IBPS Recruitment 2024: ನೀವೂ ಕೂಡ ಸರ್ಕಾರಿ ನೌಕರಿಯನ್ನು ಮಾಡಲು ಬಯೌತ್ತಿದ್ದರ್, ನಿಮಗೆ ಉತ್ತಮ ಅವಕಾಶಗಳಿವೆ. ವಿಶೇಷವೆಂದರೆ, ಈ ನೇಮಕಾತಿಗಳಿಗೆ ನಿಗದಿತ ವಿದ್ಯಾರ್ಹತೆ ಇದ್ದರೆ, ನೀವು ವರ್ಷಕ್ಕೆ 50 ಲಕ್ಷ ರೂಪಾಯಿಗಳ ಪ್ಯಾಕೇಜ್‌ನೊಂದಿಗೆ ಉದ್ಯೋಗವನ್ನೂ ಪಡೆಯಬಹುದು. ಇನ್‌ಸ್ಟಿಟ್ಯೂಟ್ ಆಫ್ ಪರ್ಸನಲ್ ಸೆಲೆಕ್ಷನ್ (IBPS) ಪ್ರೊಫೆಸರ್, ಅಸಿಸ್ಟೆಂಟ್ ಜನರಲ್ ಮ್ಯಾನೇಜರ್, ರಿಸರ್ಚ್ ಅಸೋಸಿಯೇಟ್, ಹಿಂದಿ ಆಫೀಸರ್, ಡೆಪ್ಯುಟಿ ಮ್ಯಾನೇಜರ್ ಅಕೌಂಟ್ ಮತ್ತು ಅನಾಲಿಸ್ಟ್ ಪ್ರೋಗ್ರಾಮರ್‌ಗಳ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಈ ಹುದ್ದೆಗಳಿಗೆ 12 ಏಪ್ರಿಲ್ 2024 ರವರೆಗೆ ಅರ್ಜಿಗಳನ್ನು ಸಲ್ಲಿಸಬಹುದು. (Career News In Kannada ).


COMMERCIAL BREAK
SCROLL TO CONTINUE READING

IBPS Recruitment Apply Online: ಯಾರು ಅರ್ಜಿ ಸಲ್ಲಿಸಬಹುದು?
ಇನ್‌ಸ್ಟಿಟ್ಯೂಟ್ ಆಫ್ ಪರ್ಸನಲ್ ಸೆಲೆಕ್ಷನ್‌ನ ಈ ನೇಮಕಾತಿಗಳಿಗೆ ಕೆಲವು ವಿದ್ಯಾರ್ಹತೆಗಳನ್ನು ನಿಗದಿಪಡಿಸಲಾಗಿದೆ, ಈ ಅರ್ಹತೆಗಳು ಮತ್ತು ಅನುಭವ ಹೊಂದಿರುವವರು ಮಾತ್ರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗಲಿದೆ (govt job govt job with 50 laksh salary no exam direct selection).


IBPS ನೇಮಕಾತಿ ಅರ್ಹತೆ ಮತ್ತು ವಯಸ್ಸಿನ ಮಿತಿ (IBPS Recruitment Eligibillity And Age)
 ಪ್ರೊಫೆಸರ್: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಶೇಕಡಾ 55 ಅಂಕಗಳೊಂದಿಗೆ ಪಿಎಚ್‌ಡಿ ಉತ್ತೀರ್ಣರಾಗಿರಬೇಕು. ಇದರೊಂದಿಗೆ 12 ವರ್ಷಗಳ ಕೆಲಸದ ಅನುಭವವೂ ಇರಬೇಕು. 47 ರಿಂದ 55 ವರ್ಷದೊಳಗಿನ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗೆ ಆಯ್ಕೆಯಾದ ನಂತರ, ನೀವು ಪ್ರತಿ ತಿಂಗಳು 2 ಲಕ್ಷದ 92 ಸಾವಿರದ 407 ವೇತನವನ್ನು ಪಡೆಯುವಿರಿ, ಆದರೆ ವಾರ್ಷಿಕ ಪ್ಯಾಕೇಜ್ 50 ಲಕ್ಷ 10 ಸಾವಿರದ 552 ನಿಗದಿಪಡಿಸಲಾಗಿದೆ.


