IAF Recruitment 2023: 3,500 ‘ಅಗ್ನಿವೀರ್ ಹುದ್ದೆ’ಗಳ ಭರ್ತಿಗೆ ಅರ್ಜಿ ಆಹ್ವಾನ
IAF Recruitment 2023: ಅವಿವಾಹಿತ ಪುರುಷ & ಮಹಿಳಾ ಅಭ್ಯರ್ಥಿಗಳನ್ನು ನೋಂದಣಿಗೆ ಅರ್ಹರೆಂದು ಪರಿಗಣಿಸಲಾಗುತ್ತದೆ. ಅಭ್ಯರ್ಥಿಗಳು 4 ವರ್ಷಗಳ ‘ಎಂಗೇಜ್‌ಮೆಂಟ್’ ಅವಧಿಯವರೆಗೆ ಮದುವೆಯಾಗದಿರಲು ಬದ್ಧರಾಗಿರಬೇಕು.
ನವದೆಹಲಿ: ಭಾರತೀಯ ವಾಯುಪಡೆಯು 3,500 ಅಗ್ನಿವೀರರ (ಅಗ್ನಿವೀರವಾಯು- IAF Agniveervayu) ನೇಮಕಕ್ಕೆ ಅವಿವಾಹಿತ ಭಾರತೀಯ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಯನ್ನು ಆಹ್ವಾನಿಸಿದೆ. ಅಕ್ಟೋಬರ್ 13ರಿಂದ ಆಯ್ಕೆ ಪರೀಕ್ಷೆ ನಡೆಯಲಿದೆ. ಆನ್‍ಲೈನ್ ನೋಂದಣಿ ಜುಲೈ 27ರಂದು ಪ್ರಾರಂಭವಾಗುತ್ತದೆ ಮತ್ತು ಆಗಸ್ಟ್ 17ರಂದು ಕೊನೆಗೊಳ್ಳುತ್ತದೆ.
ಅರ್ಹತಾ ಮಾನದಂಡಗಳು ಇಂತಿವೆ:
ವಯೋಮಿತಿ: (A) 2003ರ ಜೂನ್ 27 ಮತ್ತು 2006ರ ಡಿಸೆಂಬರ್ 27ರ ನಡುವೆ ಜನಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
(B) ಅಭ್ಯರ್ಥಿಯು ಆಯ್ಕೆ ಪ್ರಕ್ರಿಯೆಯ ಎಲ್ಲಾ ಹಂತಗಳಲ್ಲಿ ತೇರ್ಗಡೆಯಾದರೆ, ದಾಖಲಾತಿಯ ದಿನಾಂಕದಂದು ಅವರ ಗರಿಷ್ಠ ವಯಸ್ಸಿನ ಮಿತಿ 21 ವರ್ಷ ದಾಟಿರಬಾರದು.
ವೈವಾಹಿಕ ಸ್ಥಿತಿ: ಅವಿವಾಹಿತ ಪುರುಷ & ಮಹಿಳಾ ಅಭ್ಯರ್ಥಿಗಳನ್ನು ನೋಂದಣಿಗೆ ಅರ್ಹರೆಂದು ಪರಿಗಣಿಸಲಾಗುತ್ತದೆ. ಅಭ್ಯರ್ಥಿಗಳು 4 ವರ್ಷಗಳ ‘ಎಂಗೇಜ್‌ಮೆಂಟ್’ ಅವಧಿಯವರೆಗೆ ಮದುವೆಯಾಗದಿರಲು ಬದ್ಧರಾಗಿರಬೇಕು. ವಾಯುಪಡೆ ಅಗ್ನಿವೀರವಾಯುವಿನ ‘ಎಂಗೇಜ್‌ಮೆಂಟ್’ ಅವಧಿಯು ತರಬೇತಿ, ಕೌಶಲ್ಯ ಅಭಿವೃದ್ಧಿ ಚಟುವಟಿಕೆಗಳು, ಪ್ರಾಯೋಗಿಕ ಮತ್ತು ರಚನಾತ್ಮಕ ಮೌಲ್ಯಮಾಪದ ಜೊತೆಗೆ ನಿರಂತರ ಸೇವೆಗಾಗಿ ಸಾಂಸ್ಥಿಕ ಅವಶ್ಯಕತೆಗಳನ್ನು ಪೂರೈಸುವುದನ್ನು ಒಳಗೊಂಡಿರುತ್ತದೆ.
