ಬೆಂಗಳೂರು : ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) 2024-25 ನೇ ಶೈಕ್ಷಣಿಕ ವರ್ಷಕ್ಕೆ 9 ಮತ್ತು 11 ನೇ ತರಗತಿಗಳಿಗೆ ಪ್ರವೇಶಿಸುವ ವಿದ್ಯಾರ್ಥಿಗಳಿಗೆ ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. 2026 ರಲ್ಲಿ ನಿಗದಿಪಡಿಸಲಾದ 10 ಮತ್ತು 12 ನೇ ತರಗತಿಯ ಬೋರ್ಡ್ ಪರೀಕ್ಷೆಗೆ ಹಾಜರಾಗಬೇಕಾದರೆ ನೋಂದಣಿ  ಮಾಡಿಕೊಳ್ಳುವುದು ಅನಿವಾರ್ಯ. 


COMMERCIAL BREAK
SCROLL TO CONTINUE READING

ಶಾಲಾ ಅಧಿಕಾರಿಗಳು CBSE ಯ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಪರೀಕ್ಷಾ ಸಂಗಮ್ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಾಗುತ್ತದೆ. ನೋಂದಣಿ ಸಮಯದಲ್ಲಿ ವಿದ್ಯಾರ್ಥಿಗಳ ನಿಖರವಾದ ವಿವರಗಳನ್ನು ಖಾತ್ರಿಪಡಿಸುವ ಪ್ರಾಮುಖ್ಯತೆಯನ್ನು CBSE ಒತ್ತಿಹೇಳಿದೆ. ಏಕೆಂದರೆ ನೋಂದಣಿ ಸಮಯದಲ್ಲಿ ನೀಡಲಾಗುವ ವಿವರಗಳನ್ನು ಬೋರ್ಡ್ ಪರೀಕ್ಷೆಗಳಿಗೆ ಬಳಸಿಕೊಳ್ಳಲಾಗುತ್ತದೆ.


ಇದನ್ನೂ ಓದಿ : IBPS RRB Clerk Result 2024:ಫಲಿತಾಂಶವನ್ನು ಇಲ್ಲಿ ಮತ್ತು ಹೀಗೆ ಚೆಕ್ ಮಾಡಿ !


ಪ್ರಮುಖ ದಿನಾಂಕಗಳು :
ಸೆಪ್ಟೆಂಬರ್ 18, 2024ರಿಂದ ನೋಂದಣಿ ಆರಂಭ 
ಅಕ್ಟೋಬರ್ 16, 2024  ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಲು ಕೊನೆಯ ದಿನಾಂಕ 
ಅಕ್ಟೋಬರ್ 24, 2024ರವರೆಗೆ ಲೇಟ್ ಫೀಸ್ ಪಾವತಿ ಮೂಲಕ ನೋಂದಣಿ ಮಾಡಬಹುದು. 


CBSE ತರಗತಿ 9, 11 ಗೆ ನೋಂದಾಯಿಸುವುದು ಹೇಗೆ ? : 
೧.ಅಧಿಕೃತ CBSE ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ಪರೀಕ್ಷಾ ಸಂಗಮ್ ಪೋರ್ಟಲ್ ಆಕ್ಸೆಸ್ ಮಾಡಿ. 
೨. ಅಗತ್ಯವಿದ್ದರೆ ಲಾಗ್ ಇನ್ ಮಾಡಿ ಅಥವಾ ಖಾತೆಯನ್ನು ರಚಿಸಿ
೩. 9 ಅಥವಾ 11 ನೇ ತರಗತಿಗೆ ನೋಂದಣಿ ಫಾರ್ಮ್ ಅನ್ನು ಆಯ್ಕೆಮಾಡಿ
೪. ವಿದ್ಯಾರ್ಥಿ ಮತ್ತು ಶಾಲೆಯ ವಿವರಗಳನ್ನು ಎಚ್ಚರಿಕೆಯಿಂದ ನಮೂದಿಸಿ
೫. ಲಭ್ಯವಿರುವ ಆಯ್ಕೆಗಳ ಮೂಲಕ ಅಗತ್ಯವಿರುವ ಪಾವತಿಯನ್ನು ಮಾಡಿ
೬. ಫಾರ್ಮ್ ಅನ್ನು ಮತೊಮ್ಮೆ ಪರಿಶೀಲಿಸಿ ಮತ್ತು ಸಬ್ಮಿಟ್ ಮಾಡಿ .


ಇದನ್ನೂ ಓದಿ : ವಿಮಾನವನ್ನು ಹಾರಿಸುವಾಗ ಪೈಲಟ್‌ಗೆ ದಾರಿ ಹೇಗೆ ತಿಳಿಯುತ್ತದೆ?


ನೋಂದಣಿ ಶುಲ್ಕ : 
2025-26ರ ಅವಧಿಗೆ CBSE ತರಗತಿ 10 ಮತ್ತು 12 ಬೋರ್ಡ್ ಪರೀಕ್ಷೆಗಳಿಗೆ ನೋಂದಾಯಿಸಿಕೊಳ್ಳುವ ವಿದ್ಯಾರ್ಥಿಗಳು ಮಂಡಳಿಯ ಮಾರ್ಗಸೂಚಿಗಳ ಪ್ರಕಾರ ನೋಂದಣಿ ಶುಲ್ಕವನ್ನು ಪಾವತಿಸಬೇಕು.9ನೇ ತರಗತಿ ವಿದ್ಯಾರ್ಥಿಗಳು 300 ರೂ., 10ನೇ ತರಗತಿ ವಿದ್ಯಾರ್ಥಿಗಳು 600 ರೂ. ನೋಂದಣಿ ಶುಲ್ಕ ಪಾವತಿಸಬೇಕಾಗುತ್ತದೆ.
ನಿಗದಿತ ದಿನಾಂಕದೊಳಗೆ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸದಿದ್ದರೆ, 2,300 ರೂ.  ಲೇಟ್ ಫೀಸ್ ವಿಧಿಸಲಾಗುತ್ತದೆ. ಲೇಟ್ ಫೀಸ್  ಪಾವತಿ ಮಾಡುವ ಮೂಲಕ  ಅಕ್ಟೋಬರ್ 24ರೊಳಗೆ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಬಹುದು. ಆಫ್‌ಲೈನ್ ಪಾವತಿಗಳು ಅಥವಾ ನೇರ ಬ್ಯಾಂಕ್ ಠೇವಣಿಗಳನ್ನು ಸ್ವೀಕರಿಸಲಾಗುವುದಿಲ್ಲ.


ನೋಂದಾಯಿತ ವಿದ್ಯಾರ್ಥಿಗಳಿಗೆ ಮಾತ್ರ 2026ರಲ್ಲಿ ಬೋರ್ಡ್ ಪರೀಕ್ಷೆಗಳಿಗೆ ಹಾಜರಾಗಲು ಅನುಮತಿಸಲಾಗುವುದು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.