Husband Excise DC Wife SP: ಚಾಮರಾಜನಗರ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ (Superintendent of Police) ಡಾ.ಬಿ.ಟಿ.ಕವಿತಾ ಅಧಿಕಾರ ಅವರಿಂದು ಸ್ವೀಕರಿಸಿದರು. ವಿಶೇಷವೆಂದರೆ ಇವರ ಪತಿ ಚಾಮರಾಜನಗರ ಅಬಕಾರಿ ಇಲಾಖೆ ಉಪ ಆಯುಕ್ತರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 


COMMERCIAL BREAK
SCROLL TO CONTINUE READING

ಚಾಮರಾಜನಗರದಲ್ಲಿ ಎಸ್‌ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪದ್ಮಿನಿ ಸಾಹು ಅವರನ್ನು ಬೆಂಗಳೂರಿಗೆ ವರ್ಗ ಮಾಡಲಾಗಿದ್ದು,  ಅವರ ಸ್ಥಾನಕ್ಕೆ ಈಗ  ಡಾ.ಬಿ.ಟಿ.ಕವಿತಾ ಅವರನ್ನು ನಿಯೋಜಿಸಲಾಗಿದೆ. ಕವಿತಾ ಅವರು ನಾಗರಿಕ ಹಕ್ಕು ನಿರ್ದೇಶನಾಲಯದ ಎಸ್‌ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.


ಇದನ್ನೂ ಓದಿ- Indian Navy Jobs: 10ನೇ ತರಗತಿ ಪಾಸ್ ಅಗಿದ್ಯಾ? ಭಾರತೀಯ ನೌಕಾಪಡೆಯಲ್ಲಿ ನೌಕರಿ ಪಡೆಯುವ ವಿಧಾನ ಇಲ್ಲಿದೆ


2016ರ ಕರ್ನಾಟಕ ಕೇಡರ್ ನ ಅಧಿಕಾರಿಯಾಗಿರುವ ಕವಿತಾ ಅವರು ಬುಧವಾರ (ಜುಲೈ 03) ಮಧ್ಯಾಹ್ನ ಚಾಮರಾಜನಗರ ಎಎಸ್‌ಪಿ ಉದೇಶ್ ಅವರಿಂದ ಚಾಮರಾಜನಗರ ಎಸ್‌ಪಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ‌.  


ಇದನ್ನೂ ಓದಿ- Sarkari Naukri: ಎನ್‌ಸಿ‌ಇಆರ್‌ಟಿಯಲ್ಲಿ ಪರೀಕ್ಷೆಯಿಲ್ಲದೆ ಸಿಗುತ್ತೆ ಸರ್ಕಾರಿ ಉದ್ಯೋಗ


ಪತಿ ನಾಗಶಯನ ಅಬಕಾರಿ ಇಲಾಖೆ ಉಪ ಆಯುಕ್ತರಾಗಿದ್ದರೇ ಪತ್ನಿ ಈಗ ಚಾಮರಾಜನಗರ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದಾರೆ.  ಪತ್ನಿ ಅಧಿಕಾರ ಸ್ವೀಕಾರದಂದು ಪತಿಯೂ ಹಾಜರಾಗಿ ಶುಭ ಕೋರಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.