ಇದನ್ನೂ ಓದಿ: ಸಿದ್ದರಾಮಯ್ಯರನ್ನು ಕುರ್ಚಿಯಿಂದ ಇಳಿಸಲು ಕಾಂಗ್ರೆಸ್ ಹಿರಿಯ ನಾಯಕರ ಪ್ಲಾನ್!: ಬಿಜೆಪಿ
ಈ ‘ಎಂಗೇಜ್‌ಮೆಂಟ್’ ಅವಧಿಯಲ್ಲಿ ದೀರ್ಘಕಾಲದ ಅನುಪಸ್ಥಿತಿಯು ಭಾರತೀಯ ವಾಯುಪಡೆಯ ಕಾರ್ಯಾಚರಣೆಯ ದಕ್ಷತೆಯ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತದೆ. ಹೀಗಾಗಿ ಈ ಅವಧಿಯಲ್ಲಿ ಮದುವೆಯಾಗುವ ಅಗ್ನಿವೀರರನ್ನು ವಾಯು ಸೇವೆಯಿಂದ ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಲಾಗಿದೆ. ಇದಲ್ಲದೆ ಅವಿವಾಹಿತ ಅಗ್ನಿವೀರವಾಯು ಮಾತ್ರ ಏರ್‍ಮ್ಯಾನ್ ಆಗಿ ಸಾಮಾನ್ಯ ಕೇಡರ್‍ನಲ್ಲಿ ಆಯ್ಕೆಯಾಗಲು ಅರ್ಹರಾಗಿರುತ್ತಾರೆ. ‘ಎಂಗೇಜ್‌ಮೆಂಟ್’ ಅವಧಿಯಲ್ಲಿ ಮಹಿಳಾ ಅಭ್ಯರ್ಥಿಗಳು ಗರ್ಭಿಣಿಯಾಗಿರುವುದಿಲ್ಲವೆಂದು ಬರೆದುಕೊಡಬೇಕು. ಅಂತಹ ಮಹಿಳೆಯರು ಅಗ್ನಿವೀರವಾಯು ಗರ್ಭಧಾರಣೆಯ ಕಾರಣದಿಂದಾಗಿ ಕಡಿಮೆ ವೈದ್ಯಕೀಯ ವರ್ಗ (ಎಲ್‌ಎಂಸಿ) ಆದ ನಂತರ ಸೇವೆಯಿಂದ ಬಿಡುಗಡೆಯಾಗಲು ಜವಾಬ್ದಾರರಾಗಿರುತ್ತಾರೆ.
ಗರ್ಭಧಾರಣೆಯು ಅಗ್ನಿವೀರವಾಯುವನ್ನು ರೆಗ್ಯುಲರ್ ಕೇಡರ್‍ಗೆ ಆಯ್ಕೆ ಮಾಡಲು ನಿರ್ಬಂಧಿಸುತ್ತದೆ. ದಾಖಲಾತಿಯ ಸಮಯದಲ್ಲಿ ಅಭ್ಯರ್ಥಿಗಳು ಮೇಲಿನ ಷರತ್ತುಗಳನ್ನು ಒಪ್ಪಿಕೊಂಡು ಸ್ವಯಂಪ್ರೇರಿತ ಮುಚ್ಚಳಿಕೆಗೆ ಸಹಿ ಹಾಕಬೇಕಾಗುತ್ತದೆ.
ಶೈಕ್ಷಣಿಕ ಅರ್ಹತೆ
(A) ವಿಜ್ಞಾನ ವಿಷಯಗಳು: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೇಂದ್ರ, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಮಾನ್ಯತೆ ಪಡೆದ ಶಿಕ್ಷಣ ಮಂಡಳಿಗಳಿಂದ ಗಣಿತ, ಭೌತಶಾಸ್ತ್ರ ಮತ್ತು ಇಂಗ್ಲಿಷ್‍ನೊಂದಿಗೆ ಇಂಟರ್ ಮೀಡಿಯೇಟ್/10 + 2/ತತ್ಸಮಾನ ಪರೀಕ್ಷೆಯಲ್ಲಿ ಕನಿಷ್ಠ ಶೇ.50ರಷ್ಟು ಅಂಕಗಳೊಂದಿಗೆ ಮತ್ತು ಇಂಗ್ಲಿಷ್‍ನಲ್ಲಿ ಶೇ.50ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.
ಅಥವಾ
ಕೇಂದ್ರ, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಮಾನ್ಯತೆ ಪಡೆದ ಪಾಲಿಟೆಕ್ನಿಕ್ ಸಂಸ್ಥೆಯಿಂದ ಎಂಜಿನಿಯರಿಂಗ್‍ನಲ್ಲಿ 3 ವರ್ಷಗಳ ಡಿಪ್ಲೊಮಾ ಕೋರ್ಸ್ (ಮೆಕ್ಯಾನಿಕಲ್/ಎಲೆಕ್ಟ್ರಿಕಲ್/ಎಲೆಕ್ಟ್ರಾನಿಕ್ಸ್/ಆಟೋಮೊಬೈಲ್/ ಕಂಪ್ಯೂಟರ್ ಸೈನ್ಸ್/ ಇನ್ಸ್ಟ್ರುಮೆಂಟೇಶನ್ ಟೆಕ್ನಾಲಜಿ/ಇನ್ಫರ್ಮೇಷನ್ ಟೆಕ್ನಾಲಜಿ) ಅನ್ನು ಶೇ.50ರಷ್ಷಟು ಅಂಕಗಳೊಂದಿಗೆ ಮತ್ತು ಡಿಪ್ಲೊಮಾ ಕೋರ್ಸ್‍ನಲ್ಲಿ ಇಂಗ್ಲಿಷ್ ವಿಷಯದಲ್ಲಿ ಶೇ.50ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು (ಅಥವಾ ಡಿಪ್ಲೊಮಾ ಕೋರ್ಸ್‍ನಲ್ಲಿ ಇಂಗ್ಲಿಷ್ ಒಂದು ವಿಷಯವಲ್ಲದಿದ್ದರೆ ಇಂಟರ್ಮೀಡಿಯೆಟ್/ಮೆಟ್ರಿಕ್ಯುಲೇಷನ್‍ನಲ್ಲಿ).
