Karnataka Urban Water Supply and Drainage Board: ಕರ್ನಾಟಕ ನಗರ ನೀರು ಸರಬರಾಜು & ಒಳಚರಂಡಿ ಮಂಡಳಿಯಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 64 ಅಸಿಸ್ಟೆಂಟ್ ಎಂಜಿನಿಯರ್ ಮತ್ತು ಫಸ್ಟ್ ಡಿವಿಶನ್ ಅಕೌಂಟ್ಸ್​ ಅಸಿಸ್ಟೆಂಟ್​ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು.


COMMERCIAL BREAK
SCROLL TO CONTINUE READING

ಹುದ್ದೆಯ ಮಾಹಿತಿ: ಒಟ್ಟು 50 ಅಸಿಸ್ಟೆಂಟ್ ಎಂಜಿನಿಯರ್(ಸಿವಿಲ್) ಮತ್ತು 14 ಫಸ್ಟ್ ಡಿವಿಶನ್ ಅಕೌಂಟ್ಸ್​ ಅಸಿಸ್ಟೆಂಟ್ (ಗ್ರೂಪ್-C) ಹುದ್ದೆಗಳು ಖಾಲಿ ಇವೆ.


ವಿದ್ಯಾರ್ಹತೆ: ಅಸಿಸ್ಟೆಂಟ್ ಎಂಜಿನಿಯರ್(ಸಿವಿಲ್)ಗೆ ಸಿವಿಲ್​​ನಲ್ಲಿ ಬಿಇ/ಬಿ.ಟೆಕ್ ಮತ್ತು ಫಸ್ಟ್ ಡಿವಿಶನ್ ಅಕೌಂಟ್ಸ್​ ಅಸಿಸ್ಟೆಂಟ್(ಗ್ರೂಪ್-C)ಗೆ ಬಿ.ಕಾಂ ಪೂರ್ಣಗೊಳಿಸಿರಬೇಕು.


ಇದನ್ನೂ ಓದಿ: CAA: ಮೋದಿ ಸರ್ಕಾರದಿಂದ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ: ‘ಲೋಕ’ ಚುನಾವಣೆಗೂ ಮುನ್ನ ಬ್ರಹ್ಮಾಸ್ತ್ರ


ವಯೋಮಿತಿ: ಕರ್ನಾಟಕ ನಗರ ನೀರು ಸರಬರಾಜು & ಒಳಚರಂಡಿ ಮಂಡಳಿ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಮಾರ್ಚ್​ 10, 2024ಕ್ಕೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 35 ವರ್ಷ ಮೀರಿರಬಾರದು.


ವಯೋಮಿತಿ ಸಡಿಲಿಕೆ: SC/ST/ಪ್ರವರ್ಗ-I ಅಭ್ಯರ್ಥಿಗಳಿಗೆ 5 ವರ್ಷಗಳು ಮತ್ತು ಪ್ರವರ್ಗ-2A/2B/3A/3B ಅಭ್ಯರ್ಥಿಗಳಿಗೆ 3 ವರ್ಷಗಳು


ಅರ್ಜಿ ಶುಲ್ಕ: SC/ST/ಪ್ರವರ್ಗ-I/ಮಾಜಿ ಸೈನಿಕರು/ಮಾನಸಿಕ ವಿಕಲಚೇತನ ಅಭ್ಯರ್ಥಿಗಳಿಗೆ 500 ರೂ., ಸಾಮಾನ್ಯ/ಪ್ರವರ್ಗ-2A/2B/3A/3B ಅಭ್ಯರ್ಥಿಗಳಿಗೆ 750 ರೂ. ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಿರುವುದಿಲ್ಲ. ಆನ್‌ಲೈನ್ ಮೂಲಕವಷ್ಟೇ ಅರ್ಜಿ ಶುಲ್ಕವನ್ನು ಪಾವತಿಸಬೇಕು.


ಉದ್ಯೋಗದ ಸ್ಥಳ: ಕರ್ನಾಟಕ


ವೇತನ: ಅಸಿಸ್ಟೆಂಟ್ ಎಂಜಿನಿಯರ್(ಸಿವಿಲ್)ಗೆ ಮಾಸಿಕ ₹43,100-83,900 ಮತ್ತು ಫಸ್ಟ್ ಡಿವಿಶನ್ ಅಕೌಂಟ್ಸ್​ ಅಸಿಸ್ಟೆಂಟ್(ಗ್ರೂಪ್-C)ಗೆ ಮಾಸಿಕ ₹27,650-52,650


ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ.


ಇದನ್ನೂ ಓದಿ: Lok Sabha Elections 2024: NDA 400 ಅಂಕ ತಲುಪುವುದು ಕಷ್ಟಸಾಧ್ಯ, ಪ್ರತಿಪಕ್ಷಗಳಿಗೆ ಎಷ್ಟು ಸ್ಥಾನ? ಇಲ್ಲಿದೆ ಶಾಕಿಂಗ್ ಸಮೀಕ್ಷೆ!


ಅರ್ಜಿ ಸಲ್ಲಿಸುವುದು ಹೇಗೆ?: ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ಎಂದು ನೇಮಕಾತಿ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಅಭ್ಯರ್ಥಿಗಳು ಈ ಲಿಂಕ್‌ https://cetonline.karnataka.gov.in/kea/ ಮೂಲಕ ನೇರವಾಗಿ ಅರ್ಜಿ ಸಲ್ಲಿಸಬಹುದು. ಇದೇ ಮಾರ್ಚ್ 14 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.