Indian Navy Jobs: ನೀವು ಹತ್ತನೇ ತರಗತಿ ಉತ್ತೀರ್ಣರಾಗಿದ್ದು ಸರ್ಕಾರಿ ನೌಕರಿಗಾಗಿ ಪ್ರಯತ್ನಿಸುತ್ತಿದ್ದರೆ ಭಾರತೀಯ ನೌಕಾಪಡೆಯಲ್ಲಿ ಉದ್ಯೋಗ ಪಡೆಯಬಹುದು. ನಿಮಗೂ ಈ ಬಗ್ಗೆ ಆಸಕ್ತಿ ಇದ್ದರೆ, 10ನೇ ತರಗತಿ ಉತ್ತೀರ್ಣರಾದ ಬಳಿಕ ಭಾರತೀಯ ನೌಕಾಪಡೆಯಲ್ಲಿ ಉದ್ಯೋಗ ಪಡೆಯುವ ಮಾರ್ಗಗಳ ಬಗ್ಗೆ ತಿಳಿಯೋಣ...
ವಾಸ್ತವವಾಗಿ, 10ನೇ ತರಗತಿ ಉತ್ತೀರ್ಣರಾದ (Tenth Pass) ಬಳಿಕ ಭಾರತೀಯ ನೌಕಾಪಡೆಯಲ್ಲಿ ಉದ್ಯೋಗ ಪಡೆಯುವ ಅವಕಾಶಗಳ ಬಗ್ಗೆ ನಮ್ಮಲ್ಲಿ ಹಲವರಿಗೆ ತಿಳಿದಿಲ್ಲ. ಭಾರತೀಯ ನೌಕಾಪಡೆಯು ಪ್ರತಿ ವರ್ಷ ಎರಡು ಬಾರಿ, (ಜೂನ್ ಅಥವಾ ಜುಲೈ ಮತ್ತು ನವೆಂಬರ್ ಅಥವಾ ಡಿಸೆಂಬರ್ ತಿಂಗಳುಗಳಲ್ಲಿ) MR (ಮೆಟ್ರಿಕ್ ನೇಮಕಾತಿ) ಗಾಗಿ ನಾವಿಕರಾಗಿ ದಾಖಲಾಗಲು ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗುತ್ತದೆ.
10ನೇ ತರಗತಿ ಪಾಸ್ ಆದವರಿಗೆ ಭಾರತೀಯ ನೌಕಾಪಡೆಯ ಮೂರು ವಿಭಾಗಗಳಲ್ಲಿ ಉದ್ಯೋಗಾವಕಾಶ:
ಹತ್ತನೇ ತರಗತಿ ಉತ್ತೀರ್ಣರಾದವರಿಗೆ ಭಾರತೀಯ ನೌಕಾಪಡೆಯಲ್ಲಿ (Indian Navy) ಬಾಣಸಿಗ, ಮೇಲ್ವಿಚಾರಕ, ಸ್ಯಾನಿಟರಿ ಹೈಜೀನಿಸ್ಟ್ ಎಮ ಮೂರು ವಿಭಾಗಗಳಲ್ಲಿ ಉದ್ಯೋಗಾವಕಾಶಗಳು ಲಭ್ಯವಾಗಲಿವೆ.
ಇದನ್ನೂ ಓದಿ- Sarkari Naukri: 10ನೇ ತರಗತಿ ಪಾಸ್ ಆಗಿದ್ದರೆ ರಕ್ಷಣಾ ಸಚಿವಾಲಯದಲ್ಲಿ ಪರೀಕ್ಷೆಯಿಲ್ಲದೆ ಸಿಗುತ್ತೆ ನೌಕರಿ
ಬಾಣಸಿಗ (MR):
ನೌಕಾಪಡೆಯಲ್ಲಿ ಬಾಣಸಿಗ ಹುದ್ದೆಗೆ ನೇಮಕವಾಗಲು ಬಯಸುವ ಅಭ್ಯರ್ಥಿಗಳು ಮೆನುವಿನ ಪ್ರಕಾರ ಆಹಾರವನ್ನು ತಯಾರಿಸಬೇಕಾಗುತ್ತದೆ (ಸಸ್ಯಾಹಾರಿ ಮತ್ತು ಮಾಂಸಾಹಾರಿ ಪದಾರ್ಥಗಳನ್ನು ನಿರ್ವಹಿಸುವುದು ಸೇರಿದಂತೆ), ಮತ್ತು ಪಡಿತರವನ್ನು ನಿರ್ವಹಿಸಬೇಕಾಗುತ್ತದೆ. ಇದರ ಹೊರತಾಗಿ, ಬಾಣಸಿಗ ಹುದ್ದೆಗೆ ಆಯ್ಕೆಯಾಗುವ ಅಭ್ಯರ್ಥಿಗೆ ಬಂದೂಕುಗಳ ತರಬೇತಿಯನ್ನು ಕೂಡ ನೀಡಲಾಗುವುದು ಮತ್ತು ಸಂಸ್ಥೆಯ ಸಮರ್ಥ ನಿರ್ವಹಣೆಗಾಗಿ ಇತರ ಜವಾಬ್ದಾರಿಗಳನ್ನು ನಿಯೋಜಿಸಲಾಗುವುದು.
