Job Alert: ರೈಲ್ವೆ ಇಲಾಖೆಯಲ್ಲಿ 1,104 ಹುದ್ದೆಗಳ ನೇಮಕಾತಿ, ಇಂದೇ ಅರ್ಜಿ ಸಲ್ಲಿಸಿ
RRC NER Apprentice Recruitment 2024: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದೆ. 10ನೇ ತರಗತಿಯೊಂದಿಗೆ ಸಂಬಂಧಪಟ್ಟ ಟ್ರೇಡ್‌ನಲ್ಲಿ ಐಟಿಐ ಉತ್ತೀರ್ಣರಾದವರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಜುಲೈ 11 ಕೊನೆಯ ದಿನವಾಗಿದೆ. ಈ ಹುದ್ದೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
RRC NER Apprentice Recruitment 2024: ನಿರುದ್ಯೋಗಿಗಳಿಗೆ ಭಾರತೀಯ ರೈಲ್ವೆ ಇಲಾಖೆಯು ಗುಡ್ ನ್ಯೂಸ್ ನೀಡಿದೆ. ರೈಲ್ವೆ ನೇಮಕಾತಿ ಕೋಶ(RRC) ಈಶಾನ್ಯ ರೈಲ್ವೆ(NER)ಯಡಿ ಕಾರ್ಯಾಗಾ ಘಟಕಗಳಲ್ಲಿ ಖಾಲಿ ಇರುವ 1,104 ಆಕ್ಟ್ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಬಿಡುಗಡೆ ಮಾಡಿದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದೆ. 10ನೇ ತರಗತಿಯೊಂದಿಗೆ ಸಂಬಂಧಪಟ್ಟ ಟ್ರೇಡ್‌ನಲ್ಲಿ ಐಟಿಐ ಉತ್ತೀರ್ಣರಾದವರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಜುಲೈ 11 ಕೊನೆಯ ದಿನವಾಗಿದೆ. ಈ ಹುದ್ದೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಇದನ್ನೂ ಓದಿ: ವ್ಯಕ್ತಿಯ ಖಾಸಗಿ ಭಾಗಕ್ಕೆ ಕಚ್ಚಿದ ಹಾವು..! ಮುಂದೇನಾಯ್ತು.. ವಿಡಿಯೋ ನೋಡಿ..
ಹುದ್ದೆಗಳ ವಿವರ
1) ಮೆಕ್ಯಾನಿಕಲ್ ವರ್ಕ್ ಶಾಪ್ (ಗೋರಖ್ ಪುರ)-411 (ವಿಭಾಗವಾರು ಹುದ್ದೆಗಳು: ಫಿಟ್ಟರ್-140, ವೆಲ್ಡರ್-62, ಎಲೆಕ್ಟ್ರಿಷಿಯನ್-17, ಕಾರ್ಪೆಂಟರ್-89, ಪೇಂಟರ್-87, ಮೆಷಿನಿಸ್ಟ್-16)
2) ಕ್ಯಾರೇಜ್ ಮತ್ತು ವ್ಯಾಗನ್ (ಲಕ್ನೋ ಜಂಕ್ಷನ್)-155 (ವಿಭಾಗವಾರು ಹುದ್ದೆಗಳು: ಫಿಟ್ಟರ್-120, ವೆಲ್ಡರ್-06, ಟ್ರಿಮ್ಮರ್-06, ಕಾರ್ಪೆಂಟರ್-11, ಪೇಂಟರ್-06, ಮೆಷಿನಿಸ್ಟ್-06)
3) ಮೆಕ್ಯಾನಿಕಲ್ ವರ್ಕ್ ಶಾಪ್ (ಇಜ್ಜತ್ ನಗರ)-151 (ವಿಭಾಗವಾರು ಹುದ್ದೆಗಳು: ಫಿಟ್ಟರ್-39, ವೆಲ್ಡರ್-30, ಎಲೆಕ್ಟ್ರಿಷಿಯನ್-32, ಕಾರ್ಪೆಂಟರ್-39, ಪೇಂಟರ್-11)