IBPS ಸಹಾಯಕ ಜನರಲ್ ಮ್ಯಾನೇಜರ್ ಹುದ್ದೆಗಳು: ಸಹಾಯಕ ಜನರಲ್ ಮ್ಯಾನೇಜರ್ (ಮಾಹಿತಿ ತಂತ್ರಜ್ಞಾನ): ಇದಕ್ಕಾಗಿ ಅಭ್ಯರ್ಥಿಯು ಎಲೆಕ್ಟ್ರಾನಿಕ್ಸ್ / ಎಲೆಕ್ಟ್ರಿಕಲ್ ಮತ್ತು ಟೆಲಿಕಮ್ಯುನಿಕೇಶನ್ / ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ / ಕಂಪ್ಯೂಟರ್ ಸೈನ್ಸ್ ಇತ್ಯಾದಿಗಳಲ್ಲಿ ಬ್ಯಾಚುಲರ್ ಅಥವಾ ಮಾಸ್ಟರ್ ಪದವಿಯನ್ನು ಹೊಂದಿರಬೇಕು. ಇದಲ್ಲದೆ, ಸಂಬಂಧಿತ ಕ್ಷೇತ್ರದಲ್ಲಿ ಹತ್ತು ವರ್ಷಗಳ ಅನುಭವ ಇರಬೇಕು. 35 ರಿಂದ 50 ವರ್ಷದೊಳಗಿನ ಯಾವುದೇ ಅಭ್ಯರ್ಥಿಯು ಇದಕ್ಕೆ ಅರ್ಜಿ ಸಲ್ಲಿಸಬಹುದು. ಆಯ್ಕೆಯಾದ ಅಭ್ಯರ್ಥಿಯು ವಾರ್ಷಿಕವಾಗಿ 34 ಲಕ್ಷದ 69 ಸಾವಿರದ 762 ಮತ್ತು ಪ್ರತಿ ತಿಂಗಳು 1 ಲಕ್ಷದ 90 ಸಾವಿರದ 455 ವೇತನವನ್ನು ಪಡೆಯಲಿದ್ದಾರೆ.


ರಿಸರ್ಚ್ ಅಸೋಸಿಯೇಟ್ ಹುದ್ದೆಗಳು: ರಿಸರ್ಚ್ ಅಸೋಸಿಯೇಟ್ ಹುದ್ದೆಗಾಗಿ  ಸೈಕಾಲಜಿ / ಎಜುಕೇಶನ್ / ಸೈಕಾಲಜಿ ಮೆಷರ್‌ಮೆಂಟ್ / ಮ್ಯಾನೇಜ್‌ಮೆಂಟ್ ಇನ್ ಸ್ಟ್ರಾಟೆಜಿಕ್ ಎಚ್‌ಆರ್ ಇತ್ಯಾದಿ ವಿಷಯಗಳಲ್ಲಿ ಶೇಕಡಾ 55 ಅಂಕಗಳೊಂದಿಗೆ ಸ್ನಾತಕೋತ್ತರ ಪದವಿಯನ್ನು ಹೊಂದಿರುವುದು ಅವಶ್ಯಕವಾಗಿದೆ. ಅಲ್ಲದೆ, ಕನಿಷ್ಠ ಒಂದು ವರ್ಷದ ಅನುಭವವನ್ನು ಹೊಂದಿರಬೇಕು. ವಯೋಮಿತಿಯನ್ನು 23 ರಿಂದ 30 ವರ್ಷಕ್ಕೆ ನಿಗದಿಪಡಿಸಲಾಗಿದೆ. ಈ ಹುದ್ದೆಗೆ ವಾರ್ಷಿಕ ಪ್ಯಾಕೇಜ್ 16 ಲಕ್ಷ 34 ಸಾವಿರದ 271 ರೂ.ಆಗಿದೆ


