KSRTC Recruitment 2024: KSRTCಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ನೇಮಕಾತಿಯಡಿ ಬರೋಬ್ಬರಿ 13,000 ಚಾಲಕ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಈ ಹುದ್ದೆಗಳ ನೇಮಕಾತಿ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ. 


COMMERCIAL BREAK
SCROLL TO CONTINUE READING

ಚಾಮರಾಜನಗರ ಜಿಲ್ಲೆ KSRTC ಡಿಪೋ, ರಾಮನಗರ ಹಾಗೂ ಆನೇಕಲ್ ತಾಲೂಕು KSRTC ಡಿಪೋದಲ್ಲಿ ಈ ಹುದ್ದೆಗಳು ಖಾಲಿಯಿವೆ. ಆಯಾ ಬಸ್‌ ಡಿಪೋಗಳಿಗೆ ಹೊರ ಗುತ್ತಿಗೆ ಆಧಾರದಲ್ಲಿ ನೇಮಕಾತಿ ನಡೆಯಲಿದೆ ಎಂದು ನೇಮಕಾತಿ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.   


ಇದನ್ನೂ ಓದಿ: Daily GK Quiz: ಭಾರತೀಯ ಬಾಹ್ಯಾಕಾಶ ವಿಜ್ಞಾನದ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ?


ವಿದ್ಯಾರ್ಹತೆ: 7ನೇ ತರಗತಿ ಉತ್ತೀರ್ಣರಾದ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಜೊತೆಗೆ ಹೆವಿ ಮೋಟಾರ್ ವಾಹನ ಚಾಲಕರಾಗಿ 2 ವರ್ಷಗಳ ಅನುಭವ ಹೊಂದಿರಬೇಕು. ಕಡ್ಡಾಯವಾಗಿ ಕರ್ನಾಟಕದ ಮಾನ್ಯತೆ ಪಡೆದಿರುವ ಸರಕು ವಾಹನ ಬ್ಯಾಡ್ಜ್‌ ಹೊಂದಿಬೇಕು.


ವೇತನ: ಈ ಹುದ್ದೆಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ 23,000 ರೂ. ವೇತನ ನೀಡಲಾಗುತ್ತದೆ. ಇದರ ಜೊತೆಗೆ ಇಎಸ್‌ಐ ಮತ್ತು ಇಪಿಎಫ್‌ ಸೌಲಭ್ಯಗಳು ಸಹ ದೊರೆಯಲಿವೆ.


ಇದನ್ನೂ ಓದಿ: Good News: ಬೆಂಗಳೂರು-ಪಂಢರಾಪುರ ನಡುವೆ ವಿಶೇಷ ರೈಲು ಸಂಚಾರ


ಆಯ್ಕೆ ವಿಧಾನ: ಅಭ್ಯರ್ಥಿಗಳಿಗೆ ಚಾಲನೆ ತರಬೇತಿ ನೀಡಿ ಪರೀಕ್ಷೆಯನ್ನು ನಡೆಸಿ ಸಂದರ್ಶನ ಹಾಗೂ ದಾಖಲೆಗಳ ಪರಿಶೀಲನೆಯ ಬಳಿಕ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು KSRTCಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.


ಹೆಚ್ಚಿನ ಮಾಹಿತಿಗೆ ಅಭ್ಯರ್ಥಿಗಳು ಚಾಮರಾಜನಗರ ಜಿಲ್ಲೆ KSRTC ಡಿಪೋದ ದೂರವಾಣಿ ಸಂಖ್ಯೆ 8050980889, 8618876846, ರಾಮನಗರ ಹಾಗೂ ಆನೇಕಲ್ ತಾಲೂಕು KSRTC ಬಸ್‌ ಡಿಪೋದ ದೂರವಾಣಿ ಸಂಖ್ಯೆ 8050980889, 8618876846ಕ್ಕೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.