ಬೆಂಗಳೂರು: ಸಿಎಂ ಸಿದ್ದರಾಮಯ್ಯರನ್ನು ಕುರ್ಚಿಯಿಂದ ಇಳಿಸಲು ಹಿರಿಯ ಕಾಂಗ್ರೆಸ್ ನಾಯಕರು ಪ್ಲಾನ್ ಮಾಡುತಿದ್ದಾರೆ ಎಂದು ಬಿಜೆಪಿ ಬಾಂಬ್ ಸಿಡಿಸಿದೆ. ಅಧಿಕಾರಿಗಳ ವರ್ಗಾವಣೆ ವಿಷಯದಲ್ಲಿ ಕಾಂಗ್ರೆಸ್ ಸಚಿವರ ಮಧ್ಯೆ ಮುಸುಕಿನ ಗುದ್ದಾಟ ನಡೆಯುತ್ತಿರುವ ವಿಚಾರವಾಗಿ ಬಿಜೆಪಿ ಟ್ವೀಟ್ ಮಾಡಿದೆ.
‘ಏನಾಗುತ್ತಿದೆ ಕಾಂಗ್ರೆಸ್ ಸರ್ಕಾರದಲ್ಲಿ..? ಹಿರಿಯ ಕಾಂಗ್ರೆಸ್ ನಾಯಕರು ಸಿದ್ದರಾಮಯ್ಯರವರನ್ನು ಕುರ್ಚಿಯಿಂದ ಇಳಿಸಲು ಪ್ಲಾನ್ ಮಾಡುತಿದ್ದಾರೆ. ಸಚಿವರುಗಳ ಮಧ್ಯೆ ವರ್ಗಾವಣೆ ದಂಧೆಯ ಕಲೆಕ್ಷನ್ ವಿಚಾರದಲ್ಲಿ ಜಗಳ, ಮನಸ್ತಾಪ. ಒಬ್ಬ ಸಚಿವ ಅಮಾನತು ಮಾಡಿದ ಅಧಿಕಾರಿಯನ್ನು ಮತ್ತೊಬ್ಬ ಸಚಿವ ಪದೋನ್ನತಿ ನೀಡಿ ನೇಮಕಗೊಳಿಸುತ್ತಾರೆ. ಒಟ್ಟಿನಲ್ಲಿ "ಕೈ" ನಲ್ಲಿ ಎಲ್ಲವೂ ಸರಿಯಿಲ್ಲ, ರಾಜ್ಯದ ಜನತೆಯ ಸಂಕಷ್ಟ ಕೇಳುವವರಿಲ್ಲ’ ಎಂದು ಬಿಜೆಪಿ ಟೀಕಿಸಿದೆ.
ಇದನ್ನೂ ಓದಿ: ʻಸಿಎಂ ಮಾಡುವುದು ಇಳಿಸುವುದು ಇಬ್ಬರ ಕೈಯಲ್ಲಿ ಇಲ್ಲʼ
‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅರಾಜಕತೆ ಸೃಷ್ಟಿಸಿದೆ. ತುಘಲಕ್ ಆಡಳಿತದ ವಿರುದ್ಧ ಜನರು ಆಕ್ರೋಶಗೊಂಡಿದ್ದಾರೆ. ಸಿಎಂ ಸಿದ್ದರಾಮಯ್ಯನವರೇ, ಜನರನ್ನು ಅಯ್ಯೋ ಎನ್ನಿಸಿ ಏನನ್ನು ಸಾಧಿಸಲು ಹೊರಟಿದ್ದೀರಿ..?’ ಎಂದು ಬಿಜೆಪಿ ಪ್ರಶ್ನಿಸಿದೆ.
‘ರಾಜ್ಯದಲ್ಲಿ #ATMSarkara ಅಧಿಕಾರಕ್ಕೆ ಬಂದ ನಂತರ ಅವೈಜ್ಞಾನಿಕವಾಗಿ ತೆರಿಗೆಗಳನ್ನು ಏರಿಸಿದ ಪರಿಣಾಮ, ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರಿ ಬಡ ಹಾಗೂ ಮಧ್ಯಮ ವರ್ಗದ ಜನತೆ ಜೀವನ ನಡೆಸುವುದೇ ಕಷ್ಟವಾಗಿದೆ. ಈಗ ಹೋಟೆಲ್ ಆಹಾರ ದರ ಸಹ ಶೇ.10ರಷ್ಟು ಹೆಚ್ಚಾಗಿದ್ದು, ಜನತೆಯ ಜೇಬು ಸಂಪೂರ್ಣ ಬರಿದಾಗಲಿದೆ’ ಎಂದು ಬಿಜೆಪಿ ಕುಟುಕಿದೆ.
ರಾಜ್ಯದಲ್ಲಿ #ATMSarkara ಅಧಿಕಾರಕ್ಕೆ ಬಂದ ನಂತರ ಅವೈಜ್ಞಾನಿಕವಾಗಿ ತೆರಿಗೆಗಳನ್ನು ಏರಿಸಿದ ಪರಿಣಾಮ, ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರಿ ಬಡ ಹಾಗೂ ಮಧ್ಯಮ ವರ್ಗದ ಜನತೆ ಜೀವನ ನಡೆಸುವುದೇ ಕಷ್ಟವಾಗಿದೆ.
ಈಗ ಹೋಟೆಲ್ ಆಹಾರ ದರ ಸಹ ಶೇ.10ರಷ್ಟು ಹೆಚ್ಚಾಗಿದ್ದು, ಜನತೆಯ ಜೇಬು ಸಂಪೂರ್ಣ ಬರಿದಾಗಲಿದೆ. pic.twitter.com/FMpQSMnObD
— BJP Karnataka (@BJP4Karnataka) July 23, 2023
ಇದನ್ನೂ ಓದಿ: ರಾಪಿಡೋ ಬೈಕ್ ಚಾಲಕನಿಂದ ಮಹಿಳೆಗೆ ಲೈಂಗಿಕ ಕಿರುಕುಳ ಕೇಸ್
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.