Job Alert: ನವೋದಯ ವಿದ್ಯಾಲಯ ಸಮಿತಿಯಲ್ಲಿ 1,377 ಹುದ್ದೆಗಳಿಗೆ ಅರ್ಜಿ ಆಹ್ವಾನ
NVS Recruitment 2024: ಲಿಖಿತ ಪರೀಕ್ಷೆ, ಸ್ಕಿಲ್ ಪರೀಕ್ಷೆ, ಟ್ರೇಡ್ ಪರೀಕ್ಷೆ, ದಾಖಲೆ ಪರಿಶೀಲನೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
NVS Recruitment 2024: ನವೋದಯ ವಿದ್ಯಾಲಯ ಸಮಿತಿಯಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 1,377 ಬೋಧಕೇತರ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಇದೇ ಏಪ್ರಿಲ್ 30 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ. ಸರ್ಕಾರಿ ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳು ಈ ಸುವರ್ಣ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು. ಈ ಹುದ್ದೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಹುದ್ದೆಯ ವಿವಿರ: ನವೋದಯ ವಿದ್ಯಾಲಯ ಸಮಿತಿಯಲ್ಲಿ ಖಾಲಿ ಇರುವ 1,377 ಬೋಧಕೇತರ ಹುದ್ದೆಗಳ ನೇಮಕಾತಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 121 ಮಹಿಳಾ ಸ್ಟಾಫ್ ನರ್ಸ್, 5 ಅಸಿಸ್ಟೆಂಟ್ ಸೆಕ್ಷನ್ ಆಫೀಸರ್ (ASO), 12 ಆಡಿಟ್ ಅಸಿಸ್ಟೆಂಟ್, 4 ಜೂನಿಯರ್ ಟ್ರಾನ್ಸ್ಲೇಶನ್ ಆಫೀಸರ್, 1 ಲೀಗಲ್ ಅಸಿಸ್ಟೆಂಟ್, 23 ಸ್ಟೆನೋಗ್ರಾಫರ್, 2 ಕಂಪ್ಯೂಟರ್ ಆಪರೇಟರ್, 78 ಕೇಟರಿಂಗ್ ಸೂಪರ್ವೈಸರ್, 381 ಜೂನಿಯರ್ ಸೆಕ್ರೆಟೇರಿಯಟ್ ಅಸಿಸ್ಟೆಂಟ್ (JSA), 128 ಎಲೆಕ್ಟ್ರಿಷಿಯನ್ & ಪ್ಲಂಬರ್, 161 ಲ್ಯಾಬ್ ಅಸಿಸ್ಟೆಂಟ್, 442 ಮೆಸ್ ಹೆಲ್ಪರ್ ಮತ್ತು 19 ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹುದ್ದೆಗಳು ಖಾಲಿ ಇವೆ.
ಇದನ್ನೂ ಓದಿ: Lok Sabha Elections: 14 ವರ್ಷಗಳ ಬಳಿಕ ಮತ್ತೆ ರಾಜಕೀಯಕ್ಕೆ ಮರಳಿದ ಗೋವಿಂದ
