IBPS Recruitment 2023: IBPS ಸ್ಪೆಷಲಿಸ್ಟ್ ಆಫೀಸರ್ ನೇಮಕಾತಿ 2023 ಮೂಲಕ, 1402 ಹುದ್ದೆಗಳಲ್ಲಿ ನೇಮಕಾತಿಗಳನ್ನು ಮಾಡಲಾಗುವುದು. IBPS ಸ್ಪೆಷಲಿಸ್ಟ್ ಆಫೀಸರ್ ನೇಮಕಾತಿ 2023 ಗಾಗಿ ಆನ್‌ಲೈನ್ ಅರ್ಜಿಗಳು 1 ಆಗಸ್ಟ್ 2023 ರಿಂದ ಪ್ರಾರಂಭವಾಗಿದೆ. ಅದೇ ಸಮಯದಲ್ಲಿ, ಆನ್‌ಲೈನ್ ಅಪ್ಲಿಕೇಶನ್‌ ಸಲ್ಲಿಸಲು 21 ಆಗಸ್ಟ್ 2023 ರವರೆಗೆ ಅವಕಾಶ ನೀಡಲಾಗಿದೆ. IBPS ಸ್ಪೆಷಲಿಸ್ಟ್ ಆಫೀಸರ್ ನೇಮಕಾತಿ 2023 ರ ಪೂರ್ವಭಾವಿ ಪರೀಕ್ಷೆಯನ್ನು 30 ಮತ್ತು 31 ಡಿಸೆಂಬರ್ 2023 ರಂದು ನಡೆಸಲಾಗುವುದು. ಇದರ ನಂತರ ಮುಖ್ಯ ಪರೀಕ್ಷೆಯನ್ನು 28 ಜನವರಿ 2024 ರಂದು ನಡೆಸಲಾಗುವುದು.


COMMERCIAL BREAK
SCROLL TO CONTINUE READING

IBPS Recruitment 2023 ಶುಲ್ಕದ ವಿವರಗಳು :


ಸಾಮಾನ್ಯ, OBC ಮತ್ತು EWS ವರ್ಗದ ಅರ್ಜಿ ಶುಲ್ಕವನ್ನು 850 ರೂ. ಎಸ್‌ಸಿ, ಎಸ್‌ಟಿ, ಪಿಡಬ್ಲ್ಯುಡಿ ಅರ್ಜಿ ಶುಲ್ಕವನ್ನು 175 ರೂ. ಹೆಚ್ಚಿನ ಮಾಹಿತಿಯನ್ನು ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ https://ibps.in/ ಗೆ ಭೇಟಿ ನೀಡುವ ಮೂಲಕ ಪರಿಶೀಲಿಸಬಹುದು.


ಇದನ್ನೂ ಓದಿ: ಕೇವಲ 50 ಸಾವಿರ ರೂ. ಹೂಡಿಕೆ ಮಾಡಿ ಈ ಉದ್ಯಮ ಆರಂಭಿಸಿ, ಲಕ್ಷಾಂತರ ರೂಪಾಯಿ ಸಂಪಾದಿಸಿ!


IBPS Recruitment 2023 ವಯೋಮಿತಿ :


IBPS ಸ್ಪೆಷಲಿಸ್ಟ್ ಆಫೀಸರ್ ನೇಮಕಾತಿ 2023 ಕ್ಕೆ ಕನಿಷ್ಠ ವಯಸ್ಸು 18 ವರ್ಷಗಳು ಮತ್ತು ಗರಿಷ್ಠ ವಯಸ್ಸು 30 ವರ್ಷಗಳು. ಈ ನೇಮಕಾತಿಯಲ್ಲಿನ ವಯಸ್ಸನ್ನು 1 ಆಗಸ್ಟ್ 2023 ಅನ್ನು ಆಧಾರವಾಗಿ ಪರಿಗಣಿಸಿ ಲೆಕ್ಕ ಹಾಕಲಾಗುತ್ತದೆ. ಇದಲ್ಲದೇ ಒಬಿಸಿ, ಇಡಬ್ಲ್ಯೂಎಸ್, ಎಸ್‌ಸಿ, ಎಸ್‌ಟಿ ಮತ್ತು ಮೀಸಲಾತಿ ವರ್ಗದವರಿಗೆ ಸರ್ಕಾರದ ನಿಯಮಗಳ ಪ್ರಕಾರ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ.


