IBPS Recruitment 2024: ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್(IBPS ) ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಪ್ರೊಬೇಷನರಿ ಆಫೀಸರ್ (PO) ಮತ್ತು ಮ್ಯಾನೇಜ್ಮೆಂಟ್ ಟ್ರೈನಿ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಒಟ್ಟು 4,455 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. 


COMMERCIAL BREAK
SCROLL TO CONTINUE READING

SC ವರ್ಗಕ್ಕೆ 657, ST ವರ್ಗಕ್ಕೆ 332, OBCಗೆ 1185, EWSಗೆ 435 ಮತ್ತು UR ವರ್ಗಕ್ಕೆ 1,846 ಹುದ್ದೆಗಳನ್ನು ಹಂಚಿಕೆ ಮಾಡಲಾಗಿದೆ. ಪದವಿ ಪಡೆದ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಆಗಸ್ಟ್ 21ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಆಗಸ್ಟ್ 1, 2024ಕ್ಕೆ ಅನ್ವಯವಾಗುವಂತೆ 20-30 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳಿಗೆ ಈ ವರ್ಷದ ಸೆಪ್ಟೆಂಬರ್‌ನಲ್ಲಿ ಪರೀಕ್ಷಾ ಪೂರ್ವ ತರಬೇತಿ ನೀಡಲಾಗುವುದು.


ಇದನ್ನೂ ಓದಿ: Daily GK Quiz: ಭಾರತದ ಅತಿಹೆಚ್ಚು ಉಪ್ಪು ಉತ್ಪಾದಿಸುವ ರಾಜ್ಯ ಯಾವುದು?


ಹುದ್ದೆಗಳ ವಿವರ: ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 2,000, ಬ್ಯಾಂಕ್ ಆಫ್ ಇಂಡಿಯಾದಲ್ಲಿ 885, ಕೆನರಾ ಬ್ಯಾಂಕ್‌ನಲ್ಲಿ 750, ಪಂಜಾಬ್ ಮತ್ತು ಸಿಂಧ್ ಬ್ಯಾಂಕ್‌ನಲ್ಲಿ 360, ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನಲ್ಲಿ 260 ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ 200 ಇದಲ್ಲದೆ ಬ್ಯಾಂಕ್ ಆಫ್ ಬರೋಡಾ, ಬ್ಯಾಂಕ್ ಆಫ್ ಮಹಾರಾಷ್ಟ್ರ, ಇಂಡಿಯನ್ ಬ್ಯಾಂಕ್, ಯುಕೋ ಬ್ಯಾಂಕ್ ಮತ್ತು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿಯೂ ಹುದ್ದೆಗಳು ಖಾಲಿ ಇವೆ.


ಅರ್ಹತಾ ಮಾನದಂಡ: 2024ರಲ್ಲಿ ಮುಂಬರುವ ಐಬಿಪಿಎಸ್ ಪ್ರೊಬೇಷನರಿ ಆಫೀಸರ್ ಪರೀಕ್ಷೆಗೆ ಹಾಜರಾಗಬಯಸುವ ಅಭ್ಯರ್ಥಿಯು ಐಬಿಪಿಎಸ್ ಪಿಒ ಅರ್ಹತಾ ಮಾನದಂಡಗಳನ್ನು ಪೂರೈಸಿದ್ದಾರೆಯೇ ಎಂದು ಪರಿಶೀಲಿಸಬೇಕು. ಇದಲ್ಲದೆ ಐಬಿಪಿಎಸ್ ಪಿಒ ಅಧಿಸೂಚನೆಯಲ್ಲಿ ಪಿಒ ಪರೀಕ್ಷೆಗೆ ಒದಗಿಸಲಾದ ವಯೋಮಿತಿ ಸಡಿಲಿಕೆಯನ್ನು ಪರಿಗಣಿಸಿ. ಐಬಿಪಿಎಸ್ ಪಿಒ 2024ರ ಪರೀಕ್ಷೆಯ ನೇಮಕಾತಿಗೆ ಐಬಿಪಿಎಸ್ ನಡೆಸುವ ಪ್ರಿಲಿಮ್ಸ್, ಮೇನ್ಸ್ ಮತ್ತು ಸಂದರ್ಶನ ಸುತ್ತುಗಳ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.


