OMG: 10 ಕೋಟಿ ಲಾಟರಿ ಗೆದ್ದು ರಾತ್ರೋರಾತ್ರಿ ಕೋಟ್ಯಾಧಿಪತಿಯಾದ ಆಟೋ ಚಾಲಕ!

Kerala Bumper Lottery: ಮಂಗಳವಾರವಷ್ಟೇ ಖರೀದಿಸಿದ್ದ ಲಾಟರಿಯಿಂದ ಆಟೋ ಚಾಲಕನ ಅದೃಷ್ಟ ರಾತ್ರೋರಾತ್ರಿ ಬದಲಾಗಿದೆ. ಬುಧವಾರ ಬೆಳಗ್ಗೆ ಲಾಟರಿಯಲ್ಲಿ ಪ್ರಥಮ ಬಹುಮಾನ 10 ಕೋಟಿ ರೂ. ಗೆಲ್ಲುವ ಮೂಲಕ ಕೋಟ್ಯಾಧಿಪತಿಯಾಗಿದ್ದಾರೆ.

Written by - Puttaraj K Alur | Last Updated : Mar 27, 2024, 10:03 PM IST
  • ಕೇವಲ 10 ರೂ.ನಿಂದ ಖುಲಾಯಿಸಿದ ಆಟೋ ಚಾಲಕನ ಅದೃಷ್ಟ
  • 10 ಕೋಟಿ ರೂ. ಲಾಟರಿ ಗೆದ್ದು ಕೋಟ್ಯಧಿಪತಿಯಾದ ಆಟೋ ಚಾಲಕ
  • ಮಂಗಳವಾರ ರಾತ್ರಿ ಖರೀದಿಸಿದ್ದ ಲಾಟರಿಯಿಂದ ಕೈಹಿಡಿದ ಅದೃಷ್ಟ
OMG: 10 ಕೋಟಿ ಲಾಟರಿ ಗೆದ್ದು ರಾತ್ರೋರಾತ್ರಿ ಕೋಟ್ಯಾಧಿಪತಿಯಾದ ಆಟೋ ಚಾಲಕ!   title=
ಕೋಟ್ಯಧಿಪತಿಯಾದ ಆಟೋ ಚಾಲಕ

Bumper Lottery: ಅದೃಷ್ಟ ಯಾವಾಗ ಯಾರಿಗೆ ಒಲಿಯುತ್ತದೆ ಅಂತಾ ಹೇಳೋಕೆ ಸಾಧ್ಯವಿಲ್ಲ. ಜೀವನ ನಡೆಸಲು ಹೆಣಗಾಡುವ ಜನರು ರಾತ್ರೋರಾತ್ರಿ ಫೇಮಸ್‌ ಆಗುತ್ತಾರೆ. ಅದೃಷ್ಟ ಲಕ್ಷ್ಮಿ ಯಾವುದೋ ಒಂದು ರೂಪದಲ್ಲಿ ಅವರ ಕೈ ಹಿಡಿಯುತ್ತಾಳೆ. ಅದೇ ರೀತಿ ಕೇರಳದ ಆಟೋ ಚಾಲಕನಿಗೆ ಅದೃಷ್ಟ ಕೈಹಿಡಿದಿದೆ. ಆತ ಬರೋಬ್ಬರಿ 10 ಕೋಟಿ ರೂ. ಲಾಟರಿ ಗೆದಿದ್ದು ರಾತ್ರೋರಾತ್ರಿ ಕೋಟ್ಯಧಿಪತಿಯಾಗಿದ್ದಾರೆ.     

ಹೌದು, ಕೇರಳದ ಆಟೋ ಚಾಲಕನಿಗೆ ಅದೃಷ್ಟ ಒಲಿದುಬಂದಿದೆ. ಮಂಗಳವಾರ ರಾತ್ರಿ ಕೇವಲ 10 ರೂ. ನೀಡಿ  ಲಾಟರಿ ಟಿಕೆಟ್ ಖರೀದಿಸಿದ್ದ ಕೇರಳದ ಕಣ್ಣೂರಿನ  ಆಳಕೋಡ್ ನಿವಾಸಿ ನಾಸರ್‌ ಅವರಿಗೆ ಅದೃಷ್ಟ ಲಕ್ಷ್ಮಿ ಒಲಿದುಬಂದಿದ್ದಾಳೆ. ಕುಟುಂಬ ನಡೆಸಲು ಹಗಲು-ರಾತ್ರಿ ಕಷ್ಟಪಟ್ಟು ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದ ನಾಸರ್‌ಗೆ ಬಂಪರ್‌ ಲಾಟರಿ ಹೊಡೆದಿದೆ.   