4) ಕ್ಯಾರೇಜ್ ಮತ್ತು ವ್ಯಾಗನ್ (ವಾರಣಾಸಿ)-75 (ವಿಭಾಗವಾರು ಹುದ್ದೆಗಳು: ಫಿಟ್ಟರ್-66, ವೆಲ್ಡರ್-02, ಕಾರ್ಪೆಂಟರ್-03, ಟ್ರಿಮ್ಮರ್-02, ಪೇಂಟರ್-02)
5) ಕ್ಯಾರೇಜ್ ಮತ್ತು ವ್ಯಾಗನ್ (ಇಜ್ಜತ್ ನಗರ) - 64 (ವಿಭಾಗವಾರು ಹುದ್ದೆಗಳು : ಫಿಟ್ಟರ್ -64)
6) ಸಿಗ್ನಲ್ ವರ್ಕ್ ಶಾಪ್ (ಗೋರಖ್ ಪುರ ಕಂಟೋನ್ಮೆಂಟ್)-63 (ವಿಭಾಗವಾರು ಹುದ್ದೆಗಳು: ಫಿಟ್ಟರ್-31, ವೆಲ್ಡರ್-08, ಟರ್ನರ್-15, ಕಾರ್ಪೆಂಟರ್-03, ಮೆಷಿನಿಸ್ಟ್-06)
7) ಡೀಸೆಲ್ ಶೆಡ್ (ಇಜ್ಜತ್ ನಗರ)-60 (ವಿಭಾಗವಾರು ಹುದ್ದೆಗಳು: ಎಲೆಕ್ಟ್ರಿಷಿಯನ್-30, ಮೆಕ್ಯಾನಿಕಲ್ ಡೀಸೆಲ್-30)
8) ಬ್ರಿಡ್ಜ್ ವರ್ಕ್ ಶಾಪ್ (ಗೋರಖ್ ಪುರ ಕಂಟೋನ್ಮೆಂಟ್)-35 (ವಿಭಾಗವಾರು ಹುದ್ದೆಗಳು: ಫಿಟ್ಟರ್-21, ವೆಲ್ಡರ್-11, ಮೆಷಿನಿಸ್ಟ್-03)
9) ಡೀಸೆಲ್ ಶೆಡ್ (ಗೊಂಡಾ) - 90 (ವಿಭಾಗವಾರು ಹುದ್ದೆಗಳು: ಫಿಟ್ಟರ್ -13, ವೆಲ್ಡರ್ -02, ಎಲೆಕ್ಟ್ರಿಷಿಯನ್ -20, ಮೆಕ್ಯಾನಿಕ್ ಡೀಸೆಲ್ -55)
ಶೈಕ್ಷಣಿಕ ಅರ್ಹತೆ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ ಶೇ.50ರಷ್ಟು ಅಂಕಗಳೊಂದಿಗೆ SSLC ಸೇರಿದಂತೆ ಸಂಬಂಧಿತ ಟ್ರೇಡ್‌ನಲ್ಲಿ ಐಟಿಐ ಉತ್ತೀರ್ಣರಾಗಿರಬೇಕು.
ವಯೋಮಿತಿ: ಜೂನ್ 12, 2024ಕ್ಕೆ ಅನ್ವಯವಾಗುವಂತೆ ಅಭ್ಯರ್ಥಿಗಳ ವಯಸ್ಸು 15ರಿಂದ 24 ವರ್ಷಗಳ ನಡುವೆ ಇರಬೇಕು.
ಅರ್ಜಿ ಶುಲ್ಕ: ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 100 ರೂ. ಅರ್ಜಿ ಶುಲ್ಕ ಪಾವತಿಸಬೇಕು. SC/ST, ಮಹಿಳೆಯರು ಮತ್ತು ವಿಕಲಚೇತನರು ಯಾವುದೇ ರೀತಿಯ ಶುಲ್ಕವನ್ನು ಪಾವತಿಸುವಂತಿಲ್ಲ.
ಆಯ್ಕೆ ಪ್ರಕ್ರಿಯೆ: 10ನೇ ತರಗತಿ ಮತ್ತು ಐಟಿಐ ಪರೀಕ್ಷೆಗಳಲ್ಲಿ ಪಡೆದ ಅಂಕಗಳ ಮೆರಿಟ್ ಆಧಾರದ ಮೇಲೆ ಅಭ್ಯರ್ಥಿಗಳನ್ನ ಆಯ್ಕೆ ಮಾಡಲಾಗುತ್ತದೆ. ಹೆಚ್ಚಿನ ಮಾಹಿತಿಗೆ ಅಭ್ಯರ್ಥಿಗಳು ರೈಲ್ವೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.
ಇದನ್ನೂ ಓದಿ: ತನ್ನ ಮಗಳಿಗೆ ಲೈಂಗಿಕ ಕಿರುಕುಳ ನೀಡಿದ 56ರ ವ್ಯಕ್ತಿಯ ಮೂಗು ಮುರಿಯವಂತೆ ಹೊಡೆದ ತಾಯಿ..!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.