UGC NET 2024 city slip released : ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) UGC NET ಪರೀಕ್ಷೆಯ ಸಿಟಿ ಸ್ಲಿಪ್ 2024 ಅನ್ನು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿದೆ.UGC NET ಪರೀಕ್ಷೆಯ ಸಿಟಿ ಸ್ಲಿಪ್ https://ugcnet.nta.ac.in/ ವೆಬ್ ಸೈಟ್ ನಲ್ಲಿ ಲಭ್ಯವಿದ್ದು, ಇಲ್ಲಿಂದ ಡೌನ್ಲೋಡ್ ಮಾಡಬಹುದು.ಅಭ್ಯರ್ಥಿಯು ಇಲ್ಲಿ ತಮ್ಮ ನೋಂದಣಿ ಸಂಖ್ಯೆ ಮತ್ತು ಪಾಸ್‌ವರ್ಡ್ ಅನ್ನು ನಮೂದಿಸುವ ಮೂಲಕ ಡೌನ್ ಲೋಡ್ ಮಾಡಿಕೊಳ್ಳಬಹುದು. ಈ ಸಿಟಿ ಸ್ಲಿಪ್ ಅನ್ನು ಆಗಸ್ಟ್ 21, 22 ಮತ್ತು 23 ರಂದು ನಡೆಯಲಿರುವ ಪರೀಕ್ಷೆಗಾಗಿ ಬಿಡುಗಡೆ ಮಾಡಲಾಗಿದೆ. 


COMMERCIAL BREAK
SCROLL TO CONTINUE READING

"21, 22 ಮತ್ತು 23 ಆಗಸ್ಟ್ 2024 ರಂದು ನಡೆಯಲಿರುವ UGC-NET ಜೂನ್ 2024 ಗಾಗಿ ಪರೀಕ್ಷಾ ನಗರವನ್ನು ಹಂಚಿಕೆ ಮಾಡಲು NTA ಈಗ ಮುಂಗಡ ಸೂಚನೆಯನ್ನು  ಬಿಡುಗಡೆ ಮಾಡಿದೆ. ವಿಷಯವಾರು ವಿವರಗಳನ್ನು ಅನುಬಂಧ-I ನಲ್ಲಿ ಉಲ್ಲೇಖಿಸಲಾಗಿದೆ" ಎಂದು UGC ಅಧಿಕೃತ ಸೂಚನೆಯಲ್ಲಿ ತಿಳಿಸಿದೆ.


ಇದನ್ನೂ ಓದಿ : ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ


ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಯುಜಿಸಿ - ನೆಟ್ ಜೂನ್ 2024 ರ ಪರೀಕ್ಷೆಯನ್ನು ದೇಶದಾದ್ಯಂತ ವಿವಿಧ ನಗರಗಳಲ್ಲಿ 83 ವಿಷಯಗಳಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಮೋಡ್‌ನಲ್ಲಿ ನಡೆಸುತ್ತದೆ.ಈ ಪರೀಕ್ಷೆಯನ್ನು ಆಗಸ್ಟ್ 21 ರಿಂದ ಸೆಪ್ಟೆಂಬರ್ 4, 2024ರ ನಡುವೆ ನಡೆಸಲಾಗುತ್ತದೆ. 


ಈ ನೇರ ಲಿಂಕ್‌ನಿಂದ ಸಿಟಿ ಸ್ಲಿಪ್ ಡೌನ್‌ಲೋಡ್ ಮಾಡಿಕೊಳ್ಳಿ : 
1. UGC NET ಪರೀಕ್ಷೆಯ ಸಿಟಿ ಸ್ಲಿಪ್ 2024 ಅನ್ನು ಡೌನ್‌ಲೋಡ್ ಮಾಡಲು ಅಧಿಕೃತ ವೆಬ್‌ಸೈಟ್ https://ugcnet.nta.ac.in/ ಗೆ ಹೋಗಿ . 
2. “UGC NET June  2024: Click here to city intimation for 21st,2nd,23rd august 2024 exam ಮೇಲೆ ಕ್ಲಿಕ್ ಮಾಡಿ. 
3, ಅಪ್ಲಿಕೇಶನ್ ಸಂಖ್ಯೆ, ಜನ್ಮ ದಿನಾಂಕ ಮತ್ತು ಭದ್ರತಾ ಪಿನ್‌ನಂತಹ ಲಾಗಿನ್ ವಿವರಗಳನ್ನು ನಮೂದಿಸಿ. 
4. ನಿಮ್ಮ UGC NET ಪರೀಕ್ಷೆಯ ಸಿಟಿ ಸ್ಲಿಪ್ 2024 ಪರದೆಯ ಮೇಲೆ ಕಾಣಿಸುತ್ತದೆ. 
ಡೌನ್‌ಲೋಡ್ ಮಾಡಿ ಮತ್ತು ಅದರ ಪ್ರಿಂಟ್‌ಔಟ್ ತೆಗೆದುಕೊಳ್ಳಿ. 


ಇದನ್ನೂ ಓದಿ :ಎಲ್ಲಾ ಸೂಪರ್ ಸ್ಟಾರ್ ಮಕ್ಕಳು ಓದುವುದು ಇದೇ ಶಾಲೆಯಲ್ಲಿ !ಇಲ್ಲಿಯ ಒಂದು ವರ್ಷದ ಫೀಸ್ ಕೇಳಿದರೆ ಎದೆಯೊಡೆಯುತ್ತದೆ !


UGC-NET ಜೂನ್ 2024 ಪ್ರವೇಶ ಕಾರ್ಡ್ ಅನ್ನು ನಂತರ ಬಿಡುಗಡೆ ಮಾಡಲಾಗುತ್ತದೆ. ಯಾವುದೇ ಅಭ್ಯರ್ಥಿಯು UGC-NET ಜೂನ್ 2024ಗಾಗಿ ಪರೀಕ್ಷಾ ಸಿಟಿ ಸ್ಲಿಪ್ ಅನ್ನು ಡೌನ್‌ಲೋಡ್ ಮಾಡುವಲ್ಲಿ ತೊಂದರೆ ಎದುರಿಸಿದರೆ, 011-40759000 ಅನ್ನು ಸಂಪರ್ಕಿಸಬಹುದು ಅಥವಾ ಇಮೇಲ್ ugcnet@nta.ac.in ಮೂಲಕ ಪರಿಹಾರ ಕಂಡುಕೊಳ್ಳಬಹುದು. ಅಭ್ಯರ್ಥಿಗಳು ಇತ್ತೀಚಿನ ಅಪ್‌ಡೇಟ್‌ಗಳಿಗಾಗಿ NTA ವೆಬ್‌ಸೈಟ್ www.nta.ac.in ಮತ್ತು https://ugcnet.nta.ac.in// ಗೆ ಭೇಟಿ ನೀಡುವಂತೆ ಸೂಚಿಸಲಾಗಿದೆ .


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.