ಕಲಬುರಗಿ: ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ 2022ರ ಜೂನ್ 3 ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ ನೇರ ಸಂದರ್ಶನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಕಲಬುರಗಿಯ ಪ್ರತಿಷ್ಠಿತ ಅನ್ನಪೂರ್ಣ ಫೈನಾನ್ಸ್ ಕಂಪನಿಯವರು ಈ ನೇರ ಸಂದರ್ಶನ ನಡೆಸುತ್ತಿದ್ದು, ಫಿಲ್ಡ್ ಕ್ರೆಡಿಟ್ ಆಫೀಸರ್ ಹುದ್ದೆಗೆ ಪಿ.ಯು.ಸಿ. ಅಥವಾ ಯಾವುದೇ ಪದವಿ ಪಾಸಾಗಿರಬೇಕು. ವಯೋಮಿತಿ 21 ರಿಂದ 26 ವರ್ಷದೊಳಗಿರಬೇಕು.


ಇದನ್ನೂ ಓದಿ: ಜೂನ್‌ನಲ್ಲಿ OTTಯಲ್ಲಿ ರಿಲೀಸ್‌ ಆಗಲಿರುವ ಸಿನಿಮಾ, ವೆಬ್ ಸಿರೀಸ್ ಲಿಸ್ಟ್ ಇಲ್ಲಿದೆ


ಡೆವಲಪ್‍ಮೆಂಟ್ ಆಫೀಸರ್ ಹುದ್ದೆಗೆ ಪಿ.ಯು.ಸಿ. ಅಥವಾ ಯಾವುದೇ ಪದವಿ ಪಾಸಾಗಿರಬೇಕು.ಮೈಕ್ರೋ ಫೈನಾನ್ಸ್/ ಬ್ಯಾಂಕ್‍ನಲ್ಲಿ ಕನಿಷ್ಠ 1 ವರ್ಷದ ಅನುಭವ ಹೊಂದಿರಬೇಕು. 22 ರಿಂದ 28 ವರ್ಷದೊಳಗಿರಬೇಕು.ಬ್ರ್ಯಾಂಚ್ ಮ್ಯಾನೇಜರ್ ಹುದ್ದೆಗೆ ಪದವಿ ಹಾಗೂ ಮೇಲ್ಪಟ್ಟು ವಿದ್ಯಾರ್ಹತೆ ಹೊಂದಿರಬೇಕು. ಮೈಕ್ರೋ ಫೈನಾನ್ಸ್/ ಬ್ಯಾಂಕ್‍ನಲ್ಲಿ ಕನಿಷ್ಠ 3 ವರ್ಷದ ಅನುಭವ ಮತ್ತು ಬ್ರ್ಯಾಂಚ್ ಮ್ಯಾನೇಜರ್ ಆಗಿ 1 ವರ್ಷದ ಅನುಭವ ಹೊಂದಿರಬೇಕು.ಛತ್ರಪತಿ ಶಿವಾಜಿ ಆಗ್ತಾರಾ ರಾಕಿಂಗ್‌ ಸ್ಟಾರ್‌ ಯಶ್‌! ವೈರಲ್‌ ಆಗ್ತಿರುವ ಪೋಸ್ಟರ್‌ ಅಸಲಿಯತ್ತೇನು?


ವಯೋಮಿತಿ 25 ರಿಂದ 35 ವರ್ಷದೊಳಗಿರಬೇಕು.ಆಸಕ್ತಿಯುಳ್ಳ ಮಹಿಳಾ ಹಾಗೂ ಪುರುಷ ಅಭ್ಯರ್ಥಿಗಳು ತಮ್ಮ (ರೆಸ್ಯೂಮ್) ಬಯೋಡಾಟಾ ಹಾಗೂ ಆಧಾರ್ ಕಾರ್ಡ್‍ದೊಂದಿಗೆ ಮೇಲ್ಕಂಡ ದಿನದಂದು ನಡೆಯುವ ಸಂದರ್ಶನದಲಿ ಭಾಗವಹಿಸಬೇಕು.ಸಂದರ್ಶನದಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಯಾವುದೇ ತರಹದ ಭತ್ಯೆಯನ್ನು ನೀಡಲಾಗುವುದಿಲ್ಲ.


ಹೆಚ್ಚಿನ ಮಾಹಿತಿಗಾಗಿ 08472-274846 ಅಥವಾ ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.