ಅಂಗನವಾಡಿ ಸಹಾಯಕಿಯರ ಹುದ್ದೆಗೆ ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ದಿ ಯೋಜನೆ ಹುಬ್ಬಳ್ಳಿ-ಧಾರವಾಡ ಶಹರ ಯೋಜನಾ ವ್ಯಾಪ್ತಿಯಲ್ಲಿ ಖಾಲಿ ಇರುವ 113 ಅಂಗನವಾಡಿ ಸಹಾಯಕಿಯರ ಹುದ್ದೆಗೆ ಸ್ಥಳೀಯ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಧಾರವಾಡ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ದಿ ಯೋಜನೆ ಹುಬ್ಬಳ್ಳಿ-ಧಾರವಾಡ ಶಹರ ಯೋಜನಾ ವ್ಯಾಪ್ತಿಯಲ್ಲಿ ಖಾಲಿ ಇರುವ 113 ಅಂಗನವಾಡಿ ಸಹಾಯಕಿಯರ ಹುದ್ದೆಗೆ ಸ್ಥಳೀಯ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಇದನ್ನೂ ಓದಿ: ಶೀಘ್ರ ತೆರೆಗೆ ಚಿರಂಜೀವಿ ಸರ್ಜಾರ 'ರಾಜಮಾರ್ತಂಡ': ತಮ್ಮನ ಹುಟ್ಟುಹಬ್ಬಕ್ಕೆ ಅಣ್ಣನ ಚಿತ್ರ ಉಡುಗೊರೆ
ಉಪ ಆಯುಕ್ತರು (ಕಂದಾಯ) ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಹುಬ್ಬಳ್ಳಿ ಇವರು ಹುಬ್ಬಳ್ಳಿ ಶಹರದ ಶಟಿಗೆಮ್ಮನಗುಡಿ ಅಂಗನವಾಡಿ ಕೇಂದ್ರದ ಕಂದಾಯ ವಾರ್ಡ್ ಸಂಖ್ಯೆಯು 41 ಇದ್ದು, ನಜರ ಚೂಕಿನಿಂದ 42 ಎಂದು ತಪ್ಪಾಗಿರುತ್ತದೆ ಎಂದು ತಿಳಿಸಿರುತ್ತಾರೆ. ಶಟಿಗೆಮ್ಮನಗುಡಿ ಅಂಗನವಾಡಿ ಕೇಂದ್ರಕ್ಕೆ 15 ದಿನಗಳ ಹೆಚ್ಚಿನ ಕಾಲಾವಕಾಶವನ್ನು ನಿಗದಿಪಡಿಸಿ ಆಗಸ್ಟ್ 29 ರಿಂದ ಅಕ್ಟೋಬರ್ 13 ರ ಸಾಯಂಕಾಲ 5-30 ಗಂಟೆ ಒಳಗಾಗಿ ಅರ್ಜಿಗಳನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ ಹುಬ್ಬಳ್ಳಿ-ಧಾರವಾಡ (ಶಹರ) ಈ ಕಛೇರಿಗೆ ಸಲ್ಲಿಸುವುದು.
ಇದನ್ನೂ ಓದಿ: OMG: 45ಕ್ಕೂ ಹೆಚ್ಚು ಮಹಿಳೆಯರ ರೇಪ್ ಮಾಡಿದ್ದ ಕಾಮುಕ ಪ್ರಿನ್ಸಿಪಾಲ್ ಬಂಧನ!
ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ ಹುಬ್ಬಳ್ಳಿ-ಧಾರವಾಡ (ಶಹರ) ಲೋಕೂರ ಬಿಲ್ಡಿಂಗ್, ಹಿಂದಿ ಪ್ರಚಾರ ಸಭಾ ಹತ್ತಿರ ಧಾರವಾಡ ದೂರವಾಣಿ ಸಂಖ್ಯೆ:0836-2440733ಕ್ಕೆ ಸಂಪರ್ಕಿಸಬಹುದು ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.