ಡೀಲ್ ರಾಜಕೀಯ ಬಿಜೆಪಿಯವರ ಮನೆದೇವರಾಗಿಬಿಟ್ಟಿದೆ: ಕಾಂಗ್ರೆಸ್ ಟೀಕೆ

ಮಾಜಿ ಸಚಿವ ಕೆ.ಎಸ್.ಈಶ್ವರಪ್ಪನ ಮೇಲಿನ ತನಿಖೆ ಎಲ್ಲಿಗೆ ತಲುಪಿತು 40% ಡೀಲ್ ಸರ್ಕಾರದವರೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

Written by - Zee Kannada News Desk | Last Updated : May 31, 2022, 04:58 PM IST
  • ಡೀಲ್ ರಾಜಕೀಯ ಬಿಜೆಪಿ ಮನೆದೇವರಾಗಿದ್ದು, ಎಲ್ಲದರಲ್ಲೂ 40% ಡೀಲ್ ನಡೆಸಿ ಅಮಾಯಕ ಬಲಿ ಪಡೆಯುತ್ತಿದ್ದಾರೆ
  • ಮಾಜಿ ಸಚಿವ ಕೆ.ಎಸ್.ಈಶ್ವರಪ್ಪನ ಮೇಲಿನ ತನಿಖೆ ಎಲ್ಲಿಗೆ ತಲುಪಿತು 40% ಡೀಲ್ ಸರ್ಕಾರದವರೇ?
  • ಕೊಳ್ಳೆ ಹೊಡೆದ 40% ಡೀಲ್ ಹಣ ಬಿಜೆಪಿ ಕಚೇರಿ ತಲುಪುತ್ತಿದ್ಯೋ ಅಥವಾ ನಾಗಪುರದ ಹುತ್ತ ಸೇರುತ್ತಿದ್ಯೋ?
ಡೀಲ್ ರಾಜಕೀಯ ಬಿಜೆಪಿಯವರ ಮನೆದೇವರಾಗಿಬಿಟ್ಟಿದೆ: ಕಾಂಗ್ರೆಸ್ ಟೀಕೆ title=
ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಆಕ್ರೋಶ

ಬೆಂಗಳೂರು: ‘ರೈತ ಹೋರಾಟದ ಹೆಸರಿನಲ್ಲಿ ಕೆಲವರು ಕೋಟಿಗಟ್ಟಲೆ ಡೀಲ್ ಮಾಡಿಕೊಳ್ಳುತ್ತಿದ್ದಾರೆ. ಈ ಡೀಲ್ ರಾಜರ ಬಗ್ಗೆ ಕೆಪಿಸಿಸಿ ಅಧ್ಯಕ್ಷರು ಅನುಕಂಪ ತೋರಿಸುತ್ತಾರೆ. ಡೀಲ್ ಮೂಲಕ ಸಂಗ್ರಹವಾದ ಅಕ್ರಮ ಹಣ ಎಲ್ಲಿ ತಲುಪುತ್ತಿದೆ, ಕೆಪಿಸಿಸಿ ಕಚೇರಿಯನ್ನೋ? ಅಥವಾ ಸದಾಶಿವ ನಗರದ ಬಂಗಲೆಯನ್ನೋ?’ ಎಂದು ಪ್ರಶ್ನಿಸಿದ್ದ ಬಿಜೆಪಿಗೆ ಕಾಂಗ್ರೆಸ್ ತಿರುಗೇಟು ನೀಡಿದೆ.

ಇದನ್ನೂ ಓದಿ: ಖಾಸಗಿ ಲೋನ್ ಆಪ್‌ಗಳನ್ನ ಬಳಸುವವರೇ ಎಚ್ಚರ.! ಹಣದ ಆಸೆಗೆ ಹೋದೀತು ಮಾನ!!

‘ಡೀಲ್ ರಾಜಕೀಯ ಬಿಜೆಪಿಯವರ ಮನೆದೇವರಾಗಿಬಿಟ್ಟಿದೆ. ಎಲ್ಲದರಲ್ಲೂ 40% ಡೀಲ್ ನಡೆಸಿ ಅಮಾಯಕರನ್ನು ಬಲಿ ಪಡೆಯುತ್ತಿದ್ದಾರೆ. ಅಂದ ಹಾಗೆ ಕೆ.ಎಸ್.ಈಶ್ವರಪ್ಪನ ಮೇಲಿನ ತನಿಖೆ ಎಲ್ಲಿಗೆ ತಲುಪಿತು 40% ಡೀಲ್ ಸರ್ಕಾರದವರೇ? ನೂರಾರು ಕೋಟಿ ಕೊಳ್ಳೆ ಹೊಡೆದ 40% ಡೀಲ್ ಹಣ ಬಿಜೆಪಿ ಕಚೇರಿ ತಲುಪುತ್ತಿದ್ಯೋ ಅಥವಾ ನಾಗಪುರದ ಹುತ್ತ ಸೇರುತ್ತಿದ್ಯೋ?’ ಎಂದು ವ್ಯಂಗ್ಯವಾಗಿ ಕಾಂಗ್ರೆಸ್ ಪ್ರಶ್ನಿಸಿದೆ.

ಇದನ್ನೂ ಓದಿ: 'ಹಿಂದುಗಳೆಲ್ಲ ಒಂದು ಎನ್ನುವ ನಿಮ್ಮ ಸಂಘದ ಉನ್ನತ ಪದಾಧಿಕಾರ ಯಾಕೆ ಒಂದು ಜಾತಿಗೆ ಸೀಮಿತವಾಗಿದೆ?'

‘ರೈತ ನಾಯಕರ ಮೇಲೆ ಹಲ್ಲೆ ನಡೆಸಿದ ಗೂಂಡಾಗಳಿಗೂ ಬಿಜೆಪಿಗೂ ಸಂಬಂಧವೇ ಇಲ್ಲ ಎಂದು ಬಿಜೆಪಿ ಹಸಿ ಸುಳ್ಳು ಹೇಳಿತ್ತು. ಈ ಗೂಂಡಾಗೂ ಬಿಜೆಪಿ ನಾಯಕರಿಗೂ ಇರುವ ಸಂಬಂಧವೇನು? ಅಥವಾ ಇವರೆಲ್ಲ ಬಿಜೆಪಿ ನಾಯಕರೇ ಅಲ್ಲವೇ? ಈತ ಬಿಜೆಪಿಯ ಸುಪಾರಿ ಹಲ್ಲೆಕೋರನೇ? ಬಿಜೆಪಿ ಸ್ಪಷ್ಟಪಡಿಸಲಿ. ಇತ್ತೀಚಿನ ಹಲವು ಕೋಮು ವಿವಾದಗಳಿಗೆ ಈತನೂ ಕಾರಣನಲ್ಲವೇ?’ ಎಂದು ಪ್ರಶ್ನಿಸಿರುವ ಕಾಂಗ್ರೆಸ್, ರೈತ ಮುಖಂಡ ರಾಕೇಶ್ ಟಿಕಾಯತ್ ಮೇಲೆ ಕಪ್ಪು ಮಸಿ ಎರಚಿದ್ದ ವ್ಯಕ್ತಿ ಬಿಜೆಪಿ ನಾಯಕರ ಜೊತೆಗಿರುವ ಫೋಟೋಗಳನ್ನು ಹಂಚಿಕೊಂಡು ಟ್ವೀಟ್ ಮಾಡಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News