CBSE CTET 2024 Notification : ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ ಜನವರಿ 21, 2024 ರಂದು ಕೇಂದ್ರ ಶಿಕ್ಷಕರ ಅರ್ಹತಾ ಪರೀಕ್ಷೆಯ (CTET) 18 ನೇ ಆವೃತ್ತಿಯನ್ನು ನಡೆಸುತ್ತದೆ. ಈ ಪರೀಕ್ಷೆಯನ್ನು ದೇಶದಾದ್ಯಂತ 135 ನಗರಗಳಲ್ಲಿ ಇಪ್ಪತ್ತು ಭಾಷೆಗಳಲ್ಲಿ ನಡೆಸಲಾಗುತ್ತದೆ. ಆನ್‌ಲೈನ್ ಅಪ್ಲಿಕೇಶನ್ ಪ್ರಕ್ರಿಯೆಯು ನವೆಂಬರ್ 3, 2023 ರಂದು ಪ್ರಾರಂಭವಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 23, 2023, ಮತ್ತು ಅರ್ಜಿ ಶುಲ್ಕವನ್ನು ಅದೇ ದಿನ ರಾತ್ರಿ 11:59 ರವರೆಗೆ ಪಾವತಿಸಬಹುದು. ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ctet.nic.in ಮೂಲಕ ಅರ್ಜಿ ಸಲ್ಲಿಸಬಹುದು.


COMMERCIAL BREAK
SCROLL TO CONTINUE READING

ಇದನ್ನೂ ಓದಿ : ರಜನಿಕಾಂತ್ ಬಿಟಿಎಸ್ ಬಸ್ ಕಂಡೆಕ್ಟರ್ ಆಗಿದ್ದಾಗ ಪಡೆದ ಮೊದಲ ಸಂಬಳ ಎಷ್ಟು?  


ಪರೀಕ್ಷಾ ಶುಲ್ಕ:


ಸಾಮಾನ್ಯ/OBC (NCL) ಗಾಗಿ ಪೇಪರ್ I ಅಥವಾ ಪೇಪರ್ II ಗೆ ಅರ್ಜಿ ಶುಲ್ಕ 1000 ರೂ. ಪರೀಕ್ಷೆಯ ಶುಲ್ಕವು ಪೇಪರ್ I ಮತ್ತು ಪೇಪರ್ II ಗೆ 1200 ರೂ. ಆಗಿದೆ. 


ಎಸ್ಸಿ /ಎಸ್ಟಿ/ PWD ಅಭ್ಯರ್ಥಿಗಳಿಗೆ - ರೂ.500 (ಪತ್ರಿಕೆ 1 ಅಥವಾ 2 ಕ್ಕೆ), ರೂ.600 (ಎರಡು ಪತ್ರಿಕೆಗಳಿಗೆ) ಆಗಿದೆ. 


CTET ಜನವರಿ 2024: ಅರ್ಜಿ ಸಲ್ಲಿಸುವುದು ಹೇಗೆ?


ಹಂತ 1: ctet.nic.in ನಲ್ಲಿ CTET ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ


ಹಂತ 2: 'ಜುಲೈ-2023 ಸೆಷನ್ ಸಿಟಿಇಟಿ ಪರೀಕ್ಷೆ' ಲಿಂಕ್ ಮೇಲೆ ಕ್ಲಿಕ್ ಮಾಡಿ. 


ಹಂತ 3: ಆನ್‌ಲೈನ್ ಅರ್ಜಿ ನಮೂನೆಯನ್ನು ಭರ್ತಿ ಮಾಡಿ


ಹಂತ 4: ಸ್ಕ್ಯಾನ್ ಮಾಡಿದ ಫೋಟೋ ಮತ್ತು ಸಹಿಯನ್ನು ಅಪ್‌ಲೋಡ್ ಮಾಡಿ


ಹಂತ 5: ಪರೀಕ್ಷಾ ಶುಲ್ಕವನ್ನು ಡೆಬಿಟ್/ಕ್ರೆಡಿಟ್ ಕಾರ್ಡ್ ಮತ್ತು ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಿ.


ಹಂತ 6: ಅರ್ಜಿ ಸಲ್ಲಿಕೆ ಪೂರ್ಣವಾದ ಮೇಲೆ, ಡೌನ್‌ಲೋಡ್‌ ಮಾಡಿ ಪ್ರಿಂಟ್‌ ತೆಗೆದುಕೊಳ್ಳಿ. 


ಇದನ್ನೂ ಓದಿ : ನೇಪಾಳದಲ್ಲಿ ವಿನಾಶ ಸೃಷ್ಟಿಸಿದ ಪ್ರಬಲ ಭೂಕಂಪ: 129 ಮಂದಿ ಸಾವು-ಸೇನೆಯಿಂದ ಕಾರ್ಯಾಚರಣೆ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.