ಧಾರವಾಡದಲ್ಲಿ ಅಗಸ್ಟ್ 13 ಹಾಗೂ 14 ರಂದು ವಿಶ್ವದ ಬೃಹತ್ ಯೋಗಾಥಾನ್

ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಆಗಸ್ಟ್ 13 ಹಾಗೂ 14 ರಂದು ಬೃಹತ್ ಯೋಗಾಥಾನ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಗಿನ್ನೆಸ್ ಹಾಗೂ ವಿಶ್ವ ದಾಖಲೆ ನಿರ್ಮಾಣಕ್ಕಾಗಿ ರಾಜ್ಯದಾದ್ಯಂತ ಏಕಕಾಲಕ್ಕೆ ಯೋಗಾಭ್ಯಾಸ ನಡೆಯಲಿದೆ.

Written by - Zee Kannada News Desk | Last Updated : Jul 7, 2022, 10:49 PM IST
  • ಗಿನ್ನೆಸ್ ಹಾಗೂ ವಿಶ್ವ ದಾಖಲೆ ನಿರ್ಮಾಣಕ್ಕಾಗಿ ರಾಜ್ಯದಾದ್ಯಂತ ಏಕಕಾಲಕ್ಕೆ ಯೋಗಾಭ್ಯಾಸ ನಡೆಯಲಿದೆ.
ಧಾರವಾಡದಲ್ಲಿ ಅಗಸ್ಟ್ 13 ಹಾಗೂ 14 ರಂದು ವಿಶ್ವದ ಬೃಹತ್ ಯೋಗಾಥಾನ್  title=
ಸಾಂದರ್ಭಿಕ ಚಿತ್ರ

ಧಾರವಾಡ : ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಆಗಸ್ಟ್ 13 ಹಾಗೂ 14 ರಂದು ಬೃಹತ್ ಯೋಗಾಥಾನ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಗಿನ್ನೆಸ್ ಹಾಗೂ ವಿಶ್ವ ದಾಖಲೆ ನಿರ್ಮಾಣಕ್ಕಾಗಿ ರಾಜ್ಯದಾದ್ಯಂತ ಏಕಕಾಲಕ್ಕೆ ಯೋಗಾಭ್ಯಾಸ ನಡೆಯಲಿದೆ.

ಧಾರವಾಡದಲ್ಲಿಯೂ 20 ಸಾವಿರ ಯೋಗಾಸಕ್ತರನ್ನು ಸೇರಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ಹೇಳಿದರು.ಆರ್.ಎನ್.ಶೆಟ್ಟಿ ಕ್ರೀಡಾಂಗಣದಲ್ಲಿ ಇಂದು ಸಂಜೆ ನಡೆದ ಯೋಗಾಥಾನ್ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಇದನ್ನೂ ಓದಿ : Railway Recruitment 2022 : SSLC ಪಾಸಾದವರಿಗೆ ಸಿಹಿ ಸುದ್ದಿ : ರೈಲ್ವೆಯಲ್ಲಿ 1600 ಕ್ಕೂ ಹೆಚ್ಚು ಖಾಲಿ ಹುದ್ದೆಗಳಿಗೆ ಅರ್ಜಿ!

ಜಿಲ್ಲಾಡಳಿತ, ಜಿಲ್ಲಾಪಂಚಾಯತ, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಆಯುಶ್ ಇಲಾಖೆ, ಆಯುಶ್ ಟಿವಿ, ನೆಹರು ಯುವ ಕೇಂದ್ರ ಎನ್.ಎಸ್.ಎಸ್.ಪತಂಜಲಿ ಯೋಗ ಕೇಂದ್ರ ಹಾಗೂ ಇನ್ನಿತರ ಯೋಗ ಸಂಸ್ಥೆಗಳ ಸಹಯೋಗದಲ್ಲಿ ಬೃಹತ್ ಯೋಗಾಥಾನ್ ಕಾರ್ಯಕ್ರಮವನ್ನು ಆಗಸ್ಟ್ 14 ರಂದು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಅಥವಾ ಕರ್ನಾಟಕ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗುವುದು. ಈ ಕಾರ್ಯಕ್ರಮಕ್ಕೆ ಸರ್ಕಾರ ಎಲ್ಲಾ ಸಹಕಾರ ನೀಡುತ್ತಿದೆ. ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಯೋಗ ತರಬೇತಿ ಸಂಸ್ಥೆಗಳಿವೆ,ಎಲ್ಲಾ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು. ಆಯುμï ವೈದ್ಯಕೀಯ ವಿದ್ಯಾರ್ಥಿಗಳು, ಎನ್.ಎಸ್.ಎಸ್.ಸ್ವಯಂ ಸೇವಕರು, ಆಸಕ್ತ ಸಾರ್ವಜನಿಕರು ಹೆಚ್ಚು ಸಂಖ್ಯೆಯಲ್ಲಿ ಯೋಗಾಥಾನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಗಿನ್ನೆಸ್ ಹಾಗೂ ವಿಶ್ವದಾಖಲೆ ನಿರ್ಮಾಣದ ಬೃಹತ್ ಕಾರ್ಯದ ಪಾಲುದಾರರಾಗಬೇಕು ಎಂದರು.

