಗೆ ವಕೀಲ ವೃತ್ತಿಯಲ್ಲಿ ನ್ಯಾಯಾಂಗ ಸೇವೆಯ ಪೂರ್ವ ತರಬೇತಿ ಪಡೆಯಲು ಪದವಿ ಪಡೆದ 2 ವರ್ಷದೊಳಗಿನ ಅವಧಿಯ ಅರ್ಹ ಆಸಕ್ತಿಯುಳ್ಳ (ಪ್ರವರ್ಗ-1, ಪ್ರವರ್ಗ-2ಎ, ಪ್ರವರ್ಗ-3ಎ, ಮತ್ತು ಪ್ರವರ್ಗ-3ಬಿ ವರ್ಗಕ್ಕೆಸೇರದ) ಕಾನೂನು ಪದವೀಧರರು www.bcwd.kar.nic.in ವೆಬ್‍ಸೈಟ್ ನಲ್ಲಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು. 


ಇದನ್ನೂ ಓದಿ:  ರಾಮ್‌ಚರಣ ಮಗಳ ನಾಮಕರಣಕ್ಕೆ 24 ಕ್ಯಾರೆಟ್‌ ಬಂಗಾರದ ತೊಟ್ಟಿಲು ಗಿಪ್ಟ್‌ ನೀಡಿದ ಅಂಬಾನಿ..!


ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.4,000/- ಭತ್ಯೆಯನ್ನು 4 ವರ್ಷಗಳವರೆಗೆ ನೀಡಲಾಗುವುದು.  ಅರ್ಜಿಯನ್ನು ಜುಲೈ 28 ರೊಳಗಾಗಿ ಸಲ್ಲಿಸಬೇಕು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