ಶೈಕ್ಷಣಿಕ ಅರ್ಹತೆ: ಐಬಿಪಿಎಸ್ ಪ್ರೊಬೇಷನರಿ ಆಫೀಸರ್ ಪರೀಕ್ಷೆಗೆ ಅರ್ಹತಾ ಅವಶ್ಯಕತೆಯು ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ (ಬಿಎ, ಬಿಕಾಂ, ಬಿಎಸ್ಸಿ, B.Tech, ಅಥವಾ ತತ್ಸಮಾನ). ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ತತ್ಸಮಾನ ವಿದ್ಯಾರ್ಹತೆಯನ್ನು ಪಡೆದ ಅಭ್ಯರ್ಥಿಗಳು ಅರ್ಹರಾಗಿರುತ್ತಾರೆ. ಅರ್ಜಿದಾರರು ನೋಂದಣಿಯ ದಿನದಂದು ತಮ್ಮ ಪದವಿಯ ಅಂಕಪಟ್ಟಿ ಅಥವಾ ಪದವಿ ಪ್ರಮಾಣಪತ್ರ ಹೊಂದಿರಬೇಕು ಮತ್ತು ಐಬಿಪಿಎಸ್ ಬ್ಯಾಂಕ್-ಪಿಒ ಪರೀಕ್ಷೆಗೆ ನೋಂದಾಯಿಸುವಾಗ ತಮ್ಮ ಪದವಿಯಲ್ಲಿ ಪಡೆದ ಶೇಕಡಾವಾರು ಅಂಕಗಳನ್ನು ಒದಗಿಸಬೇಕು.


ಶುಲ್ಕ: SC/ST/ಅಂಗವಿಕಲ ಅಭ್ಯರ್ಥಿಗಳಿಗೆ 175 ರೂ. ಮತ್ತು ಇತರರು 850 ರೂ. ಅರ್ಜಿ ಶುಲ್ಕ ಪಾವತಿಸಬೇಕು. 


ಇದನ್ನೂ ಓದಿ: ' ಶೀಘ್ರದಲ್ಲೇ ಲವ್ ಜಿಹಾದ್' ಪ್ರಕರಣಗಳಿಗೆ ಅಸ್ಸಾಂನಲ್ಲಿ ಜೀವಾವಧಿ ಶಿಕ್ಷೆ-ಅಸ್ಸಾಂ ಸಿಎಂ ಘೋಷಣೆ 


ಅರ್ಜಿ ಸಲ್ಲಿಸುವುದು ಹೇಗೆ..?


  • ಮೊದಲು ibps.in ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ

  • ನಂತರ ‘ಐಬಿಪಿಎಸ್ ಪಿಒ ಅಪ್ಲೈ ಆನ್ಲೈನ್’ ಲಿಂಕ್ ಮೇಲೆ ಕ್ಲಿಕ್ ಮಾಡಿ

  • ನೋಂದಾಯಿಸಲು ‘ಹೊಸ ನೋಂದಣಿ’ ಆಯ್ಕೆ ಮಾಡಿ.

  • ನೋಂದಣಿ ಪೂರ್ಣಗೊಳಿಸಲು ನಿಮ್ಮ ಮೂಲ ವಿವರಗಳನ್ನು ನಮೂದಿಸಬೇಕು

  • ನೋಂದಣಿ ಸಂಖ್ಯೆ ಮತ್ತು ಪಾಸ್‌ವರ್ಡ್‌ ರಚಿಸಬೇಕು 

  • ನಿಮ್ಮ ಸಹಿ, ಛಾಯಾಚಿತ್ರ, ಎಡ ಹೆಬ್ಬೆರಳಿನ ಗುರುತು ಮತ್ತು ಕೈಬರಹದ ಘೋಷಣೆಯನ್ನು ಅಪ್ಲೋಡ್ ಮಾಡಿ

  • ವಿವರವಾದ ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕು  

  • ಭರ್ತಿ ಮಾಡಿದ ಅರ್ಜಿ ನಮೂನೆಯನ್ನು Submit ಮತ್ತು ಅರ್ಜಿ ಶುಲ್ಕವನ್ನು ಆನ್‌ಲೈನ್‌ಲ್ಲಿ ಪಾವತಿಸಿರಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.