ಮೇಲ್ವಿಚಾರಕ (MR):
ಮೇಲ್ವಿಚಾರಕ ಹುದ್ದೆಗೆ ಆಯ್ಕೆಯಾದವರು ಅಧಿಕಾರಿಗಳ ಮೆಸ್‌ನಲ್ಲಿ ಆಹಾರವನ್ನು ನೀಡಬೇಕಾಗುತ್ತದೆ, ಮಾಣಿಯಾಗಿ ಕಾರ್ಯನಿರ್ವಹಿಸಬೇಕು. ಇದಲ್ಲದೆ, ಮನೆಗೆಲಸ, ಹಣದ ಲೆಕ್ಕಪತ್ರ ನಿರ್ವಹಣೆ, ಮದ್ಯ ಮತ್ತು ಅಂಗಡಿಗಳ ಲೆಕ್ಕಪತ್ರ ನಿರ್ವಹಣೆ, ಮೆನುಗಳನ್ನು ಸಿದ್ಧಪಡಿಸುವುದು ಇತ್ಯಾದಿ ಕೆಲಸಗಳನ್ನು ನಿರ್ವಹಿಸಬೇಕು. ಇದರ ಹೊರತಾಗಿ, ಬಂದೂಕುಗಳ ತರಬೇತಿಯನ್ನು ನೀಡಲಾಗುವುದು ಮತ್ತು ಸಂಸ್ಥೆಯ ಸುಗಮ ಕಾರ್ಯಾಚರಣೆಯನ್ನು ಖಚಿತಪಡಿಸಿಕೊಳ್ಳಲು ಹೆಚ್ಚುವರಿ ಕಾರ್ಯಗಳನ್ನು ನಿಯೋಜಿಸಲಾಗುವುದು.
ಇದನ್ನೂ ಓದಿ- ಹೆಚ್ಚು ಸಂಭಾವನೆ ಲಭ್ಯವಿರುವ ವಿಶ್ವದ ಟಾಪ್ 8 ಉದ್ಯೋಗಗಳಿವು
ಸ್ಯಾನಿಟರಿ ಹೈಜೀನಿಸ್ಟ್ (MR):
ಭಾರತೀಯ ನೌಕಾಪಡೆಯಲ್ಲಿ ಸ್ಯಾನಿಟರಿ ಹೈಜೀನಿಸ್ಟ್ ಆಗಿ ಆಯ್ಕೆಯಾಗುವ ಅಭ್ಯರ್ಥಿಯು ವಿಶ್ರಾಂತಿ ಕೊಠಡಿಗಳು ಮತ್ತು ಇತರ ಸ್ಥಳಗಳಲ್ಲಿ ಶುಚಿತ್ವವನ್ನು ನಿರ್ವಹಿಸಬೇಕಾಗುತ್ತದೆ. ಇದರ ಹೊರತಾಗಿ, ಅಭ್ಯರ್ಥಿಗೆ ಬಂದೂಕುಗಳ ತರಬೇತಿಯನ್ನು ನೀಡಲಾಗುವುದು ಮತ್ತು ಸಂಸ್ಥೆಯ ಸಮರ್ಥ ನಿರ್ವಹಣೆಗಾಗಿ ಇತರ ಜವಾಬ್ದಾರಿಗಳನ್ನು ಕೂಡ ನಿಯೋಜಿಸಲಾಗುವುದು.
ಪ್ರಮುಖ ಮಾನದಂಡ:
ಭಾರತೀಯ ನೌಕಾಪಡೆಯಲ್ಲಿ ಚೆಫ್, ಮೇಲ್ವಿಚಾರಕ ಮತ್ತು ಸ್ಯಾನಿಟರಿ ಹೈಜೀನಿಸ್ಟ್ ಆಗಿ ಆಯ್ಕೆಯಾಗಲು ಬಯಸುವ ಅಭ್ಯರ್ಥಿಯು ಕೇಂದ್ರ/ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದ ಶೈಕ್ಷಣಿಕ ಮಂಡಳಿಯಿಂದ 10 ನೇ ತರಗತಿ ತೇರ್ಗಡೆ ಆಗಿರಬೇಕು. ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು ದಾಖಲಾತಿ ದಿನದಂದು 17-20 ವರ್ಷಗಳ ನಡುವೆ ಇರಬೇಕು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.