ಹಿಂದಿ ಅಧಿಕಾರಿ ಹುದ್ದೆಗಳು: ಹಿಂದಿ ಅಧಿಕಾರಿ ಹುದ್ದೆಗೆ ಅಭ್ಯರ್ಥಿಯು ಹಿಂದಿ ಮತ್ತು ಇಂಗ್ಲಿಷ್ ವಿಷಯಗಳಲ್ಲಿ ಸ್ನಾತಕೋತ್ತರ ಪದವೀಧರರಾಗಿರಬೇಕು. ಅಲ್ಲದೆ, ಅನುವಾದ ಕಾರ್ಯದಲ್ಲಿ ಒಂದು ವರ್ಷದ ಅನುಭವ ಇರಬೇಕು. ಇದಕ್ಕಾಗಿ ಕನಿಷ್ಠ ವಯೋಮಿತಿ 23 ವರ್ಷ ಹಾಗೂ ಗರಿಷ್ಠ 30 ವರ್ಷ ಎಂದು ನಿಗದಿಪಡಿಸಲಾಗಿದೆ. ಇದರ ವಾರ್ಷಿಕ ಪ್ಯಾಕೇಜ್ ಕೂಡ 16 ಲಕ್ಷ 34 ಸಾವಿರದ 271 ರೂ. ಆಗಿದೆ.


ಅನಲಿಸ್ಟ್ ಪ್ರೋಗ್ರಾಮರ್ ಹುದ್ದೆ:  ವಿಶ್ಲೇಷಕ ಪ್ರೋಗ್ರಾಮರ್‌ಗಳ ಹುದ್ದೆಗಳಿಗೆ ಅಭ್ಯರ್ಥಿಯು ಕಂಪ್ಯೂಟರ್ ಸೈನ್ಸ್ ಅಥವಾ ಕಂಪ್ಯೂಟರ್ ಇಂಜಿನಿಯರಿಂಗ್‌ನಲ್ಲಿ B.Tech ಅಥವಾ BE MCA/MSc (IT) ಪದವಿಯನ್ನು ಹೊಂದಿರಬೇಕು. 23 ರಿಂದ 30 ವರ್ಷದೊಳಗಿನ ಅಭ್ಯರ್ಥಿಗಳು ಸಹ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗೆ ವಾರ್ಷಿಕ ಪ್ಯಾಕೇಜ್ 13 ಲಕ್ಷ 21 ಸಾವಿರದ 120 ರೂ.ಗಳಾಗಿದೆ


 ಅಧಿಸೂಚನೆಗೆ ಇಲ್ಲಿ ಭೇಟಿ ನೀಡಿ 
ಆಯ್ಕೆ ಪ್ರಕ್ರಿಯೆ?

ಅಭ್ಯರ್ಥಿಗಳು ಪ್ರೊಫೆಸರ್ ಮತ್ತು ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಹುದ್ದೆಗೆ ಯಾವುದೇ ಲಿಖಿತ ಪರೀಕ್ಷೆಗೆ ಹಾಜರಾಗಬೇಕಾಗಿಲ್ಲ. ಪ್ರೊಫೆಸರ್ ಹುದ್ದೆಯ ಆಯ್ಕೆಗಾಗಿ ಪ್ರೆಸೆಂಟೇಷನ್/ಗ್ರೂಪ್ ಡಿಸ್ಕಷನ್ ಮತ್ತು ಇಂಟರ್ವ್ಯೂ  ಇರಲಿದೆ.  ಆದರೆ ಸಹಾಯಕ ಜನರಲ್ ಮ್ಯಾನೇಜರ್‌ಗೆ ಗ್ರೂಪ್ ಡಿಸ್ಕಷನ್ ಮತ್ತು ಪರ್ಸನಲ್ ಇಂಟರ್ವ್ಯೂ ಮಾತ್ರ ಇರುತ್ತದೆ. ರಿಸರ್ಚ್ ಅಸೋಸಿಯೇಟ್/ ಹಿಂದಿ ಆಫೀಸರ್/ ಡೆಪ್ಯೂಟಿ ಮ್ಯಾನೇಜರ್ ಅಕೌಂಟ್ಸ್/ ಅನಾಲಿಸ್ಟ್ ಪ್ರೋಗ್ರಾಮರ್ಸ್ ಇತ್ಯಾದಿಗಳ ಆಯ್ಕೆಗಾಗಿ ಅಭ್ಯರ್ಥಿಗಳು ಆನ್‌ಲೈನ್ ಪರೀಕ್ಷೆ, ಸ್ಕಿಲ್ಲ್ ಟೆಸ್ಟ್ ಮತ್ತು ಇಂಟರ್ವ್ಯೂಗೆ ಹಾಜರಾಗಬೇಕು.