ನವದೆಹಲಿ: ಈ ವರ್ಷದ ಸೆಪ್ಟೆಂಬರ್‌ನೊಳಗೆ ವಾಣಿಜ್ಯ ಸೇವೆಗಳನ್ನು ಪುನರಾರಂಭಿಸುವ ಗುರಿಯನ್ನು ಹೊಂದಿರುವ ಜೆಟ್ ಏರ್‌ವೇಸ್ ಬಹು ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುತ್ತಿದೆ.ಈ ಹಿನ್ನೆಲೆಯಲ್ಲಿ ಎಲ್ಲಾ ಅಭ್ಯರ್ಥಿಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ.ಇದೆ ವೇಳೆ ವಿಮಾನಯಾನವು ಈ ಹಿಂದಿನ ಜೆಟ್ ಏರ್ವೇಸ್ ಉದ್ಯೋಗಿಗಳಿಗೂ ಸಹ ಅರ್ಜಿ ಸಲ್ಲಿಸಲು ಪ್ರೋತ್ಸಾಹಿಸುತ್ತದೆ.


COMMERCIAL BREAK
SCROLL TO CONTINUE READING

ಜೆಟ್ ಏರ್‌ವೇಸ್ ಜನರಲ್ ಮ್ಯಾನೇಜರ್ (ಚಿಲ್ಲರೆ ಮತ್ತು ಕಾರ್ಪೊರೇಟ್ ಮಾರಾಟಗಳು), ಹೆಡ್ - ಗ್ರೌಂಡ್ ಆಪರೇಷನ್ ಟ್ರೈನಿಂಗ್, ಡಿಜಿಆರ್ ಇನ್‌ಸ್ಟ್ರಕ್ಟರ್ ಮತ್ತು ಪ್ಯಾಸೆಂಜರ್ ಸರ್ವಿಸ್ ಸಿಸ್ಟಮ್ (ಪಿಎಸ್‌ಎಸ್) ತರಬೇತುದಾರ ಮತ್ತು ಇತರ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುತ್ತಿದೆ.


ಇದನ್ನೂ ಓದಿ: ಡೀಲ್ ರಾಜಕೀಯ ಬಿಜೆಪಿಯವರ ಮನೆದೇವರಾಗಿಬಿಟ್ಟಿದೆ: ಕಾಂಗ್ರೆಸ್ ಟೀಕೆ


ಈ ಕುರಿತಾಗಿ ಟ್ವೀಟ್ ಮಾಡಿರುವ ಜೆಟ್ ಏರ್ವೇಸ್ 'ಇತಿಹಾಸವನ್ನು ರಚಿಸುವ ತಂಡವನ್ನು ಸೇರಲು ನಾವು ರಿಟೇಲ್ ಮತ್ತು ಕಾರ್ಪೊರೇಟ್ ಸೇಲ್ಸ್ ನಲ್ಲಿ  ಜನರಲ್ ಮ್ಯಾನೇಜರ್ (GM) ನ್ನು  ಹುಡುಕುತ್ತಿದ್ದೇವೆ" ಎಂದು ಟ್ವೀಟ್ ಮಾಡಿದೆ.


ಮಾರ್ಕೆಟಿಂಗ್ ಅಥವಾ ಮಾರಾಟದಲ್ಲಿ ಎಂಬಿಎ ಮಾಡಿದ್ದಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.


-ಹೆಡ್-ಗ್ರೌಂಡ್ ಆಪರೇಷನ್ಸ್ ತರಬೇತಿಗಾಗಿ, ಅಭ್ಯರ್ಥಿಯು ಸ್ನಾತಕೋತ್ತರ ಪದವಿ ಮತ್ತು ಕನಿಷ್ಠ 10 ವರ್ಷಗಳ ಅನುಭವವನ್ನು ಹೊಂದಿರಬೇಕು.


ಇದನ್ನೂ ಓದಿ: ಸಿದ್ದರಾಮಯ್ಯ ಎದುರು ಡಿಕೆಶಿ ಅಸಹಾಯಕರಾಗಿ ನಿಲ್ಲಬೇಕಷ್ಟೆ!: ಬಿಜೆಪಿ ವ್ಯಂಗ್ಯ


-ಡಿಜಿಆರ್ ಬೋಧಕ ಹುದ್ದೆಗಾಗಿ ಅಭ್ಯರ್ಥಿಯು ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ ​​(DGCA)-ಅನುಮೋದಿತ ಅಪಾಯಕಾರಿ ಸರಕುಗಳ ಬೋಧಕನಾಗಿರಬೇಕು.ಕನಿಷ್ಟ 5 ವರ್ಷಗಳ ತರಬೇತಿ ಅನುಭವವನ್ನು ಹೊಂದಿರಬೇಕು.


-ಪ್ರಯಾಣಿಕ ಸೇವಾ ವ್ಯವಸ್ಥೆ (PSS) ತರಬೇತುದಾರ ಹುದ್ದೆಗೆ, ಅಭ್ಯರ್ಥಿಯು PSS ವ್ಯವಸ್ಥೆಗಳಲ್ಲಿ ಕನಿಷ್ಠ 4 ವರ್ಷಗಳ ಅನುಭವವನ್ನು ಹೊಂದಿರಬೇಕು ಮತ್ತು ಸ್ನಾತಕೋತ್ತರ ಪದವಿಯನ್ನು ಪಡೆದಿರಬೇಕು


ಜೆಟ್ ಏರ್‌ವೇಸ್ ಮಾರಾಟವನ್ನು ಮುಂದಿನ ಹಂತಕ್ಕೆ ಮತ್ತು ಅದರಾಚೆಗೆ ಅಭಿವೃದ್ಧಿಪಡಿಸಲು ಉನ್ನತ-ಕಾರ್ಯನಿರ್ವಹಣೆಯ ಮಾರಾಟ ವೃತ್ತಿಪರರನ್ನು ಸಹ ಏರ್‌ಲೈನ್ ಹುಡುಕುತ್ತಿದೆ.


ಒಂದು ವೇಳೆ ನಿಮಗೆ ಈ ಅರ್ಹತೆಗಳು ಇದ್ದಲ್ಲಿ ಕೂಡಲೇ ನಿಮ್ಮ ಸಿವಿಯನ್ನು ಇಲ್ಲಿಗೆ ಕಳುಹಿಸಿ: careers@jetairways.com.


 https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.