IBPS RRB Clerk Result 2024:ಫಲಿತಾಂಶವನ್ನು ಇಲ್ಲಿ ಮತ್ತು ಹೀಗೆ ಚೆಕ್ ಮಾಡಿ !

ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS) ಕಚೇರಿ ಸಹಾಯಕ ಪ್ರಿಲಿಮ್ಸ್ ಮತ್ತು IBPS RRB ಕ್ಲರ್ಕ್ ಪ್ರಿಲಿಮ್ಸ್ ಫಲಿತಾಂಶವನ್ನು ಶೀಘ್ರದಲ್ಲೇ ಘೋಷಿಸಲಿದೆ.  

Written by - Ranjitha R K | Last Updated : Sep 16, 2024, 06:21 PM IST
IBPS RRB Clerk Result 2024:ಫಲಿತಾಂಶವನ್ನು ಇಲ್ಲಿ ಮತ್ತು ಹೀಗೆ ಚೆಕ್ ಮಾಡಿ ! title=

IBPS RRB : ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS) ಕಚೇರಿ ಸಹಾಯಕ ಪ್ರಿಲಿಮ್ಸ್ ಮತ್ತು IBPS RRB ಕ್ಲರ್ಕ್ ಪ್ರಿಲಿಮ್ಸ್ ಫಲಿತಾಂಶವನ್ನು ಶೀಘ್ರದಲ್ಲೇ ಘೋಷಿಸಲಿದೆ.ಆಫೀಸರ್ ಸ್ಕೇಲ್ I ಅಥವಾ RRB PO ಪ್ರಿಲಿಮ್ಸ್ ಪರೀಕ್ಷೆಯ ಫಲಿತಾಂಶವನ್ನು ಈಗಾಗಲೇ ಪ್ರಕಟಿಸಲಾಗಿದೆ.RRB ಕ್ಲರ್ಕ್ ಪ್ರಿಲಿಮ್ಸ್ ಫಲಿತಾಂಶವನ್ನು ಪ್ರಕಟಿಸಲಾಗುವುದು.ಫಲಿತಾಂಶವು ibps.in ನಲ್ಲಿ ಲಭ್ಯವಿರುತ್ತದೆ.

IBPS RRB ಕ್ಲರ್ಕ್ ಪ್ರಿಲಿಮ್ಸ್ ಫಲಿತಾಂಶವನ್ನು ಡೌನ್‌ಲೋಡ್ ಮಾಡಲು, ಅಭ್ಯರ್ಥಿಗಳು ನೋಂದಣಿ ಸಂಖ್ಯೆ/ರೋಲ್ ಸಂಖ್ಯೆ ಮತ್ತು ಪಾಸ್‌ವರ್ಡ್/ಹುಟ್ಟಿದ ದಿನಾಂಕವನ್ನು ಬಳಸಬೇಕಾಗುತ್ತದೆ. IBPS RRB PO, ಕ್ಲರ್ಕ್ 2024 ರ ಪರೀಕ್ಷಾ ಅಧಿಸೂಚನೆಯ ಪ್ರಕಾರ, ಕ್ಲರ್ಕ್ ಪ್ರಾಥಮಿಕ ಪರೀಕ್ಷೆಯ ಫಲಿತಾಂಶದ ಘೋಷಣೆಯನ್ನು ಸೆಪ್ಟೆಂಬರ್‌ನಲ್ಲಿ ನಿಗದಿಪಡಿಸಲಾಗಿದೆ.

ಇದನ್ನೂ ಓದಿ : ವಿಮಾನವನ್ನು ಹಾರಿಸುವಾಗ ಪೈಲಟ್‌ಗೆ ದಾರಿ ಹೇಗೆ ತಿಳಿಯುತ್ತದೆ?