ಅಥವಾ
ವೃತ್ತಿಪರವಲ್ಲದ ವಿಷಯದೊಂದಿಗೆ 2 ವರ್ಷಗಳ ವೃತ್ತಿಪರ ಕೋರ್ಸ್ ಉತ್ತೀರ್ಣರಾಗಿರಬೇಕು. ಕೇಂದ್ರ, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಮಾನ್ಯತೆ ಪಡೆದ ಶಿಕ್ಷಣ ಮಂಡಳಿಗಳಿಂದ ಭೌತಶಾಸ್ತ್ರ ಮತ್ತು ಗಣಿತವನ್ನು ಒಟ್ಟು ಶೇ.50ರಷ್ಟು ಅಂಕಗಳೊಂದಿಗೆ ಮತ್ತು ವೃತ್ತಿಪರ ಕೋರ್ಸ್‍ನಲ್ಲಿ ಇಂಗ್ಲಿಷ್‍ನಲ್ಲಿ ಶೇ.50ರಷ್ಟು ಅಂಕಗಳೊಂದಿಗೆ (ಅಥವಾ ವೃತ್ತಿಪರ ಕೋರ್ಸ್‍ನಲ್ಲಿ ಇಂಗ್ಲಿಷ್ ಒಂದು ವಿಷಯವಲ್ಲದಿದ್ದರೆ ಇಂಟರ್ಮೀಡಿಯೆಟ್/ಮೆಟ್ರಿಕ್ಯುಲೇಷನ್‍ನಲ್ಲಿ) ಶೇ.50 ಅಂಕಗಳೊಂದಿಗೆ ಪೂರ್ಣಗೊಳಿಸಿರಬೇಕು.
ಇದನ್ನೂ ಓದಿ: ಕೆಐಎಡಿಬಿ ಕಚೇರಿಗಳಲ್ಲಿ ದಲ್ಲಾಳಿಗಳಿಗೆ ಲಗಾಮು : ಸುತ್ತೋಲೆ ಪ್ರಕಟ
(B) ವಿಜ್ಞಾನ ವಿಷಯಗಳನ್ನು ಹೊರತುಪಡಿಸಿ: ಕೇಂದ್ರ, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಮಾನ್ಯತೆ ಪಡೆದ ಶಿಕ್ಷಣ ಮಂಡಳಿಗಳಿಂದ ಯಾವುದೇ ಸ್ಟ್ರೀಮ್/ವಿಷಯಗಳಲ್ಲಿ ಇಂಟರ್ ಮೀಡಿಯೇಟ್/10 + 2 /ತತ್ಸಮಾನ ಪರೀಕ್ಷೆಯಲ್ಲಿ ಕನಿಷ್ಠ ಶೇ.50ರಷ್ಟು ಅಂಕಗಳೊಂದಿಗೆ ಮತ್ತು ಇಂಗ್ಲಿಷ್‍ನಲ್ಲಿ ಶೇ.50ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.
ಅಥವಾ
ಕೇಂದ್ರ, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಮಾನ್ಯತೆ ಪಡೆದ ಶಿಕ್ಷಣ ಮಂಡಳಿಗಳಿಂದ 2 ವರ್ಷಗಳ ವೃತ್ತಿಪರ ಕೋರ್ಸ್ ಅನ್ನು ಕನಿಷ್ಠ ಶೇ.50ರಷ್ಟು ಅಂಕಗಳೊಂದಿಗೆ ಮತ್ತು ವೃತ್ತಿಪರ ಕೋರ್ಸ್‍ನ ಇಂಗ್ಲಿಷ್‍ನಲ್ಲಿ ಶೇ.50ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು (ಅಥವಾ ವೃತ್ತಿಪರ ಕೋರ್ಸ್‍ನಲ್ಲಿ ಇಂಗ್ಲಿಷ್ ಒಂದು ವಿಷಯವಲ್ಲದಿದ್ದರೆ ಇಂಟರ್ಮೀಡಿಯೆಟ್/ಮೆಟ್ರಿಕ್ಯುಲೇಷನ್‍ನಲ್ಲಿ). ಹೆಚ್ಚಿನ ಮಾಹಿತಿಗೆ ಅಭ್ಯರ್ಥಿಗಳು ಭಾರತೀಯ ವಾಯುಪಡೆಯ ಅಧಿಕೃತ ವೆಬ್‍ಸೈಟ್‍ಗೆ ಭೇಟಿ ನೀಡಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.