ವಿದ್ಯಾರ್ಹತೆ: ಮಹಿಳಾ ಸ್ಟಾಫ್ ನರ್ಸ್‌ಗೆ ಬಿ.ಎಸ್ಸಿ, ಅಸಿಸ್ಟೆಂಟ್ ಸೆಕ್ಷನ್ ಆಫೀಸರ್ (ASO)ಗೆ ಪದವಿ, ಆಡಿಟ್ ಅಸಿಸ್ಟೆಂಟ್‌ಗೆ ಬಿ.ಕಾಂ, ಜೂನಿಯರ್ ಟ್ರಾನ್ಸ್ಲೇಶನ್ ಆಫೀಸರ್‌ಗೆ ಸ್ನಾತಕೋತ್ತರ ಪದವಿ, ಲೀಗಲ್ ಅಸಿಸ್ಟೆಂಟ್‌ಗೆ LLB, ಸ್ಟೆನೋಗ್ರಾಫರ್‌ಗೆ 12ನೇ ತರಗತಿ, ಕಂಪ್ಯೂಟರ್ ಆಪರೇಟರ್‌ಗೆ ಬಿಸಿಎ, ಬಿ.ಎಸ್ಸಿ, ಬಿಇ/ಬಿ.ಟೆಕ್, ಕೇಟರಿಂಗ್ ಸೂಪರ್ವೈಸರ್ಗೆ ಪದವಿ, ಜೂನಿಯರ್ ಸೆಕ್ರೆಟೇರಿಯಟ್ ಅಸಿಸ್ಟೆಂಟ್ (JSA)ಗೆ 12ನೇ ತರಗತಿ, ಎಲೆಕ್ಟ್ರಿಷಿಯನ್ & ಪ್ಲಂಬರ್‌ಗೆ 10ನೇ ತರಗತಿ, ಐಟಿಐ, ಲ್ಯಾಬ್ ಅಸಿಸ್ಟೆಂಟ್‌ಗೆ 10ನೇ ತರಗತಿ, 12ನೇ ತರಗತಿ, ಡಿಪ್ಲೊಮಾ, ಮೆಸ್ ಹೆಲ್ಪರ್‌ಗೆ 10ನೇ ತರಗತಿ ಮತ್ತು ಮಲ್ಟಿ ಟಾಸ್ಕಿಂಗ್ ಸ್ಟಾಫ್‌ಗೆ 10ನೇ ತರಗತಿ ಪೂರ್ಣಗೊಳಿಸಿರಬೇಕು.
ವಯೋಮಿತಿ: ಮಹಿಳಾ ಸ್ಟಾಫ್ ನರ್ಸ್‌ಗೆ 35 ವರ್ಷ, ಅಸಿಸ್ಟೆಂಟ್ ಸೆಕ್ಷನ್ ಆಫೀಸರ್ (ASO)ಗೆ 23ರಿಂದ 33 ವರ್ಷ, ಆಡಿಟ್ ಅಸಿಸ್ಟೆಂಟ್‌ಗೆ 18ರಿಂದ 30 ವರ್ಷ, ಜೂನಿಯರ್ ಟ್ರಾನ್ಸ್ಲೇಶನ್ ಆಫೀಸರ್‌ಗೆ 32 ವರ್ಷ, ಲೀಗಲ್ ಅಸಿಸ್ಟೆಂಟ್‌ಗೆ 23ರಿಂದ 35 ವರ್ಷ, ಸ್ಟೆನೋಗ್ರಾಫರ್‌ಗೆ 18ರಿಂದ 27 ವರ್ಷ, ಕಂಪ್ಯೂಟರ್ ಆಪರೇಟರ್‌ಗೆ 18ರಿಂದ 30 ವರ್ಷ, ಕೇಟರಿಂಗ್ ಸೂಪರ್ವೈಸರ್ಗೆ 35 ವರ್ಷ, ಜೂನಿಯರ್ ಸೆಕ್ರೆಟೇರಿಯಟ್ ಅಸಿಸ್ಟೆಂಟ್ (JSA)ಗೆ 18ರಿಂದ 27 ವರ್ಷ, ಎಲೆಕ್ಟ್ರಿಷಿಯನ್ & ಪ್ಲಂಬರ್‌ಗೆ 18ರಿಂದ 40 ವರ್ಷ, ಲ್ಯಾಬ್ ಅಸಿಸ್ಟೆಂಟ್‌ಗೆ 18ರಿಂದ 30 ವರ್ಷ, ಮೆಸ್ ಹೆಲ್ಪರ್‌ಗೆ 18ರಿಂದ 30 ವರ್ಷ ಮತ್ತು ಮಲ್ಟಿ ಟಾಸ್ಕಿಂಗ್ ಸ್ಟಾಫ್‌ಗೆ 18ರಿಂದ 30 ವರ್ಷ
ವೇತನ: ಮಹಿಳಾ ಸ್ಟಾಫ್ ನರ್ಸ್‌ಗೆ ಮಾಸಿಕ ₹44,900-1,42,400, ಅಸಿಸ್ಟೆಂಟ್ ಸೆಕ್ಷನ್ ಆಫೀಸರ್ (ASO)ಗೆ ಮಾಸಿಕ ₹35,400-1,12,400, ಆಡಿಟ್ ಅಸಿಸ್ಟೆಂಟ್‌ಗೆ ಮಾಸಿಕ ₹35,400-1,12,400, ಜೂನಿಯರ್ ಟ್ರಾನ್ಸ್ಲೇಶನ್ ಆಫೀಸರ್‌ಗೆ ಮಾಸಿಕ ₹35,400-1,12,400, ಲೀಗಲ್ ಅಸಿಸ್ಟೆಂಟ್‌ಗೆ ಮಾಸಿಕ ₹35,400-1,12,400, ಸ್ಟೆನೋಗ್ರಾಫರ್‌ಗೆ ಮಾಸಿಕ ₹25,500-81,100, ಕಂಪ್ಯೂಟರ್ ಆಪರೇಟರ್‌ಗೆ ಮಾಸಿಕ ₹25,500-81,100, ಕೇಟರಿಂಗ್ ಸೂಪರ್ವೈಸರ್ಗೆ ಮಾಸಿಕ ₹25,500-81,100, ಜೂನಿಯರ್ ಸೆಕ್ರೆಟೇರಿಯಟ್ ಅಸಿಸ್ಟೆಂಟ್ (JSA)ಗೆ ಮಾಸಿಕ ₹19,900-63,200, ಎಲೆಕ್ಟ್ರಿಷಿಯನ್ & ಪ್ಲಂಬರ್‌ಗೆ ಮಾಸಿಕ ₹19,900-63,200, ಲ್ಯಾಬ್ ಅಸಿಸ್ಟೆಂಟ್‌ಗೆ ಮಾಸಿಕ ₹18,000-56,900, ಮೆಸ್ ಹೆಲ್ಪರ್‌ಗೆ ಮಾಸಿಕ ₹18,000-56,900 ಮತ್ತು ಮಲ್ಟಿ ಟಾಸ್ಕಿಂಗ್ ಸ್ಟಾಫ್‌ಗೆ ಮಾಸಿಕ ₹18,000-56,900
ವಯೋಮಿತಿ ಸಡಿಲಿಕೆ: OBC (NCL) ಅಭ್ಯರ್ಥಿಗೆ 3 ವರ್ಷ, SC/ST ಅಭ್ಯರ್ಥಿಗೆ 5 ವರ್ಷ, PwD (ಸಾಮಾನ್ಯ) ಅಭ್ಯರ್ಥಿಗೆ 10 ವರ್ಷ, PwD [OBC (NCL)] ಅಭ್ಯರ್ಥಿಗೆ 13 ವರ್ಷ ಮತ್ತು PwD (SC/ST) ಅಭ್ಯರ್ಥಿಗೆ 15 ವರ್ಷ
ಅರ್ಜಿ ಶುಲ್ಕ: SC/ST/PwBD ಅಭ್ಯರ್ಥಿಗಳು: ₹500 ಸಾಮಾನ್ಯ/EWS/OBC (NCL) ಅಭ್ಯರ್ಥಿಗಳಿಗೆ: ಮಹಿಳಾ ಸಿಬ್ಬಂದಿ ನರ್ಸ್ ಹುದ್ದೆಗೆ ₹1,500, ಉಳಿದ ಹುದ್ದೆಗೆ ₹1,000. ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಶುಲ್ಕ ಪಾವತಿಸಬೇಕು.
ಉದ್ಯೋಗ ಸ್ಥಳ: ಕರ್ನಾಟಕ ಸೇರಿದಂತೆ ಅಖಿಲ ಭಾರತ
ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ, ಸ್ಕಿಲ್ ಪರೀಕ್ಷೆ, ಟ್ರೇಡ್ ಪರೀಕ್ಷೆ, ದಾಖಲೆ ಪರಿಶೀಲನೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ?: ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಪ್ರಮುಖ ದಿನಾಂಕಗಳು: ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 22/03/2024 ಮತ್ತು ಅರ್ಜಿ ಸಲ್ಲಿಸಲು ಕೊನೆಯ ದಿನ ಏಪ್ರಿಲ್ 30
ಇದನ್ನೂ ಓದಿ: Daily GK Quiz: ವಿಶ್ವದ ಅತ್ಯಂತ ಬಿಸಿಯಾದ ಖಂಡ ಯಾವುದು?
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.