ಸಂಸ್ಥೆಯ ಕ್ಯಾಲೆಂಡರ್ ಪ್ರಕಾರ,IBPS RRB PO ಮುಖ್ಯ ಪರೀಕ್ಷೆಯು ಸೆಪ್ಟೆಂಬರ್ 29 ರಂದು ನಡೆಯಲಿದೆ ಎಂದು ನಿರೀಕ್ಷಿಸಲಾಗಿದೆ. RRB ಕ್ಲರ್ಕ್ ಮುಖ್ಯ ಪರೀಕ್ಷೆಯನ್ನು ಬಹುಶಃ ಅಕ್ಟೋಬರ್ 6, 2024 ರಂದು ನಿಗದಿಪಡಿಸಲಾಗಿದೆ.IBPS RRB ಕ್ಲರ್ಕ್ ಮತ್ತು PO ಪರೀಕ್ಷೆಯು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳಲ್ಲಿ 9,923 ಖಾಲಿ ಇರುವ ಅಧಿಕಾರಿ ಮತ್ತು ಸಹಾಯಕ ಹುದ್ದೆಗಳಿಗೆ ಪರೀಕ್ಷೆ ನಡೆಸಲಾಗಿದೆ.

IBPS RRB ಕ್ಲರ್ಕ್ ಫಲಿತಾಂಶ 2024: ಫಲಿತಾಂಶವನ್ನು ಈ ರೀತಿ ಪರಿಶೀಲಿಸಬಹುದು :
ಹಂತ 1. ಮೊದಲು IBPS ವೆಬ್‌ಸೈಟ್ ibps.in ಗೆ ಹೋಗಿ.
ಹಂತ-2. ಈಗ IBPS ಕ್ಲರ್ಕ್ CRP-14 ಪ್ರಿಲಿಮ್ಸ್ ಫಲಿತಾಂಶದ ಲಿಂಕ್ ಮುಖಪುಟದಲ್ಲಿಯೇ ಲಭ್ಯವಿರುತ್ತದೆ.
ಹಂತ-3.ಈಗ ನಿಮ್ಮ ಲಾಗಿನ್ ಕ್ರೆಡೆನ್ಶಿಯಲ್ ನಮೂದಿಸಿ ಸಬ್ಮಿಟ್ ಮಾಡಿ.
ಹಂತ-4.ಈಗ ಫಲಿತಾಂಶವು ಸ್ಕ್ರೀನ್ ಮೇಲೆ ಕಾಣಿಸುತ್ತದೆ. 
ಹಂತ-5.RRB ಕ್ಲರ್ಕ್ CRP-14 ಪ್ರಿಲಿಮ್ಸ್ ಫಲಿತಾಂಶವನ್ನು ಡೌನ್‌ಲೋಡ್ ಮಾಡಿ  ಅದರ ಪ್ರಿಂಟ್ ಔಟ್ ತೆಗೆದುಕೊಳ್ಳಿ.

ಪ್ರಶ್ನೆಗಳು ಹೇಗೆ ಬರುತ್ತವೆ? :
IBPS ಕ್ಲರ್ಕ್ ಮುಖ್ಯ ಪರೀಕ್ಷೆಯಲ್ಲಿ 190 ಪ್ರಶ್ನೆಗಳನ್ನು ಕೇಳಲಾಗುತ್ತದೆ.ಈ ಪರೀಕ್ಷೆಯು 200 ಅಂಕಗಳದ್ದಾಗಿರುತ್ತದೆ. ಪತ್ರಿಕೆಯಲ್ಲಿ ನಾಲ್ಕು ವಿಭಾಗಗಳಿರುತ್ತವೆ.  ಇಂಗ್ಲಿಷ್ ಭಾಷೆ, ಸಂಖ್ಯಾ ಸಾಮರ್ಥ್ಯ,ತಾರ್ಕಿಕ ಸಾಮರ್ಥ್ಯ ಮತ್ತು ಸಾಮಾನ್ಯ ಅರಿವು.

ಇದನ್ನೂ ಓದಿ : 10ನೇ ತರಗತಿ ಪಾಸ್ ಮಾಡಿದ್ದೀರಾ..? ತಿಂಗಳಿಗೆ ರೂ. 70,000 ಸಂಬಳ.. ದೊಡ್ಡ ಕೆಲಸ..! ವಿವರ ಇಲ್ಲಿದೆ

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News