ಅಂಚೆ ಚೀಟಿ ಸಂಗ್ರಹಿಸಿ, ವಿದ್ಯಾರ್ಥಿವೇತನ ನಿಮ್ಮದಾಗಿಸಿಕೊಳ್ಳಿ...!
ಅಂಚೆ ಇಲಾಖೆಯು ಶಾಲಾ ಮಕ್ಕಳಲ್ಲಿ ಅಂಚೆ ಚೀಟಿ ಸಂಗ್ರಹಣೆ ಉತ್ತೇಜಿಸಲು “ದೀನ್ ದಯಾಳ್ ಸ್ಪರ್ಶ್ ಯೋಜನೆ” ಯಡಿ ಸ್ಕಾಲರ್‍ಶಿಪ್‍ಗಾಗಿ 6 ರಿಂದ 9 ನೇ ತರಗತಿ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಬೆಂಗಳೂರು: ಅಂಚೆ ಇಲಾಖೆಯು ಶಾಲಾ ಮಕ್ಕಳಲ್ಲಿ ಅಂಚೆ ಚೀಟಿ ಸಂಗ್ರಹಣೆ ಉತ್ತೇಜಿಸಲು “ದೀನ್ ದಯಾಳ್ ಸ್ಪರ್ಶ್ ಯೋಜನೆ” ಯಡಿ ಸ್ಕಾಲರ್‍ಶಿಪ್‍ಗಾಗಿ 6 ರಿಂದ 9 ನೇ ತರಗತಿ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ವಿದ್ಯಾರ್ಥಿಗಲ್ಲಿ ಹವ್ಯಾಸವಾಗಿ ಅಂಚೆ ಚೀಟಿಗಳಲ್ಲಿ ಆಪ್ಟಿಟ್ಯೂಡ್ ಮತ್ತು ಸಂಶೋಧನೆ ಪ್ರೋತ್ಸಾಹಿಸಲು ಸ್ಕಾಲರ್‍ಶಿಪ್ ನೀಡಲಾಗುತ್ತಿದೆ. 2021-22 ನೇ ಶೈಕ್ಷಣಿಕ ವರ್ಷದಲ್ಲಿ ಶೇ.60 ರಷ್ಟು ಅಂಕಗಳನ್ನು ಗಳಿಸಿ ಉತ್ತೀರ್ಣರಾಗಿರುವ 6 ರಿಂದ 9 ನೇ ತರಗತಿ ವಿದ್ಯಾರ್ಥಿಗಳು ಹಾಗೂ ಅಂಚೆ ಚೀಟಿ ಸಂಗ್ರಹಣೆ ಖಾತೆ ಅಥವಾ ಫಿಲಾಟೆಲಿಕ್ ಕ್ಲಬ್ ಸದಸ್ಯತ್ವ ಹೊಂದಿರುವವರಿಗೆ ವಾರ್ಷಿಕ 6 ಸಾವಿರ ರೂ ವಿದ್ಯಾರ್ಥಿವೇತನ ನೀಡಲಾಗುವುದು.
ಇದನ್ನೂ ಓದಿ : IB Recruitment 2022 : ಗುಪ್ತಚರ ಇಲಾಖೆಯಲ್ಲಿ 766 ಹುದ್ದೆಗಳಿಗೆ ಅರ್ಜಿ : ಹೆಚ್ಚಿನ ಮಾಹಿತಿಗೆ ಇಲ್ಲಿ ನೋಡಿ!
ಲಿಖಿತ ರಸಪ್ರಶ್ನೆ ಮೂಲಕ ಅಭ್ಯರ್ಥಿಗಳನ್ನು ಆಯ್ಕೆಮಾಡಲಾಗುವುದು.ಅರ್ಜಿ ಸಲ್ಲಿಸಲು ಸೆಪ್ಟಂಬರ್ 7 ಕೊನೆಯ ದಿನವಾಗಿದೆ.
ಹೆಚ್ಚಿನ ವಿವರಗಳಿಗೆ www.indiapost.gov.in ಅಥವಾ www.karnatakapost.gov.in ವೆಬ್‍ಸೈಟ್‍ಗಳಿಗೆ ಭೇಟಿ ನೀಡಬಹುದು ಎಂದು ಪ್ರಕಟಣೆ ತಿಳಿಸಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.