ಇದನ್ನೂ ಓದಿ : IB Recruitment 2022 : ಗುಪ್ತಚರ ಇಲಾಖೆಯಲ್ಲಿ 766 ಹುದ್ದೆಗಳಿಗೆ ಅರ್ಜಿ : ಹೆಚ್ಚಿನ ಮಾಹಿತಿಗೆ ಇಲ್ಲಿ ನೋಡಿ!

ಆಯುμï ಟಿವಿಯ ಶ್ರೀನಿವಾಸಮೂರ್ತಿ ಮಾತನಾಡಿ, ಯೋಗಾಥಾನ್ 2022 ಗಿನ್ನೆಸ್ ಹಾಗೂ ವಿಶ್ವದಾಖಲೆ ಸೃಷ್ಟಿಸಲು ರಾಜ್ಯದಾದ್ಯಂತ ಏಕಕಾಲದಲ್ಲಿ ಯೋಗಾಭ್ಯಾಸ ಆಯೋಜಿಸಲಾಗುತ್ತಿದೆ. ಧಾರವಾಡದಲ್ಲಿ ಅಗಸ್ಟ್ 13 ಹಾಗೂ 14 ರಂದು ಸುಮಾರು 20 ಸಾವಿರ ಯೋಗಾಸಕ್ತರನ್ನು ಒಂದೆಡೆ ಸೇರಿಸಿ ಯೋಗಾಥಾನ್ ಹಮ್ಮಿಕೊಳ್ಳಲಾಗುತ್ತಿದೆ. ಪ್ರತಿ 50 ಜನರಿಗೆ ಒಬ್ಬರಂತೆ ನಾಯಕರನ್ನು ನೇಮಿಸಲಾಗುತ್ತದೆ.ದಾಖಲೆ ನಿರ್ಮಿಸಲು ನಡೆಯುತ್ತಿರುವ ಈ ಯೋಗಾಥಾನ್‍ನಲ್ಲಿ ಭಾಗವಹಿಸಲು ಕುಶಲಕೋಶ ಮೊಬೈಲ್ ಆ್ಯಪ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು. ಯೋಗ ಸಂಸ್ಥೆಗಳು ಅಥವಾ ವೈಯಕ್ತಿಕವಾಗಿಯೂ ಆಸಕ್ತರು ಭಾಗವಹಿಸಿ, ಗಿನ್ನೆಸ್ ಬುಕ್ ಆಫ್ ರೆಕಾಡ್ರ್ಸ್ ಸಂಸ್ಥೆಯ ಸೂಚನೆಯಂತೆ ಯೋಗಾಸಕ್ತರು ಸಮಯಪಾಲನೆ, ಆವರಣಕ್ಕೆ ಪ್ರವೇಶಿಸುವ ಹಾಗೂ ಹೊರಗಡೆ ತೆರಳುವ ಎರಡೂ ಮಾರ್ಗಗಳಲ್ಲಿ ಪಾಲ್ಗೊಂಡವರ ನೋಂದಣಿ, ಪರಿಶೀಲನೆ ನಡೆಯುತ್ತದೆ. ಭಾಗವಹಿಸಿದವರ ಸಂಖ್ಯೆಯನ್ನು ನಿಖರವಾಗಿ ದಾಖಲಿಸಿಕೊಳ್ಳಲು ಈ ಕ್ರಮವಹಿಸಲಾಗುತ್ತಿದೆ.ಯೋಗಾಭ್ಯಾಸದ ದಿನಗಳು ಹಾಗೂ ಯೋಗಾಥಾನ್ ದಿನದಂದು ಸಾರಿಗೆ ವ್ಯವಸ್ಥೆ, ಸ್ವಯಂ ಸೇವಕರು ಮತ್ತಿತರ ಅಗತ್ಯಗಳ ಪೂರ್ವಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ ಎಂದರು.

ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಪ್ರಕಾಶ ಸರಶೆಟ್ಟಿ, ಕವಿವಿ ಎನ್‍ಎಸ್‍ಎಸ್ ಅಧಿಕಾರಿ ಡಾ.ಎಂ.ಬಿ.ದಳಪತಿ, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ ಡೊಳ್ಳಿನ ಸೇರಿದಂತೆ ವಿವಿಧ ಯೋಗ ಸಂಸ್ಥೆಗಳ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News