IBPS Recruitment 2023 ಶೈಕ್ಷಣಿಕ ಅರ್ಹತೆ :


ವಿವಿಧ ಹುದ್ದೆಗಳಿಗೆ ನೇಮಕಾತಿಗೆ ಅರ್ಜಿ ಸಲ್ಲಿಸುವ ಅರ್ಹತೆ ವಿಭಿನ್ನವಾಗಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಹೆಚ್ಚಿನ ಮಾಹಿತಿಯನ್ನು ಪರಿಶೀಲಿಸಬಹುದು.


IBPS Recruitment 2023 ಆಯ್ಕೆ ಪ್ರಕ್ರಿಯೆ :


ಅಭ್ಯರ್ಥಿಗಳನ್ನು ಪ್ರಿಲಿಮ್ಸ್, ಮೇನ್ಸ್, ಸಂದರ್ಶನ, ದಾಖಲೆಗಳ ಪರಿಶೀಲನೆ, ವೈದ್ಯಕೀಯ ಪರೀಕ್ಷೆಯ ನಂತರ ಆಯ್ಕೆ ಮಾಡಲಾಗುತ್ತದೆ. ಹೆಚ್ಚಿನ ವಿವರಗಳನ್ನು ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಪರಿಶೀಲಿಸಬಹುದು.


IBPS 2023 SO ನೇಮಕಾತಿಗಾಗಿ ನೀವು ಈ ರೀತಿ ಅರ್ಜಿ ಸಲ್ಲಿಸಬಹುದು :


==> ಎಲ್ಲಾ ಅಭ್ಯರ್ಥಿಗಳು ಮೊದಲು ಅಧಿಕೃತ ವೆಬ್‌ಸೈಟ್‌ಗೆ ಹೋಗಿ.
==> ಅದರ ನಂತರ ಮುಖಪುಟದಲ್ಲಿ ನೇಮಕಾತಿ ಲಿಂಕ್ ಅನ್ನು ಕ್ಲಿಕ್ ಮಾಡಿ.
==> IBPS SO ನೇಮಕಾತಿ 2023 ಅನ್ನು ಕ್ಲಿಕ್ ಮಾಡಿ.
==> ಲಾಗಿನ್ ಐಡಿ ಮತ್ತು ಪಾಸ್‌ವರ್ಡ್ ಅನ್ನು ರಚಿಸುವ ಮೂಲಕ ಫಾರ್ಮ್ ಅನ್ನು ಭರ್ತಿ ಮಾಡಿ.
==> ಅದರ ನಂತರ ಸಂಬಂಧಿತ ದಾಖಲೆಗಳನ್ನು ಅಪ್ಲೋಡ್ ಮಾಡಿ, submit ಕೊಡಿ.
==> ನಂತರ ಅಂತಿಮ submit ಬಟನ್ ಮೇಲೆ ಕ್ಲಿಕ್ ಮಾಡಿ.
==> ಇದರ ನಂತರ ಫಾರ್ಮ್‌ನ ನಕಲನ್ನು ಡೌನ್‌ಲೋಡ್ ಮಾಡಿ ಮತ್ತು ಅದನ್ನು ಇಟ್ಟುಕೊಳ್ಳಿ. 


ಇದನ್ನೂ ಓದಿ: ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾದಾಗ ಕಾಣಿಸಿಕೊಳ್ಳುತ್ತವೆ ಈ ಸಮಸ್ಯೆಗಳು, ಜಾಗ್ರತೆವಹಿಸಿ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.