ಇದನ್ನೂ ಓದಿ: ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಎರಡು ವಿಮಾನಗಳ ಡಿಕ್ಕಿ

ಮಂಗಳವಾರವಷ್ಟೇ ಖರೀದಿಸಿದ್ದ ಲಾಟರಿಯಿಂದ ಅವರ ಅದೃಷ್ಟ ರಾತ್ರೋರಾತ್ರಿ ಬದಲಾಗಿದೆ. ಬುಧವಾರ ಬೆಳಗ್ಗೆ ಲಾಟರಿಯಲ್ಲಿ ಪ್ರಥಮ ಬಹುಮಾನ 10 ಕೋಟಿ ರೂ. ಗೆಲ್ಲುವ ಮೂಲಕ ಅವರು ಕೋಟ್ಯಾಧಿಪತಿಯಾಗಿದ್ದಾರೆ. ವೃತ್ತಿಯಲ್ಲಿ ಆಟೋ ಡ್ರೈವರ್ ಆಗಿದ್ದ ನಾಸರ್ ಇದೀಗ ಬಂಪರ್ ಲಾಟರಿ ಮೂಲಕ ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಿ ಬದಲಾಗಿದ್ದಾರೆ. 

ಕೇರಳದ ಕಾರ್ತಿಕಪುರದ ರಾಜರಾಜೇಶ್ವರಿ ಲಾಟರಿ ಏಜನ್ಸಿಯಿಂದ ನಾಸರ್ ಅವರು ಲಾಟರಿ ಟಿಕೆಟ್ ಖರೀಸಿದ್ದರು. ಅವರ ಅದೃಷ್ಟ ಖುಲಾಯಿಸಿದ್ದು, ಈ ಲಾಟರಿಯಲ್ಲಿ ಪ್ರಥಮ ಬಹುಮಾನವಾಗಿ 10 ಕೋಟಿ ರೂ. ಹಣ ಗೆದ್ದಿದ್ದಾರೆ. 

ಇದನ್ನೂ ಓದಿ: ಹಾವಿನ ಈ ಒಂದು ಭಾಗವನ್ನು ತಂದು ರಹಸ್ಯವಾಗಿ ಮನೆಯಲ್ಲಿಟ್ಟರೆ ಹಣದ ಹೊಳೆ ಹರಿಯುತ್ತದೆ.!

ಕಾರ್ತಿಕಪುರದಲ್ಲಿ ಆಟೋ ಚಾಲಕನಾಗಿ ಕೆಲಸ ಮಾಡುವ ನಾಸರ್ ನಿನ್ನೆ ರಾತ್ರಿಯಷ್ಟೇ ಲಾಟರಿ ಟಿಕೆಟ್ ಖರೀದಿಸಿದ್ದರು ಅಂತಾ ಲಾಟರಿ ಏಜೆಂಟ್ ರಾಜು ಹೇಳಿದ್ದಾರೆ. ಇದೀಗ ಟಿಕೆಟ್ ಖರೀದಿ ಮಾಡಿದ ಮರುದಿನವೇ ಅವರಿಗೆ 10. ಕೋಟಿ ರೂ. ಗಳ ಬಂಪರ್ ಲಾಟರಿ ಹೊಡೆದಿದೆ. ಆಟೋ ಚಾಲಕನಿಗೆ ಬಂಪರ್‌ ಲಾಟರಿ ಹೊಡೆದಿರುವ ವಿಷಯ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದೆ. ನೆಟಿಜನ್ಸ್‌ಗಳು ಅದೃಷ್ಟ ಅಂದರೆ ಇದಪ್ಪಾ, ರಾತ್ರೋರಾತ್ರಿ ಆಟೋ ಚಾಲಕನಿಗೆ ಅದೃಷ್ಟ ಲಕ್ಷ್ಮಿಯ ರೂಪದಲ್ಲಿ 10 ಕೋಟಿ ರೂ. ಬಂತಪ್ಪಾʼ ಅಂತಾ ಕಾಮೆಂಟ್‌ ಮಾಡಿದ್ದಾರೆ.   

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News